sports ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
sports ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ


 ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಭಾನುವಾರ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023ರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಅವರು ಚಿನ್ನದ ಪದಕ ಗೆದ್ದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಅವರು 88.17 ಮೀಟರ್ ದೂರ ಭರ್ಜಿ ಎಸೆಯುವ ಮೂಲಕ ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ದಾಖಲೆ ನಿರ್ಮಿಸಿದ್ದಾರೆ.

2022ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದರು. ಇನ್ನು ಪಾಕಿಸ್ತಾನದ ಅರ್ಷದ್ ನದೀಮ್ ಅವರು 87.82 ಮೀಟರ್ ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದಿದ್ದಾರೆ. ಶುಕ್ರವಾರ ನಡೆದ ಜಾವೆಲಿನ್ ಥ್ರೋ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಅವರು ಮೊದಲ ಪ್ರತಯತ್ನದಲ್ಲೇ 88.77 ಮೀಟರ್ ಎಸೆಯುವ ಮೂಲಕ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ತಮ್ಮ ಅಭಿಯಾನ ಆರಂಭಿಸಿದ್ದರು.






ಭಾರತ ವೆಸ್ಟ್ ಇಂಡೀಸ್ ಸರಣಿಯ ವೇಳಾಪಟ್ಟಿ ಪ್ರಕಟ; ಜುಲೈ 12ರಿಂದ ಸರಣಿ ಶುರು


ನವದೆಹಲಿ: ಭಾರತ-ವೆಸ್ಟ್ ಇಂಡೀಸ್ ಸರಣಿಯ ವೇಳಾಪಟ್ಟಿ ಪ್ರಕಟವಾಗಿದೆ. ಕೆರಿಬಿಯನ್ ನಾಡಲ್ಲಿ ಜುಲೈ 12 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 2 ಟೆಸ್ಟ್, 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಲಿದೆ.

ಡೊಮಿನಿಕಾದಲ್ಲಿ ಜುಲೈ 12 ರಿಂದ 16 ರವರೆಗೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಹಾಗೆಯೇ 2ನೇ ಟೆಸ್ಟ್ ಪಂದ್ಯವು ಜುಲೈ 20 ರಿಂದ 24 ರವರೆಗೆ ಜರುಗಲಿದೆ. ಈ ಪಂದ್ಯಕ್ಕೆ ಟ್ರಿನಿಡಾಡ್​ನ ಓವಲ್ ಮೈದಾನ ಆತಿಥ್ಯ ವಹಿಸಲಿದೆ.

ಇನ್ನು ಮೊದಲ ಏಕದಿನ ಪಂದ್ಯವು ಜುಲೈ 27 ರಂದು ನಡೆದರೆ, 2ನೇ ಏಕದಿನ ಪಂದ್ಯ ಜುಲೈ 29 ರಂದು ಜರುಗಲಿದೆ. ಈ 2 ಪಂದ್ಯಕ್ಕೂ ಬಾರ್ಬಡೋಸ್​ನ ಕಿಂಗ್ಸ್​ಸ್ಟನ್ ಓವಲ್ ಮೈದಾನದ ಆತಿಥ್ಯವಹಿಸಲಿದೆ. 3ನೇ ಏಕದಿನ ಪಂದ್ಯವು ಆಗಸ್ಟ್ 1 ರಂದು ಟ್ರಿನಿಡಾಡ್​ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆಯಲಿದೆ.

ಹಾಗೆಯೇ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಆಗಸ್ಟ್ 3 ರಂದು, 2ನೇ ಪಂದ್ಯ ಆಗಸ್ಟ್ 6 ರಂದು, 3ನೇ ಪಂದ್ಯ ಆಗಸ್ಟ್ 8 ರಂದು ನಡೆಯಲಿದೆ. ಇನ್ನು 4ನೇ ಪಂದ್ಯವು ಆಗಸ್ಟ್ 12 ರಂದು, 5ನೇ ಟಿ20 ಪಂದ್ಯ ಆಗಸ್ಟ್ 13 ರಂದು ಫ್ಲೋರಿಡಾದಲ್ಲಿ ನಡೆಯಲಿದೆ. ಈ ಸರಣಿಗಾಗಿ ಇನ್ನೂ ಕೂಡ ಟೀಮ್ ಇಂಡಿಯಾವನ್ನು ಪ್ರಕಟಿಸಿಲ್ಲ. ಅತ್ತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಹೀನಾಯವಾಗಿ ಸೋತಿರುವ ಕಾರಣ ಭಾರತ ಟೆಸ್ಟ್ ತಂಡದಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ.

ಹಾಗೆಯೇ ಮುಂಬರುವ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಸೀಮಿತ ಓವರ್​ಗಳ ಸರಣಿಗಾಗಿ ಬಲಿಷ್ಠ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.





ಭಾರತ - ಶ್ರೀಲಂಕಾ ಪ್ರಥಮ ಟೆಸ್ಟ್ ಭಾರತಕ್ಕೆ ಭರ್ಜರಿ ಗೆಲುವು 6-3-2022

ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಗಳಿಸಿದೆ. ಮೊಹಾಲಿಯಲ್ಲಿ ಭಾರತ ಇನ್ನಿಂಗ್ಸ್ ಮತ್ತು 222 ರನ್‌ಗಳಿಂದ ಲಂಕಾ ತಂಡವನ್ನು ಮಣಿಸಿದೆ.

ಭಾರತ ಇನ್ನಿಂಗ್ಸ್ ಮತ್ತು 222 ರನ್‌ಗಳ ಜಯ

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ ನಲ್ಲಿ ಭಾರತ ಇನ್ನಿಂಗ್ಸ್ ಮತ್ತು 222 ರನ್‌ಗಳ ಜಯ ಸಾಧಿಸಿದೆ.

ಶ್ರೀಲಂಕಾ ತನ್ನ ಎರಡನೇ ಇನ್ನಿಂಗ್ಸ್‌ ನಲ್ಲಿ 178 ರನ್‌ಗಳಿಗೆ ಆಲೌಟ್ ಆಯಿತು. ನಿರೋಶನ್ ಡಿಕ್ವೆಲ್ಲಾ ಅಜೇಯ 51 ರನ್ ಗಳಿಸಿದರು. ಭಾರತ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದೆ.

ನಿನ್ನೆ ಮೊದಲ ಇನಿಂಗ್ಸ್ ನಲ್ಲಿ 43 ಓವರುಗಳಲ್ಲಿ 4 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿದ್ದ ಶ್ರೀಲಂಕಾ ಇಂದು ಆಟ ಮುಂದುವರಿಸಿತು.

ಮೊದಲ ಇನಿಂಗ್ಸ್ ನಲ್ಲಿ ಶ್ರೀಲಂಕಾ 65 ಓವರ್ ಗಳಲ್ಲಿ 174 ರನ್ ಗೆ ಆಲೌಟ್ ಆಯಿತು. ಭಾರತದ ಪರವಾಗಿ ರವೀಂದ್ರ ಜಡೇಜಾ 5, ಆಅಶ್ವಿನ್ 2, ಜಸ್ಪ್ರೀತ್ ಬುಮ್ರಾ, 2 ಮೊಹಮ್ಮದ್ ಶಮಿ 1 ವಿಕೆಟ್ ಪಡೆದರು.

ಶ್ರೀಲಂಕಾ ಎರಡನೇ ಇನಿಂಗ್ಸ್ ನಲ್ಲಿ 178 ರನ್ ಗಳಿಸಿತು. ಡಿ ಕರುಣರತ್ನೆ 27, ಎಂಜೆಲೊ ಮ್ಯಾಥ್ಯೂಸ್ 28, ಧನಂಜಯ ಡಿಸಿಲ್ವ 30, ಚರಿತ್ರೆ ಅಸಲಂಕಾ 20, ನಿರೋಷನ್ ಡಿಕ್ವಲ್ವ 51 ರನ್ ಗಳಿಸಿದರು. ಭಾರತದ ಪರವಾಗಿ ಆರ್. ಅಶ್ವಿನ್ 4, ಮೊಹಮದ್ ಶಮಿ 2, ರವೀಂದ್ರ ಜಡೇಜ 4 ವಿಕೆಟ್ ಪಡೆದರು.

ವಿರಾಟ್ ಕೊಹ್ಲಿಗೆ ಬಿಗ್ ಶಾಕ್:-ಭಾರತ ತಂಡದ ಏಕದಿನ ತಂಡಕ್ಕೆ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆ08-12-2021

ವಿರಾಟ್ ಕೊಹ್ಲಿಗೆ ಬಿಗ್ ಶಾಕ್:-ಭಾರತ ತಂಡದ ಏಕದಿನ ತಂಡಕ್ಕೆ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆ

ಭಾರತ ಕ್ರಿಕೆಟ್ ತಂಡದ ಏಕದಿನ ಮಾದರಿಗೆ ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿ ಮಾಡಿ ಬಿ.ಸಿ.ಸಿ.ಐ ಅಧಿಕೃತ ಘೋಷಣೆ ಮಾಡಿದೆ.

ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ನಾಯಕನಾಗಿ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ. ಈ ಹಿಂದೆ ವಿರಾಟ್ ಕೊಹ್ಲಿ ಟಿಟ್ವೆಟಿಂ ಮಾದರಿಯ ನಾಯಕತ್ವಕ್ಕೆ ಗುಡ್‌ಬೈ ಹೇಳಿ ಟೆಸ್ಟ್ ಹಾಗೂ ಏಕದಿನ ತಂಡಕ್ಕೆ ನಾಯಕನಾಗಿ ಮುಂದುವರಿಯುವೆ ಎಂದು ಕೊಹ್ಲಿ ಹೇಳಿದ್ದರು.

ಇದೀಗ ದಕ್ಷಿಣ ಆಫ್ರಿಕಾ ಸರಣಿಯ ಏಕದಿನ ಮಾದರಿಗೆ ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ ಮಾಡಲಾಗಿದೆ.
ವರದಿ:-ಉಡುಪಿ ಫಸ್ಟ್
© all rights reserved
made with by templateszoo