udupi ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
udupi ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಲಬಾರ್ ಗೋಲ್ಡ್ & ಡೈಮಂಡ್ಸ್ ಭಾರತೀಯ ನೃತ್ಯ ಪ್ರಕಾರಗಳನ್ನು ಕೊಂಡಾಡುವ ನೃತ್ಯಾಂಜಲಿ ಆಭರಣ ಸಂಗ್ರಹವನ್ನು ಬಿಡುಗಡೆ ಮಾಡಿದೆ.20-5-2022

 


ಮಲಬಾರ್ ಗೋಲ್ಡ್ & ಡೈಮಂಡ್ಸ್ ಭಾರತೀಯ ನೃತ್ಯ ಪ್ರಕಾರಗಳನ್ನು ಕೊಂಡಾಡುವ ನೃತ್ಯಾಂಜಲಿ ಆಭರಣ ಸಂಗ್ರಹವನ್ನು ಬಿಡುಗಡೆ ಮಾಡಿದೆ.


ದೇಶದ ಅತಿ ದೊಡ್ಡ ಚಿನ್ನ ಮತ್ತು ವಜ್ರಗಳ ರೀಟೇಲ್‌ ಜಾಲವನ್ನು ಹೊಂದಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಇದೀಗ ಭಾರತೀಯ ನೃತ್ಯಗಳಿಗೆ ಗೌರವ ಸಲ್ಲಿಸುವ ದ್ಯೋತಕವಾಗಿ 'ನೃತ್ಯಾಂಜಲಿ' ಆಭರಣ ಸಂಗ್ರಹವನ್ನು ಬಿಡುಗಡೆ ಮಾಡಿದೆ.



ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಡಿವೈನ್ ಬ್ಯಾಂಡ್‌ನ ನೃತ್ಯಾಂಜಲಿಯು ಒಂದು ಸೊಗಸಾದ ಆಭರಣ ಸಂಗ್ರಹವಾಗಿದ್ದು, ಸಾಂಪ್ರದಾಯಿಕ ಭಾರತೀಯ ನೃತ್ಯ ಪ್ರಕಾರಗಳ ಅನುಗ್ರಹವನ್ನು ಶುದ್ಧ ಚಿನ್ನದಲ್ಲಿ ಪ್ರದರ್ಶಿಸುತ್ತದೆ. ಸಂಕೀರ್ಣವಾದ ಕರಕುಶಲತೆ ಮತ್ತು ಕೆತ್ತನೆ ತಂತ್ರಗಳನ್ನು ಈ ಸಂಗ್ರಹದ ರಚನೆಗಳಲ್ಲಿ ಹೈಲೈಟ್ ಮಾಡಲಾಗಿದೆ. ಪ್ರತಿ ಆಭರಣವನ್ನೂ 100% BIS ಮಾಡಿದ ಶುದ್ಧ ಚಿನ್ನದಲ್ಲಿ ಕರಕುಶಲಗೊಳಿಸಲಾಗಿದೆ. ಅಮೂಲ್ಯವಾದ ರತ್ನದ ಹರಳುಗಳಿಂದ ಅವುಗಳ ಸೊಗಸು ಇನ್ನಷ್ಟು ಶೋಭಿಸುತ್ತಿದೆ. ನಯವಾದ ಕರ್ವಗಳು ಮತ್ತು ದೃಢತೆಯು ಆಭರಣಗಳ ವಿನ್ಯಾಸಗಳಿಗೆ ತೀಕ್ಷವಾದ ಆಯಾಮವನ್ನು ನೀಡುತ್ತವೆ. ಇದು ಶಾಸ್ತ್ರೀಯ ನೃತ್ಯ ಪ್ರಕಾರಗಳ ವಿವಿಧ ಭಂಗಿಗಳು, ರೂಪಗಳು ಮತ್ತು ಮುದ್ರೆಗಳನ್ನು ಚಿತ್ರಿಸುತ್ತದೆ. ಈ ಸಂಗ್ರಹವು ನೆಕ್ಸಸ್‌ಗಳು, ಕಿವಿಯೋಲೆಗಳು, ಉಂಗುರಗಳು ಮತ್ತು ಬಳೆಗಳು, ಜೊತೆಗೆ ಸಿಗ್ನಚರ್ ಮೋಟಿಫ್‌ಗಳನ್ನು ಒಳಗೊಂಡಿರುವ ವೈವಿಧ್ಯಮಯ ವಿನ್ಯಾಸಗಳಿಂದ ತುಂಬಿದೆ.



ಹೊಸ ಸಂಗ್ರಹದ ಕುರಿತು ಮಾತನಾಡಿದ ಮಲಬಾರ್ ಗ್ರೂಪ್‌ನ ಅಧ್ಯಕ್ಷರಾದ ಎಂ.ಪಿ. ಅಹಮ್ಮದ್, “ನಮ್ಮ ಗ್ರಾಹಕರ ಜೀವನದ ಪ್ರತಿಯೊಂದು ವಿಶೇಷ ಕ್ಷಣದ ಭಾಗವಾಗಿ ಮತ್ತು ಪ್ರತಿ ಸಂದರ್ಭಕ್ಕೂ ಅನನ್ಯವಾದ ಸಂಗ್ರಹಗಳನ್ನು ಒದಗಿಸುವಲ್ಲಿ ನಾವು ನಂಬಿಕೆ ಇರಿಸಿದ್ದೇವೆ, ಅಸಾಧಾರಣ ಗುಣಮಟ್ಟ ಮತ್ತು ಗ್ರಾಹಕ ಸೇವೆಗೂ ಬದ್ಧತೆ ಪ್ರದರ್ಶಿಸಿದ್ದೇವೆ. 'ನೃತ್ಯಾಂಜಲಿ' ಸಂಗ್ರಹದೊಂದಿಗೆ, ನಮ್ಮ ಬ್ಯಾಂಡ್‌ಗೆ ಸಂಬಂಧಿಸಿದ ಸಾಂಪ್ರದಾಯಿಕ ಮತ್ತು ಕಲಾತ್ಮಕ ಮೌಲ್ಯಗಳನ್ನು ಹೈಲೈಟ್ ಮಾಡಲು ಮತ್ತು ಭಾರತದ ಸಾಂಪ್ರದಾಯಿಕ ನೃತ್ಯಗಳಿಗೆ ಗೌರವ ಸಲ್ಲಿಸಲು ನಾವು ಬಯಸುತ್ತೇವೆ" ಎಂದರು.


ಈಗ ನೃತ್ಯಾಂಜಲಿ ಸಂಗ್ರಹವು ಕರ್ನಾಟಕದಾದ್ಯಂತ ಎಲ್ಲಾ ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ.



ಮಲಬಾರ್ ಗೋಲ್ಡ್ & ಡೈಮಂಡ್ಸ್ ಭಾರತದ ಸಾಂಪ್ರದಾಯಿಕ ಪರಂಪರೆಯನ್ನು ಆಚರಿಸುವ ಮತ್ತು ನಿರ್ದಿಷ್ಟ ಸ್ಥಳದಲ್ಲಿ ಗ್ರಾಹಕರ ಆಭರಣ ಅಗತ್ಯಗಳನ್ನು ಪೂರೈಸುವಂತೆ ವಿಶೇಷವಾಗಿ ರಚಿಸಲಾದ ಸಂಗ್ರಹಗಳಿಗೆ ಜನಪ್ರಿಯವಾಗಿದೆ. ಪ್ರತಿ ಖರೀದಿಗೆ ಈ ಬ್ಯಾಂಡ್ 10 ಮಲಬಾರ್ ಭರವಸೆಗಳನ್ನು ನೀಡುತ್ತದೆ. ಈ ಮೂಲಕ ಗ್ರಾಹಕರು ಹಣಕ್ಕೆ ಉತ್ತಮ ಮೌಲ್ಯವನ್ನು ಖಚಿತಪಡಿಸಿಕೊಳ್ಳಬಹುದು. ಹರಳಿನ ತೂಕ, ನಿವ್ವಳ ತೂಕ ಮತ್ತು ಆಭರಣದ ಹರಳಿನ ಶುಲ್ಕವನ್ನು ಸೂಚಿಸುವ ಪಾರದರ್ಶಕ ಬೆಲೆ ಟ್ಯಾಗ್, ಆಭರಣಗಳಿಗೆ ಖಚಿತವಾದ ಜೀವಿತಾವಧಿ ನಿರ್ವಹಣೆ, ಹಳೆಯ ಚಿನ್ನಾಭರಣಗಳನ್ನು ಮರುಮಾರಾಟ ಮಾಡುವಾಗ ಚಿನ್ನಕ್ಕೆ 100 % ಮೌಲ್ಯ ಚಿನ್ನದ ಶುದ್ಧತೆಯನ್ನು ಪ್ರಮಾಣೀಕರಿಸುವ 100 % 916 BIS ಹಾಲ್‌ಮಾರ್ಕಿಂಗ್, IGI ಮತ್ತು GIA ಪ್ರಮಾಣೀಕೃತ ವಜ್ರಗಳು ಜಾಗತಿಕ ಮಾನದಂಡಗಳ 28 ಅಂಶಗಳ ಗುಣಮಟ್ಟದ ಪರಿಶೀಲನೆ, ಮರುಖರೀದಿ ಗ್ಯಾರಂಟಿ, ಜವಾಬ್ದಾರಿಯುತ ಸೋರ್ಸಿಂಗ್‌ ಮತ್ತು ನ್ಯಾಯಯುತ ಕಾರ್ಮಿಕ ಅಭ್ಯಾಸಗಳನ್ನು ಖಾತ್ರಿಪಡಿಸುತ್ತದೆ.



ನಾರಾಯಣ ಗುರುಗಳ ಪಠ್ಯ ಕೈ ಬಿಟ್ಟು ಬಿಜೆಪಿ ಡೋಂಗಿ ಎಂದು ತೋರಿಸುತ್ತದೆ: ದೀಪಕ್‌ ಕೋಟ್ಯಾನ್‌ 20-5-2022

 


ಶಾಲಾ ಪಠ್ಯ ಪುಸ್ತಕದಲ್ಲಿ ಸಮಾಜ ಸುಧಾರಕ ನಾರಾಯಣ ಗುರುಗಳ ಪಠ್ಯ ಕೈ ಬಿಟ್ಟು ಬಿಜೆಪಿ ಡೋಂಗಿ ಎಂದು ತೋರಿಸುತ್ತದೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್‌ ಕೋಟ್ಯಾನ್‌ ತಿಳಿಸಿದ್ದಾರೆ.




ಉಡುಪಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ದೀಪ ಆರುವ ಮುಂಚೆ ಜೋರಾಗಿ ಉರಿಯುವಂತೆ ಬಿಜೆಪಿ ಪರಿಸ್ಥಿತಿ. ನಾರಾಯಣ ಗುರುಗಳ ವಿಚಾರ ಕೈ ಬಿಟ್ಟಿರುವುದು ಬಿಜೆಪಿಯದ್ದು ವಿನಾಶಕಾಲೆ ವಿಪರೀತ ಬುದ್ದಿ. ದೇಶದಲ್ಲಿ ತೀವ್ರ ಅಸ್ಪ್ರಶ್ಯತೆ, ಶೋಷಣೆ ಇದ್ದ ಕಾಲದಲ್ಲಿ ಪೆರಿಯರ್, ನಾರಾಯಣ ಗುರುಗಳಂತವರು ಹೋರಾಟ ನಡೆಸಿದ್ದರು. ಅವರು ಸಾಮಾಜಿಕ, ಧಾರ್ಮಿಕ ಸುಧಾರಣೆ ಮಾಡುವುದು ಕಷ್ಟದ ಕೆಲಸವಾಗಿದ್ದ ಆ ಕಾಲದಲ್ಲಿ ಶೋಷಿತ ಬಿಲ್ಲವ ಸಮಾಜವನ್ನು ಮುಂದಿಟ್ಟುಕೊಂಡು ಇತರ ಶೋಷಿತ ಸಮುದಾಯಕ್ಕೂ ದಾರಿದೀಪವಾದವರು ಎಂದರು.



ಗಣರಾಜ್ಯೋತ್ಸವ ಪೆರೇಡ್ ನಲ್ಲಿ ನಾರಾಯಣ ಗುರುಗಳ ಸ್ಥಬ್ದ ಚಿತ್ರ ಪ್ರದರ್ಶಿಸಲು ಧಿಕ್ಕರಿಸಿದ್ದು, ಇಂದು ಪಠ್ಯದಲ್ಲಿ ಗುರುಗಳ ವಿಚಾರ ಕೈ ಬಿಟ್ಟಿದ್ದಾರೆ. ಬಿಲ್ಲವ ಸಮುದಾಯದ ಬಗ್ಗೆ ಭಾಷಣ ಮಾಡಿ ಹೋಟೆಲ್ ಕೇಳಿದ ಬಿಜೆಪಿಯ ಬಿಲ್ಲವ ಮುಖಂಡರು ಹಾಗೂ ಕಾರ್ಕಳದ ಕೆಲವು ಬಿಲ್ಲವ ನಾಯಕರು ಈಗ ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.




ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರು ಸೂಚಿಸುವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಂಗಳೂರು ರೈಲ್ವೇ ನಿಲ್ದಾಣಕ್ಕೆ ನಾರಾಯಣ ಗುರುಗಳ ಮತ್ತು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯ ಅವರ ಹೆಸರಿಡುವಂತೆ ಕೇಳಲು ಆಗುವುದಿಲ್ಲವೇ? ದೇಶದಲ್ಲಿ ಹಿಂದುಳಿದ ವರ್ಗದವರನ್ನು ಮುಗಿಸುವ ಮತ್ತು ಮೇಲ್ವರ್ಗದವರನ್ನು ಜೀವಂತವಾಗಿರಿಸುವ ಉದ್ದೇಶದಿಂದ ಬಿಜೆಪಿ ಹೀಗೆ ನಡೆದುಕೊಳ್ಳುತ್ತಿದೆ ಎಂದು ದೀಪಕ್‌ ಕೋಟ್ಯಾನ್‌ ತಿಳಿಸಿದ್ದಾರೆ.




ಉಡುಪಿ:-ಜೂನ್ 1ರಿಂದ ಒಂದು ತಿಂಗಳ ಕಾಲ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ 20+5-2022


 ಉಡುಪಿ: ರಾಜ್ಯ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ ಅನ್ವಯ ಉಡುಪಿ ಜಿಲ್ಲೆಯಲ್ಲಿ ಯಾಂತ್ರೀಕೃತ ಮೀನುಗಾರಿಕೆಯನ್ನು ಜೂನ್ 1ರಿಂದ ಜುಲೈ 31ರವರೆಗೆ ಒಟ್ಟು 61 ದಿನಗಳ ಕಾಲ ನಿಷೇಧಿಸಿ ಆದೇಶಿಸಲಾಗಿದೆ.



ಜಿಲ್ಲೆಯ ಕರಾವಳಿಯಲ್ಲಿ ಯಾವುದೇ ಬಲೆ ಹಾಗೂ ಸಾಧನಗಳನ್ನು ಉಪಯೋಗಿಸಿ ಮೀನುಗಾರಿಕೆಗಾಗಿ ಯಾಂತ್ರೀಕೃತ ದೋಣಿ ಮತ್ತು 10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್‌ಬೋರ್ಡ್ ಅಥವಾ ಔಟ್‌ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮೂಲಕ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆ ಈ 61 ದಿನಗಳಲ್ಲಿ ನಿಷೇಧವಾಗಲಿದೆ.



ದೋಣಿಯನ್ನು ಸಾಗಿಸುವ ಉದ್ದೇಶಕ್ಕಾಗಿ 10 ಅಶ್ವಶಕ್ತಿಯವರೆಗಿನ ಸಾಮರ್ಥ್ಯದ ಮೋಟರೀಕೃತ ದೋಣಿ ಹಾಗೂ ಸಾಂಪ್ರದಾಯಕ ನಾಡದೋಣಿಗಳು ಕರಾವಳಿ ಮೀನುಗಾರಿಕೆಯನ್ನು ಕೈಗೊಳ್ಳಲು ಅನುಮತಿ ನೀಡಲಾಗಿದೆ.


ಆದೇಶವನ್ನು ಉಲ್ಲಂಘಿಸುವ ಮೀನುಗಾರಿಕಾ ದೋಣಿಗಳು ಮತ್ತು ಮೀನುಗಾರರು ಕಡಲ ಮೀನುಗಾರಿಕೆ ಕಾಯ್ದೆ 1986ರ ಅನ್ವಯ ವಿಧಿಸಲಾಗಿರುವ ದಂಡನೆಗಳಿಗೆ ಹೊಣೆಯಾಗುವುದಲ್ಲದೇ ಒಂದು ವರ್ಷದ ಅವಧಿಗೆ ಡೆಲಿವರಿ ಪಾಯಿಂಟ್‌ನಲ್ಲಿ ರಾಜ್ಯ ಮಾರಾಟಕರ ರಹಿತ ಡೀಸೆಲ್ ಪಡೆಯಲು ಅನರ್ಹರಾಗುತ್ತಾರೆ. 



ಹೀಗಾಗಿ ಕರಾವಳಿ ಪ್ರದೇಶದ ಮೀನುಗಾರರು ಈ ಆದೇಶವನ್ನು ಪಾಲಿಸುವಂತೆ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆಸಿದ ಡಿ.ಕೆ.ಶಿವಕುಮಾರ್19-5-2022


 ಉಡುಪಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಮುಖಂಡರ ಸಭೆ ನಡೆಸಿದರು.


ಈ ವೇಳೆ ಸಭೆಯಲ್ಲಿ ಮಾಜಿ ಶಾಸಕ ಸಭಾಪತಿ , ಡಿಸಿಸಿ ಅಧ್ಯಕ್ಷ ಅಶೋಕ್ ಕೊಡವೂರ್ , ರಮೇಶ್ ಕಾಂಚನ್ , ದಿನಕರ್ ಹೇರೂರ್ , ಮದನ್ ಕುಮಾರ್ , ಪ್ರದೀಪ್ ಶೆಟ್ಟಿ , ದಿನೇಶ್ ಪುತ್ರನ್ ಮತ್ತಿತರರು ಪಾಲ್ಗೊಂಡರು .



ಇನ್ನು ಕೆಪಿಸಿಸಿ ಅಧ್ಯಕ್ಷ ಡಿ . ಕೆ . ಶಿವಕುಮಾರ್ ಅವರು ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ಉಪ್ಪುಂದದ ಶ್ರೀ ದುರ್ಗಪರಮೇಶ್ವರಿ ದೇಗುಲದಲ್ಲಿ ಯು . ಬಿ . ಎಸ್ . ಚಾರಿಟಬಲ್ ಟ್ರಸ್ಟ್ ನಿರ್ಮಿಸಿರುವ ರಾಜಗೋಪುರ ಸಮರ್ಪಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಪಾಲ್ಗೊಂಡರು .



ಬಳಿಕ ದೇಗುಲದಲ್ಲಿ ಪೂಜೆ ಸಲ್ಲಿಸಿದರು . ಈ ಸಂದರ್ಭ ದಲ್ಲಿ ಉದ್ಯಮಿ ಯು . ಬಿ . ಶೆಟ್ಟಿ ದಂಪತಿ ಉಪಸ್ಥಿತರಿದ್ದರು .




ಉದ್ಯಾವರ ಜಯಲಕ್ಷ್ಮಿ ಸಿಲ್ಕ್ಸ್ ಗ್ರಾಹಕರಿಗೆ ನೀಡುತ್ತಿದೆ ಬಂಪರ್ ಆಫರ್19-5-2022

 


ಉಡುಪಿ: ಬ್ರ್ಯಾಂಡೆಡ್ ಬಟ್ಟೆಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅಂತಹ ಬಟ್ಟೆ ಪ್ರೀಯರಿಗೆ ಉಡುಪಿ ಉದ್ಯಾವರದ ಜನಪ್ರಿಯ ವಸ್ತ್ರ ಮಳಿಗೆ "ಜಯಲಕ್ಷ್ಮಿ ಸಿಲ್ಕ್ಸ್" ಭರ್ಜರಿ ಆಫರ್ ನೀಡುತ್ತಿದೆ.



ಈ ಭರ್ಜರಿ ಆಫರ್ ನಲ್ಲಿ ಬ್ರಾಂಡೆಡ್ ಬಟ್ಟೆಗಳ ಮೇಲೆ ಅತಿ ಹೆಚ್ಚು ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ. ಬಟ್ಟೆ ಪ್ರಿಯರು ಕಿಲ್ಲರ್ ಬ್ರಾಂಡ್ ನ 6499 ರೂ ಮೌಲ್ಯದ ಬಟ್ಟೆ ಖರೀದಿಸಿದಲ್ಲಿ 1000 ರೂ. ಹಾಗೂ 10,999 ರೂ. ಮೌಲ್ಯದ ಖರೀದಿಸಿದಲ್ಲಿ 2000 ರೂ. ಹಣ ಕಡಿತಗೊಳ್ಳಲಿದೆ. 



ಜೊತೆಗೆ 5999 ರೂ. ಮೌಲ್ಯದ ಖರೀದಿ ಮಾಡಿದರೆ 99 ರೂ. ಗೆ ದುಬಾರಿ ಬ್ಯಾಗ್ ನ್ನು ಖರೀದಿ ಮಾಡಹುದಾಗಿದೆ.


ಪೀಟರ್ ಇಂಗ್ಲೆಂಡ್ ಬ್ರಾಂಡ್ ನ 3,500 ರೂ. ಮೌಲ್ಯದ ಬಟ್ಟೆ ಖರೀದಿಗೆ 500 ರೂ. ಕ್ಯಾಶ್ ಬ್ಯಾಕ್ ಹಾಗೂ 6,000 ರೂ. ಮೌಲ್ಯದ ಬಟ್ಟೆ ಖರೀದಿಸಿದಲ್ಲಿ 1000 ರೂ. ಕ್ಯಾಶ್ ಬ್ಯಾಕ್ ಸೌಲಭ್ಯ ಪಡೆಯಬಹುದಾಗಿದೆ.



ವ್ಯಾಹುಸೆನ್ ಬ್ರ್ಯಾಂಡ್ ನ 17,999 ರೂ. ಮೌಲ್ಯದ ಬಟ್ಟೆಯನ್ನು ಖರೀದಿಸಿದರೆ 2000 ರೂ. ಹಾಗೂ 21,999 ರೂ. ಮೌಲ್ಯದ ಬಟ್ಟೆಯನ್ನು ಖರೀದಿಸಿದರೆ 3000 ರೂ ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ. ಜೊತೆಗೆ 7,799 ರೂ. ಮೌಲ್ಯದ ಬಟ್ಟೆಯನ್ನು ಖರೀದಿ ಮಾಡಿದಲ್ಲಿಯ 750 ರೂ. ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ. ಆದರೆ ಈ ಕೊಡುಗೆಯು ಸೂಟ್, ಬ್ಲೇಶರ್, ವೇಸ್ಟ್ ಕೋಟ್ ಗಳ ಖರೀದಿಗೆ ಅನ್ವಯವಾಗುವುದಿಲ್ಲ. ಮತ್ತು ಎರಡು ವಸ್ತ್ರಗಳ ಖರೀದಿಗೆ ಶೇ. 40 ಹಾಗೂ 1 ವಸ್ತ್ರ ಖರೀದಿಗೆ ಶೇ. 30 ಕ್ಯಾಶ್ ಬ್ಯಾಕ್ ದೊರೆಯಲಿದೆ.



ಯುಎಸ್ ಪೊಲೊ ಅಸನ್ ಬ್ರ್ಯಾಂಡ್ ನ 9999 ರೂ. ಮೌಲ್ಯದ ಬಟ್ಟೆ ಖರೀದಿಸಿದರೆ 2000 ರೂ. ಮತ್ತು 5999ರೂ. ಮೌಲ್ಯದ ಬಟ್ಟೆ ಖರೀದಿಸಿದರೆ 1000 ರೂ. ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ.




ಆಲೆನ್ ಸೋಲಿ ಬ್ರ್ಯಾಂಡ್ ನ 9,500 ರೂ. ಮೌಲ್ಯದ ಬಟ್ಟೆ ಖರೀದಿಗೆ 1,500 ರೂ. ಮತ್ತು 5,750 ರೂ. ಮೌಲ್ಯದ ಬಟ್ಟೆ ಖರೀದಿಗೆ 750 ಕ್ಯಾಶ್ ಬ್ಯಾಕ್ ಸೌಲಭ್ಯ ಜೊತೆಗೆ ಆಲೆನ್ ಸೋಲಿ ಬ್ರ್ಯಾಂಡ್ ನ 2 ವಸ್ತ್ರಗಳನ್ನು ಖರೀದಿಸಿದರೆ ಶೇ. 40 ಹಾಗೂ 1 ವಸ್ತ್ರ ಖರೀದಿಗೆ ಶೇ 30 ಕ್ಯಾಶ್ ಬ್ಯಾಕ್ ದೊರೆಯಲಿದೆ.




ಲೂಯಿಸ್ ಫಿಲಿಪ್ ಬ್ರ್ಯಾಂಡ್ ನ 7799 ರೂ. ಮೌಲ್ಯದ ಬಟ್ಟೆ ಖರೀದಿಸಿದರೆ 750 ರೂ. ಹಾಗೂ 17,999 ರೂ. ಮೌಲ್ಯದ ಬಟ್ಟೆ ಖರೀದಿಗೆ 2000 ರೂ. ಹಾಗೂ 22,999 ರೂ. ಮೌಲ್ಯದ ಬಟ್ಟೆ ಖರೀದಿಸಿದರೆ 3000 ರೂ. ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ.




ಲೀವಿಸ್ ಬ್ರ್ಯಾಂಡ್ ನ 5999 ರೂ. ಮೌಲ್ಯದ ಬಟ್ಟೆ ಖರೀದಿಸಿದರೆ 1000 ಕ್ಯಾಶ್ ಬ್ಯಾಕ್, 9999 ರೂ. ಮೌಲ್ಯದ ಬಟ್ಟೆ ಖರೀದಿಸಿದರೆ 2000 ಕ್ಯಾಶ್ ಬ್ಯಾಕ್, 14,999 ರೂ. ಮೌಲ್ಯದ ಬಟ್ಟೆ ಖರೀದಿಸಿದರೆ 3000 ಕ್ಯಾಶ್ ಬ್ಯಾಕ್ ದೊರೆಯಲಿದೆ.





ಜಯಲಕ್ಷ್ಮಿ ಸಿಲ್ಕ್ಸ್ ನಲ್ಲಿ ಫ್ಲೈಯಿಂಗ್ ಮೆಶಿನ್ ಬ್ರ್ಯಾಂಡ್ ನ 9999 ರೂ. ಮೌಲ್ಯದ ಬಟ್ಟೆ ಖರೀದಿಸಿದರೆ 2000 ರೂ. ಹಾಗೂ 5999 ಮೌಲ್ಯದ ಬಟ್ಟೆ ಖರೀದಿಗೆ 1000 ರೂ ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ.



ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ: ಕೃಷ್ಣಮೂರ್ತಿ ಆಚಾರ್ಯ19-5-2022


 ಉಡುಪಿ: ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರ ನಡುವೆ ಒಡಕನ್ನು ಮೂಡಿಸಿ ಅವರ ಮನಸ್ಸನ್ನು ಬೇರೆಡೆಗೆ ಸೆಳೆದು ವಿಷ ಬೀಜ ಬಿತ್ತುತ್ತಿದೆ. ಆದ್ದರಿಂದ ಜನರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ತಿಳಿಸಿದ್ದಾರೆ.



ಉಡುಪಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ನಾರಾಯಣ ಗುರುಗಳು ಗ್ರಾಮದಿಂದ ದೇಶ ಹಾಗೂ ಪ್ರಪಂಚಕ್ಕೆ ಒಂದೇ ಜಾತಿ, ಕುಲವೆಂಬ ಸಮಾನತೆ ಸಂದೇಶ ಸಾರಿದವರು. ಅಂತಹ ವ್ಯಕ್ತಿಯ ವಿಚಾರಧಾರೆಯನ್ನು ಶಾಲಾ ಪಠ್ಯದಿಂದ ತೆಗೆದು ಹಾಕಿ ಅವರಿಗೆ ಅವಮಾನ ಮಾಡಲಾಗಿದೆ. ಇದು ಖಂಡನೀಯ. ಕಳೆದ ಗಣರಾಜ್ಯೋತ್ಸವದ ಪರೇಡ್ ನಲ್ಲಿ ನಾರಾಯಣ ಗುರುಗಳ ಸ್ಥಬ್ದ ಚಿತ್ರವನ್ನು ಪ್ರದರ್ಶಿಸಲು ನಿರಾಕರಿಸಲಾಗಿತ್ತು. ಅದನ್ನು ಜನ ಇನ್ನೂ ಮರೆತಿಲ್ಲ. ಇದೆಲ್ಲದಕ್ಕೂ ಜನರು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು.





ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಮಳೆ:-ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ಜಿಲ್ಲಾಧಿಕಾರಿ ಕೂರ್ಮಾರಾವ್ 19-5-2022

 


ಉಡುಪಿ:- ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯ ಕಾರಣ ಮತ್ತು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಮೇ 20ರ ಶುಕ್ರವಾರ ಒಂದು ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರು ಆದೇಶಿಸಿದ್ದಾರೆ.








ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಆತಂಕ:-ಗ್ರಾಮಾಂತರ ಭಾಗದ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ 19-5-2022

 


ಉಡುಪಿ : ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಡೆಂಗ್ಯೂ ಭೀತಿ ಹೆಚ್ಚುತ್ತಿದೆ . ಕುಂದಾಪುರ , ಬೈಂದೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಡೆಂಗ್ಯೂ ಪ್ರಕರಣಗಳು ಪತ್ತೆಯಾಗುತ್ತಿವೆ . ಈ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲವು ಗ್ರಾಮಾಂತರ ಭಾಗದ ಶಾಲೆಗಳಿಗೆ ರಜೆ ನೀಡಲಾಗಿದೆ .





 ಡೆಂಗ್ಯೂ ಪ್ರಕರಣ ಹೆಚ್ಚುತ್ತಿರುವ ಗ್ರಾಮಗಳಲ್ಲಿ ಹತ್ತು ದಿನಗಳ ಕಾಲ ಶಾಲೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ . ಜಡ್ಕಲ್ ಮದ್ದೂರು ಭಾಗದ ಶಾಲೆಗಳಿಗೆ ರಜೆ ಆದೇಶ ಜಾರಿಯಾಗಲಿದೆ . 



ಉಡುಪಿ ಜಿಲ್ಲೆ ಯಲ್ಲಿ 152 ಡೆಂಗ್ಯೂ ಪ್ರಕರಣ ಖಚಿತಗೊಂಡಿದೆ.ಈ ವರೆಗೆ 2000 ಕ್ಕೂ ಅಧಿಕ ಶಂಕಿತ ಪ್ರಕರಣಗಳು ಪತ್ತೆಯಾಗಿದ್ದು ಪರೀಕ್ಷೆಗೆ ಒಳಪಡಿಸಲಾಗಿದೆ . ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಡೆಂಗ್ಯೂ ರೋಗ ಮಿತಿಮೀರಿದೆ . ಬೈಂದೂರು ತಾಲೂಕಿನ ಜಡ್ಕಲ್ ಗ್ರಾ.ಪಂ. ವ್ಯಾಪ್ತಿಯ ಮುದೂರು , ಉದಯನಗರ , ಬೀಸಿನಪಾರೆ , ಮುಂತಾದೆಡೆ ಡೆಂಗ್ಯೂ ಕಾಣಿಸಿಕೊಂಡಿದೆ .




ಮಲ್ಪೆ:-ಸ್ಕೂಟರ್ ಚಲಾಯಿಸುತ್ತಿರುವಾಗಲೇ ಹೃದಯಾಘಾತ ಮೀನುಗಾರ ಸಾವು 19-5-2022

 


ಮಲ್ಪೆ : ಮೀನುಗಾರಿಕೆ ಮುಗಿಸಿಕೊಂಡು ಸ್ಕೂಟರ್ ನಲ್ಲಿ ಹಿಂಬದಿ ಸವಾರನಾಗಿ ಮನೆಗೆ ತೆರಳುತ್ತಿದ್ದ ವೇಳೆ ಹೃದಯಾಘಾತವಾಗಿ ಮೀನುಗಾರನೋರ್ವ ಮೃತಪಟ್ಟ ಘಟನೆ ಮಲ್ಪೆ ಕಂಬಳತೋಟ ಎಂಬಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ . 



ಮಲ್ಪೆ ಕಂಬಳತೋಟ ನಿವಾಸಿ 32 ವರ್ಷದ ಪ್ರತಾಪ್ ಮೃತಪಟ್ಟ ಮೀನುಗಾರ . ಇವರು ಇಂದು ಬೆಳಿಗ್ಗೆ ಮೀನುಗಾರಿಕೆ ಮುಗಿಸಿಕೊಂಡು ಅಕ್ಕನ ಮಗ ಕಿರಣ್ ಎಂಬಾತನ ಸ್ಕೂಟರ್ ನಲ್ಲಿ ಹಿಂಬದಿ ಸವಾರನಾಗಿ ಮನೆಗೆ ಹೋಗುತ್ತಿದ್ದರು . ಈ ವೇಳೆ ಪ್ರತಾಪ್ ದಿಢೀರ್‌ ಅಸ್ವಸ್ಥಗೊಂಡು ಕಿರಣ್ ಮೈಮೇಲೆ ಬಿದಿದ್ದರು . ತಕ್ಷಣವೇ ಕಲ್ಯಾಣಪುರ ಗೊರಾಠಿ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು , ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು . 




ಆದರೆ ಅಲ್ಲಿ ಪರೀಕ್ಷಿಸಿದ ವೈದ್ಯರು ಪ್ರತಾಪ್ ಅದಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ . ಪ್ರತಾಪ್ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ 



. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



© all rights reserved
made with by templateszoo