mangaluru ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
mangaluru ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೆ.14 ದ.ಕ, ಸೋಂಕು ಇಳಿಕೆ ದ.ಕ. 87, ಉಡುಪಿ 57 ಮಂದಿಗೆ ಸೋಂಕು

ದ.ಕ. ಜಿಲ್ಲೆಯಲ್ಲಿ ಇಂದು 87ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇನ್ನೊಂದೆಡೆ ಉಡುಪಿ ಜಿಲ್ಲೆಯಲ್ಲಿ 57 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ.

ದ.ಕ. ಜಿಲ್ಲೆಯ ಇಂದಿನ ಕೊರೋನಾ ವರದಿ

ಜಿಲ್ಲೆಯಲ್ಲಿ ಮತ್ತೆ 87 ಮಂದಿಯಲ್ಲಿ ಪಾಸಿಟಿವ್
110 ಮಂದಿ ಗುಣಮುಖರಾಗಿ ಬಿಡುಗಡೆ
ಇಂದು ಜಿಲ್ಲೆಯಲ್ಲಿ ಐದು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ
1576 ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು


ಉಡುಪಿ ಜಿಲ್ಲೆಯ ಇಂದಿನ ಕೋವಿಡ್ ರಿಪೋರ್ಟ್

ಜಿಲ್ಲೆಯಲ್ಲಿ ಮತ್ತೆ 57 ಮಂದಿಯಲ್ಲಿ ಪಾಸಿಟಿವ್
12 ಮಂದಿ ಗುಣಮುಖರಾಗಿ ಬಿಡುಗಡೆ
ಇಂದು ಜಿಲ್ಲೆಯಲ್ಲಿ ಯಾರೂ ಸೋಂಕಿಗೆ ಬಲಿಯಾಗಿಲ್ಲ
1805 ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು

ವರದಿ:-UDUPI FIRST

ಮಂಗಳೂರು ವಿ.ವಿ: 6ನೇ ಸೆಮಿಸ್ಟರ್ ಪರೀಕ್ಷೆ ದಿನಾಂಕ ಪ್ರಕಟ.



ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿಯ 6ನೇ ಸೆಮಿಸ್ಟರ್ ಪರೀಕ್ಷೆ ಹಾಗೂ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯನ್ನು ಆಫ್ ಲೈನ್ ಮೂಲಕ ಸೆಪ್ಟೆಂಬರ್. 30 ರಂದು ನಡೆಸಲು ಸೋಮವಾರ ನಡೆದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ನಿರ್ಧರಿಸಲಾಗಿದೆ.


ಇನ್ನು ಎರಡು ದಿನದ ಒಳಗೆ ಈ ಕುರಿತ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಲಿದೆ.  ಈ ಮುಂಚೆ ನಡೆದ 1, 3, 5 ನೇ ಸೆಮಿಸ್ಟರ್ ಪರೀಕ್ಷೆಯ ಮೌಲ್ಯಮಾಪನವನ್ನು ಕೂಡಾ ಶೀಘ್ರ ಮುಗಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

6ನೇ ಸೆಮಿಸ್ಟರ್ ಪರೀಕ್ಷೆ ಇನ್ನೂ ನಡೆಯದಿರುವ ಕಾರಣ ಸುಮಾರು 40 ಸಾವಿರ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೇರೆ ಕೋರ್ಸುಗಳಿಗೆ ಸೇರ್ಪಡೆಯಾಗಲು ಅಲ್ಲಿ ಆರನೇ ಸೆಮಿಸ್ಟರ್ ಅಂಕಪಟ್ಟಿ ಕೇಳುತ್ತಿರುವುದು ವಿದ್ಯಾರ್ಥಿಗಳಿಗೆ ದಾರಿ ತೋಚದಂತಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಆರನೇ ಸೆಮಿಸ್ಟರ್ ನಲ್ಲಿ ಹಾಕಿರುವ ತರಗತಿಗಳನ್ನು ಶೀಘ್ರ ಪೂರ್ಣಗೊಳಿಸಿ ಪರೀಕ್ಷೆ ನಡೆಸಲು ವಿ.ವಿ ತೀರ್ಮಾನಿಸಿದೆ. ಸೆಪ್ಟೆಂಬರ್ ಕೊನೆಯಲ್ಲಿ ಪರೀಕ್ಷೆ ಆರಂಭವಾದರೆ 10 ದಿನದೊಳಗೆ ಪೂರ್ಣಗೊಳಿಸಿ 15 ದಿನದೊಳಗೆ ಮೌಲ್ಯಮಾಪನ ಮುಗಿಸಿ ಅಕ್ಟೋಬರ್ ಮಧ್ಯದಲ್ಲಿ ಫಲಿತಾಂಶ ಪ್ರಕಟಿಸಬಹುದು ಎಂದು ವಿ.ವಿಯ ಚಿಂತನೆಯಾಗಿದೆ.

ವರದಿ:-UDUPI FIRST

ಸೆ.13 ದ.ಕ, ಸೋಂಕು ಇಳಿಕೆ ದ.ಕ. 115, ಉಡುಪಿ 75 ಮಂದಿಗೆ ಸೋಂಕು


ದ.ಕ. ಜಿಲ್ಲೆಯಲ್ಲಿ ಇಂದು 115ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇನ್ನೊಂದೆಡೆ ಉಡುಪಿ ಜಿಲ್ಲೆಯಲ್ಲಿ 75ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ.


ದ.ಕ. ಜಿಲ್ಲೆಯ ಇಂದಿನ ಕೊರೋನಾ ವರದಿ

ಜಿಲ್ಲೆಯಲ್ಲಿ ಮತ್ತೆ 115 ಮಂದಿಯಲ್ಲಿ ಪಾಸಿಟಿವ್
237 ಮಂದಿ ಗುಣಮುಖರಾಗಿ ಬಿಡುಗಡೆ
ಇಂದು ಜಿಲ್ಲೆಯಲ್ಲಿ ಐದು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ
1604 ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳುು


ಉಡುಪಿ ಜಿಲ್ಲೆಯ ಇಂದಿನ ಕೋವಿಡ್ ರಿಪೋರ್ಟ್

ಜಿಲ್ಲೆಯಲ್ಲಿ ಮತ್ತೆ 75 ಮಂದಿಯಲ್ಲಿ ಪಾಸಿಟಿವ್
62 ಮಂದಿ ಗುಣಮುಖರಾಗಿ ಬಿಡುಗಡೆ
ಇಂದು ಜಿಲ್ಲೆಯಲ್ಲಿ ಯಾರೂ ಸೋಂಕಿಗೆ ಬಲಿಯಾಗಿಲ್ಲ
1760 ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು

ವರದಿ:-UDUPI FIRST
© all rights reserved
made with by templateszoo