kundapura ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
kundapura ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಕುಂದಾಪುರ:-ಬೈಕ್ - ಕಾರು ನಡುವೆ ಭೀಕರ ಅಪಘಾತ ಇಬ್ಬರು ಗಂಭೀರ 25-1-2022

ರೋಡ್ ಮಾಡುತ್ತಿದ್ದ ಬೈಕ್ ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ಕುಂದಾಪುರ ಸಮೀಪದ ಸಂಗಮ್ ಸರ್ಕಲ್ ಬಳಿ  ಮಧ್ಯಾಹ್ನ ನಡೆದಿದೆ.

ದೇವರ ದರ್ಶನಕ್ಕೆ ಬಂದ ನಾಲ್ಕು ಮಂದಿ ಯುವಕರು ಹೊಸನಗರದಿಂದ ಕುಂದಾಪುರಕ್ಕೆ ಬಂದಿದ್ದರು. ಈ ವೇಳೆ ಹೊಸನಗರದಿಂದ ಸಿಗಂಧೂರು ಕ್ಷೇತ್ರಕ್ಕೆ ತೆರಳಿ, ಅಲ್ಲಿ ದೇವರ ದರ್ಶನ ಪಡೆದು ಕೋಡಿ ಬೀಚ್ ಗೆ ಹೋಗಲು ಕುಂದಾಪುರಕ್ಕೆ ಬಂದಿದ್ದರು ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಸಂಗಮ್ ಸರ್ಕಲ್ ಬಳಿ ಅಂಗಡಿಯೊಂದರಲ್ಲಿ ಕೋಡಿ ಬೀಚ್ ಹೋಗುವ ದಾರಿ ಕೇಳಿಕೊಂಡು, ರಸ್ತೆ ಕ್ರಾಸ್ ಮಾಡುತ್ತಿದ್ದರು. ಈ ವೇಳೆ ಬೈಂದೂರಿನಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರರು ಗಾಳಿಯಲ್ಲಿ ತೇಲಿಕೊಂಡು ಹೋಗಿ 20 ಅಡಿ ದೂರದಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ.

ಇನ್ನು ಗಾಯಗೊಂಡ ಬೈಕ್ ಸವಾರರನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.ಕುಂದಾಪುರ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೋಟ:-ಬೈಕ್ ಢಿಕ್ಕಿ ರಸ್ತೆ ದಾಟಲು ನಿಂತಿದ್ದ ವ್ಯಕ್ತಿ ಸಾವು7-1-2022

ಕೋಟ : ತೆಕ್ಕಟ್ಟೆ ಗ್ರಾಮದ ತೆಕ್ಕಟ್ಟೆ ಹನುಮಾನ್ ರೈಸ್ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಜ.5 ರ ಬೆಳಿಗ್ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಮೃತರ ಕುರಿತು ಮೃತರನ್ನು ಕೃಷ್ಣಾನಂದ ಶ್ಯಾನುಭಾಗ್ (85) ಎಂದು ಗುರುತಿಸಲಾಗಿದೆ.

ಬೈಕ್ ಸವಾರ ಮಹಮದ್ ಲತೀಫ್ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಕುರಿತಂತೆ ಇವರು ರಸ್ತೆ ದಾಟಲು ಡಿವೈಡರ್ ಬಳಿ ನಿಂತುಕೊಂಡಿರುವಾಗ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಬೈಕ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

 ಇದರಿಂದ ಬೈಕ್ ಸವಾರ ಹಾಗೂ ಕೃಷ್ಣಾನಂದ ಶ್ಯಾನುಭಾಗ್ ರಸ್ತೆಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಕೃಷ್ಣಾನಂದ ಶ್ಯಾನುಭಾಗ್ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು.

 ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ:-ಉಡುಪಿ ಫಸ್ಟ್

ಕುಂದಾಪುರ:-ಹಾರ್ಡ್‌ವೇರ್ ಅಂಗಡಿಗೆ ಆಕಸ್ಮಿಕ ಬೆಂಕಿ, ಅಪಾರ ಹಾನಿ26-12-2021

ಉಡುಪಿ :  ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ ಎಂಬಲ್ಲಿ ಹಾರ್ಡ್ ವೇರ್ ಅಂಗಡಿಯೊಂದು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ. ಮುಳ್ಳಿಕಟ್ಟೆಯ ನಿವಾಸಿ ಹರೀಶ್ ಜೋಗಿ ಎಂಬವರಿಗೆ ಸೇರಿರುವ ಬೆನಕ ಹಾರ್ಡ್‌ವೇರ್ ಮಳಿಗೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕೋಟ್ಯಾಂತರ ರೂಪಾಯಿ ನಷ್ಟವುಂಟಾಗಿದೆ.

ಶನಿವಾರ ರಾತ್ರಿ ಅಂಗಡಿಯೊಳಗಿಂದ ಶೆಟರ್ ಮೂಲಕ ಹೊಗೆ ಬರುತ್ತಿರುವುದನ್ನು ಮಾಲಕರು ಗಮನಿಸಿದ್ದಾರೆ. ನಂತರ ಅಂಗಡಿಯ ಬೀಗ ಒಡೆದು ಶಟರ್ ತೆಗೆಯುವಷ್ಟರಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಕಂಡುಬಂದಿದೆ, 
ಅಂಗಡಿಯೊಳಗಿದ್ದ ಪೈಂಟ್, ಟರ್ಪಂಟೈಲ್ ಮೊದಲಾದ ಆಯಿಲ್ ಬೇಸ್ಡ್ ಕಂಟೆಂಟ್ ಗಳು ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ಕೆನ್ನಾಲೆಗೆ ಹಾರ್ಡ್ ವೇರ್ ಅಂಗಡಿಗೆ ತಾಗಿಕೊಂಡಿದ್ದ ಮೆಡಿಕಲ್ ಶಾಪ್ ಹಾಗೂ ಇತರ ಅಂಗಡಿಗಳಿಗೂ ಹಾನಿಯಾಗಿದೆ. ಅಗ್ನಿ ‌ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ, 

ಈ ಬಗ್ಗೆ ಗಂಗೊಳ್ಳಿ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ:-ಉಡುಪಿ ಫಸ್ಟ್

ಕುಂದಾಪುರ:-ಇಸ್ಪೀಟು ಜುಗಾರಿ ಆಡುತ್ತಿದ್ದ ಏಳು ಮಂದಿ ಬಂಧನ25-12-2021

ಕುಂದಾಪುರ : ತಲ್ಲೂರಿನ  ಹಟ್ಟಿಯಂಗಡಿ ಕ್ರಾಸ್ ಬಳಿ ಡಿಸೆಂಬರ್. 24 ರಂದು ಇಸ್ಪೀಟು ಜುಗಾರಿ ಆಡುತ್ತಿದ್ದ ಏಳು ಮಂದಿಯನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇಸ್ಪೀಟು ಆಡುತ್ತಿರುವ ಪೈಕಿ ಬಸ್ರೂರು ಹಟ್ಟಿಕುದ್ರುವಿನ ರಾಘವೇಂದ್ರಷ(38), ಪ್ರಕಾಶ್ (40), ಗುಡ್ಡೆಯಂಗಡಿ ಕನ್ಯಾನದ ಸುರೇಂದ್ರ (27), ಹಟ್ಟಿಯಂಗಡಿ ಸಸಿಹಿತ್ಲುವಿನ ನಾಗರಾಜ್ ಪೂಜಾರಿ (45), ಸುರೇಶ್ ಪೂಜಾರಿ (49), ಕರ್ಕೀಗುಡ್ಡೆಯ ಸದಾನಂದ (28), ಕೋಟೆಬಾಗಿಲಿನ ರತ್ನಾಕರ (32) ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳಿಂದ ಒಟ್ಟು 1600 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ:-ಉಡುಪಿ ಫಸ್ಟ್

ಕುಂದಾಪುರ:-ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ವಿದ್ಯಾರ್ಥಿನಿಗೆ ಢಿಕ್ಕಿ ಹೊಡೆದ ಬೈಕ್ 20-12-2021

ಕುಂದಾಪುರ : ರಾಂಗ್ ಸೈಡಿನಿಂದ ಹೆಲ್ಮೆಟ್ ಹಾಕಿಕೊಳ್ಳದೆ ಬರುತ್ತಿದ್ದ ಸ್ಕೂಟರ್ ಸವಾರರು ಟ್ರಾಫಿಕ್ ಇಂಟರ್ ಸೆಪ್ಟರ್ ಪೊಲೀಸ್ ವಾಹನವನ್ನು ಕಂಡು ವಿದ್ಯಾರ್ಥಿನಿಯೋರ್ವಳಿಗೆ ಢಿಕ್ಕಿ ಹೊಡೆದು ಪರಾರಿಯಾದ ಘಟನೆಯ ಕುಂದಾಪುರ ಹೊಸ ಬಸ್ ಸಮೀಪ ನಡೆದಿದೆ.

ಇಲ್ಲಿನ ಹೈವೇಯಲ್ಲಿ ಹೆಲ್ಮೆಟ್ ಧರಿಸದೆ ಬರುತ್ತಿದ್ದ ವೇಳೆ
ಸ್ಕೂಟರ್ ಸವಾರರನ್ನು ಕಂಡು ಟ್ರಾಫಿಕ್ ಇಂಟರ್ ಸೆಪ್ಟರ್ ನಲ್ಲಿ ಸಾಗುತ್ತಿದ್ದ ಪೊಲೀಸರು ಸ್ಕೂಟರನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ . ಆದರೆ ಪೊಲೀಸರನ್ನು ಕಂಡೊಡನೆ ಸ್ಕೂಟರ್ ವೇಗವನ್ನು ಹೆಚ್ಚಿಸಿದ ಸವಾರ ತಪ್ಪಿಸಿಕೊಳ್ಳುವ ಭರದಲ್ಲಿ ಎದುರಿನಿಂದ ಸಾಗುತ್ತಿದ್ದ ವಿದ್ಯಾರ್ಥಿನಿಗೆ ಢಿಕ್ಕಿ ಹೊಡೆದು ರಾಮ ಮಂದಿರ ರಸ್ತೆಯ ಮೂಲಕ ಪರಾರಿಯಾಗಿದ್ದಾರೆ.

ರಸ್ತೆಗೆ ಉರುಳಿದ ವಿದ್ಯಾರ್ಥಿನಿ ನಡೆದ ಘಟನೆಯಿಂದ ಬೆಚ್ಚಿ ಬಿದ್ದಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾಳೆ. 
ವರದಿ:-ಉಡುಪಿ ಫಸ್ಟ್

ಕುಂದಾಪುರ:-ಡಿ. 12ರಂದು ಇತಿಹಾಸ ಪ್ರಸಿದ್ಧ ಹೊಂಬಾಡಿ-ಮಂಡಾಡಿ ಕಂಬಳ


ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಂಬಾಡಿ- ಮಂಡಾಡಿ ಗ್ರಾಮದ ಮಂಡಾಡಿ ಹೋರ್ವರ ಮನೆಯ ಐತಿಹಾಸಿಕ ಪ್ರಸಿದ್ಧ ಧಾರ್ಮಿಕ ಹಿನ್ನೆಲೆಯುಳ್ಳ ಕಂಬಳ ಮಹೋತ್ಸವ 
ನಡೆಯಲಿದೆ.

ಡಿಸೆಂಬರ್ 12 ಭಾನುವಾರದಂದು ಮಧ್ಯಾಹ್ನ 2 ಗಂಟೆಗೆ ಮಂಡಾಡಿಯಲ್ಲಿ ಕಂಬಳ‌ ನಡೆಯಲಿರುವುದರ ಕುರಿತು ಸ್ಪರ್ಧೆಯ ವಿವರ ಕೆಳಕಂಡಂತಿವೆ.
ಈ ಕಂಬಳದಲ್ಲಿ ಕೆನೆ ಹಲಗೆ ವಿಭಾಗ , ಹಗ್ಗದ ಹಿರಿಯ ವಿಭಾಗ , ಹಗ್ಗದ ಕಿರಿಯ ವಿಭಾಗ ಮತ್ತು ಅತಿ ಕಿರಿಯ ವಿಭಾಗ , ಕೆಸರು ಗದ್ದೆ ಓಟ ಹಾಗೂ ಇನ್ನಿತರ ಸ್ಪರ್ಧೆಗಳು ನಡೆಯಲಿದ್ದು ಸ್ಪರ್ಧೆಯಲ್ಲಿ ಜಯಶಾಲಿಯಾದವರಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಕುಂದಾಪುರ:-ಕ್ಯಾನ್ಸರ್ ಪೀಡಿತ ಮಗುವಿನ ಚಿಕಿತ್ಸೆಗೆ ಧನಸಹಾಯ5-12-2021

ಕುಂದಾಪುರ: ನಾವುಂದ ಮೂಲದ ಪುಟ್ಟ ಪುಟಾಣಿ ವಂಶಿತ್ ಬ್ಲಡ್ ಕ್ಯಾನ್ಸರ್ ನಿಂದು ಬಳಲುತ್ತಿದ್ದು ಇವರ ತಂದೆ ತಾಯಿಯ ಬಳಿ ಆ ಚಿಕಿತ್ಸೆಗೆ ಬೇಕಾದ ಅಧಿಕ ಮೊತ್ತವನ್ನು ಹೊಂದಿಸಲಾಗದೆ ದಾನಿಗಳತ್ತ ತನ್ನ ಕೈಯನ್ನು ಚಾಚಿದ್ದರು.
ಈ ಸಂದರ್ಭದಲ್ಲಿ ಸಮಾಜಸೇವಕ, ಸಮಾಜಕ್ಕೆ ಮಾದರಿಯಾಗುವ ಅನೇಕ ಕೆಲಸವನ್ನು ಮಾಡುತ್ತಿರುವ, ಜಿಲ್ಲೆಯ ಜಿಲ್ಲಾ ರಕ್ಷಕ ಎನ್ನುವ ಪ್ರಶಸ್ತಿಯನ್ನು ಮುಡಿಲಿಗೇರಿಸಿಕೊಂಡಿರುವ ಜೀವನ್ ಮಿತ್ರ ಸಂಸ್ಥೆಯ ಮಾಲಿಕರಾದ ನಾಗರಾಜ್ ಪುತ್ರನ್ ಮತ್ತು ತಂಡ ಮಗುವಿನ ಚಿಕಿತ್ಸೆಗೆ ನೆರವಾಗಿದ್ದಾರೆ.
ಶನಿವಾರ ಕುಂದಾಪುರದ ಕುಂದೇಶ್ವರ ದೀಪೋತ್ಸವದಲ್ಲಿ ಈ ಮಗುವಿಗೋಸ್ಕರ ಪೆಟ್ಟಿಗೆಯನ್ನು ಹಿಡಿದು ರಾತ್ರಿಯ ವೇಳೆ ಹಬ್ಬದ ಗಲ್ಲಿ ಗಲ್ಲಿಯಲ್ಲಿ ತಿರುಗಿ ಜೀವನ್ ಮಿತ್ರ ಸೇವಾ ಸಂಸ್ಥೆಯ ಮಾಲಿಕರಾದ ನಾಗರಾಜ್ ಪುತ್ರನ್ ಮತ್ತು ತಂಡ ಒಟ್ಟು 67762 ಸಂಗ್ರಹಿಸಿದರು.

ಸಂಗ್ರಹಿಸಿದ ಹಣವನ್ನು ಕೋಟ ಅಮೃತೇಶ್ವರಿ ದೇವಸ್ಥಾನದ ಅರ್ಚಕರ ಮುಖೇನ  ಕೋಟ  ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಜಿತ್ ದೇವಾಡಿಗ ಇವರ ಉಪಸ್ಥಿತಿಯಲ್ಲಿ ವಂಶಿತ್ ಕುಟುಂಬಕ್ಕೆ ಹಸ್ತಾಂತರಿಸಿದರು.

 ಈ ಸಂದರ್ಭದಲ್ಲಿ ಜೀವನ್ ಮಿತ್ರ ಸೇವಾ ಸಂಸ್ಥೆಯ ಮಾಲಿಕರಾದ ನಾಗರಾಜ್ ಪುತ್ರನ್ ದಿನೇಶ್ ಪುತ್ರನ್, ನಾಗೇಂದ್ರ ಪುತ್ರನ್, ಭರತ್ ಗಾಣಿಗ ಕೋಟತಟ್ಟು, ಯೋಗೆಂದ್ರ ಪುತ್ರನ್, ಶಶಿಧರ್ ಪುತ್ರನ್ ಪಡುಕರೆ, ಭಾಸ್ಕರ್ ದೇವಾಡಿಗ ಕೋಟತಟ್ಟು, ಶೇಖರ್ ಪೂಜಾರಿ ಮುಂದಿಟ್ಟು ಮತ್ತಿತರರು ಉಪಸ್ಥಿತರಿದ್ದು ಇವರ ಈ ಮಾನವೀಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ವರದಿ:-ಉಡುಪಿ ಫಸ್ಟ್

ಕುಂದಾಪುರ:-ನೆರವಿನ ನಿರೀಕ್ಷೆಯಲ್ಲಿ ಕ್ಯಾನ್ಸರ್ ಪೀಡಿತ ಮಗು3-12-2021

ನೆರವಿನ ನಿರೀಕ್ಷೆಯಲ್ಲಿ ಕ್ಯಾನ್ಸರ್ ಪೀಡಿತ ಮಗು

ಇದು ಕಲ್ಲು ಹೃದಯವನ್ನೂ ನೀರಾಗಿಸುವ ಪುಟಾಣಿ ಮಗುವಿನ ಕರುಣಾಜನಕ ಕಥೆ.. ಇಲ್ಲಿ ಈ ಮಗು ಅದೇನು ತಪ್ಪು ಮಾಡಿತ್ತೋ ಆ ದೇವರೇ ಬಲ್ಲ.. ಆದರೆ ಇನ್ನೂ ಕೂಡ ಈ ಜಗತ್ತು ಅಂದ್ರೆ ಏನು ಅಂತ ತಿಳಿಯದ ಆ ಮಗುವನ್ನು ಆ ದೇವರು ಅದಾಗಲೇ ಪರೀಕ್ಷೆಗೆ ಒಳಪಡಿಸಿದ್ದಾನೆ. ಸದಾ ಸುಳ್ಳನೇ ಹೇಳಿ, ಮೋಸ ಮಾಡುತ್ತಾ ನಮ್ಮ ನಿಮ್ಮ ನಡುವೆ ಹಾಯಾಗಿ ಜೀವನ ನಡೆಸುವವರು ಒಂದೆಡೆ ಆದರೆ ಇನ್ನು ಈ ಜಗತ್ತನ್ನೇ ಅರಿಯದ ಈ ಮಗು ಪಡುವ ಕಷ್ಟ ನೋಡಿದ್ರೆ ನಿಜಕ್ಕೂ ದೇವರು ಇದ್ದಾನಾ ಎಂಬ ಪ್ರಶ್ನೆ ಮೂಡದೇ ಇರದು. ಎಲ್ಲಾ ಮಕ್ಕಳಂತೆ ಅಮ್ಮನ ಮಡಿಲಲ್ಲಿ ಎದೆಹಾಲು ಕುಡಿದು, ಆಟವಾಡಬೇಕಿದ್ದ ಮಗು ಈಗ ಆಸ್ಪತ್ರೆಯ ಹಾಸಿಗೆಯ ಮೇಲೆ ಸಾವು ಬದುಕಿನ ಹೋರಾಟದಲ್ಲಿ ನಿಮ್ಮ ನೆರವಿನ ನಿರೀಕ್ಷೆಯಲ್ಲಿದೆ.

ಕುಂದಾಪುರದ ಯರುಕೋಣೆ ಜನತಾ ಕಾಲೋನಿ ನಿವಾಸಿಯಾಗಿರುವ ರವೀಂದ್ರ ಪೂಜಾರಿ ದಂಪತಿಗಳ 6 ವರ್ಷದ ಮಗು ವಂಶಿತ್ ಪೂಜಾರಿ ಕಳೆದ ಕೆಲವು ವರ್ಷಗಳಿಂದ ಬ್ಲಡ್ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಯಿಂದ ಬಳಲುತ್ತಿದ್ದಾನೆ. ವಂಶಿತ್ ಪೂಜಾರಿಗೆ 2 ವರ್ಷವಾಗಿದ್ದಾಗಲೇ ಬ್ಲಡ್ ಕ್ಯಾನ್ಸರ್‌ ಇರುವುದು ದೃಢವಾಗುತ್ತೆ. ಈ ಸಮಯದಲ್ಲಿ ತಂದೆ ತನ್ನಲ್ಲಿದ್ದ ಅಲ್ಪ ಸ್ವಲ್ಪ ಹಣದಿಂದ ಸಾಲ ಮಾಡಿ ಮತ್ತು ಸಹೃದಯಿ ದಾನಿಗಳ ನೆರವಿನಿಂದ ಮಗುವಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡುತ್ತಾರೆ. ಮಗುವೂ ಕೂಡ ಸಂಪೂರ್ಣ ಚೇತರಿಕೆಯಾಗುತ್ತದೆ.

ಇದೀಗ ಮಗುವಿಗೆ ಮತ್ತೆ ಬ್ಲಡ್ ಕ್ಯಾನ್ಸರ್ ಉಲ್ಬಣಗೊಂಡಿದೆ. ಇದು ರವೀಂದ್ರ ಪೂಜಾರಿ ದಂಪತಿಗಳಿಗೆ ಬರಸಿಡಿಲು ಬಡಿದಂತಾಗಿದೆ.
ರವೀಂದ್ರ ಪೂಜಾರಿ ಅವರು ಕೂಲಿ ಕೆಲಸ ಕಾರ್ಮಿಕರು, ಕೊರೋನಾ ಲಾಕ್‌ಡೌನ್ ಆದ ಬಳಿಕ ಕೂಲಿ ಕೆಲಸವೂ ಇಲ್ಲದೇ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ. ಇದೆಲ್ಲದರ ಮಧ್ಯೆ ಮಗುವಿನ ಅನಾರೋಗ್ಯ ಅವರನ್ನು ಇನ್ನಷ್ಟು ದುರ್ಬಲರನ್ನಾಗಿ ಮಾಡಿದೆ. ಮಗುವಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಯ ವೈದ್ಯರು ಒಟ್ಟು ಹತ್ತು ಲಕ್ಷ ರೂಪಾಯಿ ವೆಚ್ಚವಾಗಬಹುದು ಎಂದು ಹೇಳಿದ್ದಾರೆ.

ಇವರದು ತೀರ ಮಧ್ಯಮ ವರ್ಗದ ಕುಟುಂಬ. ಕೂಲಿ ಕೆಲಸ ಮಾಡಿ ಬಂದ ಹಣದಿಂದ ತಮ್ಮ ಕುಟುಂಬವನ್ನು ನಿರ್ವಹಿಸುತ್ತಿದ್ದವರು ಮಗುವಿನ ತಂದೆ ರವೀಂದ್ರ ಪೂಜಾರಿ. ಈಗ  ಅವರಿಗೆ ಹತ್ತು ಲಕ್ಷ ಮೊತ್ತವನ್ನು ಭರಿಸಲು ರವೀಂದ್ರ ಅವರಿಗೆ ಅಸಾಧ್ಯವಾಗಿದೆ. ಜೊತೆಗೆ ಒಬ್ಬಳು ಮಗಳೂ ಇದ್ದಾಳೆ ಅವಳ ವಿದ್ಯಾಭ್ಯಾಸದ ಖರ್ಚು ಕೂಡ ಇವರಿಗೆ ಹೊಂದಿಸಲು ಸಾಧ್ಯವಾಗದ ಪರಿಸ್ಥಿತಿ.

ಮಗು ವಂಶಿತ್ ಈಗ ಮಣಿಪಾಲದ pediatric hematology and oncology ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಿಕಿತ್ಸೆಗೆ ಒಟ್ಟು ಹತ್ತು ಲಕ್ಷ ರುಪಾಯಿ ಖರ್ಚಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಕುಟುಂಬ ಅನ್ಯ ಮಾರ್ಗವಿಲ್ಲದೆ ಸಹೃದಯಿ ದಾನಿಗಳ ನೆರವಿನ ಆಶಾಭಾವನೆಯಲ್ಲಿದ್ದಾರೆ.

ನೀವೂ ಕೂಡ ಈ ಮಗುವಿನ ನೆರವಿಗೆ ನಿಲ್ಲುತ್ತೀರಿ ಎಂಬ ಭರವಸೆ ನಮ್ಮದು. ನಿಮ್ಮಿಂದಾದಷ್ಟು ಸಹಾಯದ ನಿರೀಕ್ಷೆಯಲ್ಲಿ ಈ ಒಂದು ಕುಟುಂಬ ಇದೆ. ನಿಮ್ಮ ಒಂದು ಪುಟ್ಟ ಸಹಾಯ ವಂಶಿತ್ ಪೂಜಾರಿ ಮೊಗದಲ್ಲಿ ಮುಗುಳ್ನಗೆಗೆ ಕಾರಣವಾಗಲಿ ಎಂಬುದೇ ನಮ್ಮ ಆಶಯ.
ವರದಿ:-ಉಡುಪಿ ಫಸ್ಟ್




ಕುಂದಾಪುರ:-ವಿದೇಶಕ್ಕೆ ಹೋಗುವುದಾಗಿ ತೆರಳಿದ್ದ ವ್ಯಕ್ತಿ ನಾಪತ್ತೆ24-11-2021

ಕುಂದಾಪುರ: ಸೌದಿ ಅರೇಬಿಯಾಕ್ಕೆ ತೆರಳುವುದಾಗಿ ಹೇಳಿ ಹೋದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಕುಂದಾಪುರದಲ್ಲಿ ನಡೆದು ಬಂದಿದೆ.

ನಾಪತ್ತೆಯಾದವರ ಪೈಕಿ ಮಣೂರು ಮೂಲದ ಕೋಟತಟ್ಟು ನಿವಾಸಿ ಮೊಹಮ್ಮದ್ ಜಲೀಲ್(36) ಎಂದು ಗುರುತಿಸಲಾಗಿದೆ.
ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಇವರು, ಅ.17ರಂದು ಊರಿಗೆ ಬಂದಿದ್ದರು.

ಬಳಿಕ ಸೌದಿ ಅರೇಬಿಯಾಕ್ಕೆ ವಾಪಾಸ್ಸು ಹೋಗುವುದಾಗಿ ಹೇಳಿ ಹೋದ ಜಲೀಲ್‌ರನ್ನು ಅ.30 ರಂದು ಅವರ ಮಗ ಕುಂದಾಪುರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬಿಟ್ಟು ಬಂದಿದ್ದರು. 

ಆದರೆ ಜಲೀಲ್ ಸೌದಿ ಅರೇಬಿಯಾಕ್ಕೂ ಹೋಗದೇ ವಾಪಾಸು ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ವರದಿ:-ಉಡುಪಿ ಫಸ್ಟ್

ಕುಂದಾಪುರ:-ಕೊಡಿ ಹಬ್ಬಕ್ಕೆ ಪೊಲೀಸ್ ಇಲಾಖೆ ಭರದ ಸಿದ್ದತೆ

ಕುಂದಾಪುರ: ಕೊಡಿಹಬ್ಬಕ್ಕೆ ಇನ್ನೇನು ಬೆರಳೆಣಿಕೆಯ ದಿನಗಳಿದ್ದು ಕೊಟೇಶ್ವರ ಗ್ರಾಮದ ಕೋಟಿಲಿಂಗೇಶ್ವರ ದೇವಸ್ಥಾನದ 2021ನೇ ಸಾಲಿನ ವಾರ್ಷಿಕ ರಥೋತ್ಸವ ಕಾರ್ಯಕ್ರಮವು ನವೆಂಬರ್ 18-20ರವರೆಗೆ ನಡೆಯಲಿದೆ.
ಜನರು ಭಾಗವಹಿಸುವ ಸಾಧ್ಯತೆ 
ವಾರ್ಷಿಕವಾಗಿ ಜರುಗುವ ರಥೋತ್ಸವದಲ್ಲಿ ಸುಮಾರು 50 ರಿಂದ 60 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇರುವುದರಿಂದ  ಸಂಚಾರ ನಿಯಂತ್ರಣದ ದೃಷ್ಟಿಯಿಂದ ವಾಹನಗಳು ಪಾರ್ಕಿಂಗ್ ಗೆ ಸ್ಥಳ ಗುರುತಿಸಿ ಸರಿಯಾದ ವ್ಯವಸ್ಥೆ ಮಾಡಲಾಗಿದೆ.

ಈ ಕುರಿತು ಪೋಲೀಸ್ ಇಲಾಖೆ ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿದ್ದು , ಬರುವ ಭಕ್ತಾದಿಗಳ ವಾಹನಗಳ ನಿಲುಗಡೆ ವ್ಯವಸ್ಥೆಗೆ  ಈಗಾಗಲೇ ಪೋಲಿಸ್ ಇಲಾಖೆ ಗುರುತಿಸಿದ ನಿಗಧಿತ ವಿವಿಧ ಸ್ಥಳಗಳ ವಿವರ ಈ ಕೆಳಗಿನಂತಿವೆ.

ಗೋಪಾಡಿ, ಬೀಜಾಡಿ ಕಡೆಯಿಂದ ಬರುವ ವಾಹನಗಳಿಗೆ ಗುರುಪ್ರಸಾದ್ ಹೊಟೇಲ್ ಸಮೀಪ ಕೊಟೇಶ್ವರ  , ಆರ್ಯ ಹೊಟೇಲ್ ಬಳಿ ಕೋಟೇಶ್ವರ ಮತ್ತು ಸಹನಾ ಹೋಟೆಲ್ ಪಾರ್ಕಿಂಗ್ ಅಂಕದಕಟ್ಟೆ  ಕೊಟೇಶ್ವರ ಇಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಕುಂಭಾಶಿ, ತೆಕ್ಕಟ್ಟೆ, ಉಡುಪಿ ಕಡೆಯಿಂದ ಬರುವ  ವಾಹನಗಳಿಗೆ ಹೈಸ್ಕೂಲ್ ಬಳಿ ಕೋಟೇಶ್ವರ , ಕೋಸ್ಟಲ್ ಕ್ರೋನ್ ಕಾಂಪ್ಲೆಕ್ಸ್ ಬಳಿ ಕೋಟೇಶ್ವರ, ಜೂನಿಯರ್ ಕಾಲೇಜು ಹಿಂಭಾಗ ಕೋಟೇಶ್ವರ , ಮತ್ತು  ಮಹಾಲಕ್ಷ್ಮಿ ಶೋ ರೂಮ್ ಬಳಿ ಕೋಟೆಶ್ವರದಲ್ಲಿ ಈ ಕಡೆಗಳಿಂದ ಬರುವ ಭಕ್ತಾದಿಗಳಿಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

 ಗೋಪಾಡಿ , ಬೀಜಾಡಿ ಕಡೆಯಿಂದ ಬರುವ ದ್ವಿಚಕ್ರ ವಾಹನಗಳಿಗೆ  ಕೋಟೇಶ್ವರ ನೀರಿನ ಟ್ಯಾಂಕ್ ಬಳಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ವರದಿ:-ಉಡುಪಿ ಫಸ್ಟ್

ಕುಂದಾಪುರ:-ಮಾತಿಗೆ ಮಾತು ಬೆಳೆದು ಹಲ್ಲೆ

ಕುಂದಾಪುರ: ದೇವಸ್ಥಾನ ವಠಾರದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿರುವ ಘಟನೆ ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ಸೌಕೂರು ದೇವಸ್ಥಾನದಲ್ಲಿ ಇಂದು ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯ ಪ್ರತಾಪ್ ದೇವಾಡಿಗ(31) ಎಂದು ತಿಳಿದುಬಂದಿದೆ. 

ಪ್ರತಾಪ್ ದೇವಾಡಿಗ ರವರು ಪೋಲಿಸರಿಗೆ ಈ ಕುರಿತು ದೂರು ನೀಡಿದ್ದಾರೆ.

ನವೆಂಬರ್ 13ರಂದು ಪ್ರತಾಪ್ ದೇವಾಡಿಗ ಅವರು ಸಂಜೆ ವೇಳೆ ಸೌಕೂರು ದೇವಸ್ಥನಕ್ಕೆ ತೆರಳಿದ್ದರು. ಈ ವೇಳೆ ದೇವಸ್ಥಾನದಲ್ಲಿದ್ದ ಹರೀಶ್ ದೇವಾಡಿಗ ಎಂಬಾತನು ದೂರುದಾರರಿಗೆ ಗಲಾಟೆ ಮಾಡುವುದಿದ್ದರೆ  ಎದುರಿಗೆ ಬಾ ಎಂದು ಹೇಳಿದ್ದು ಆ ಸಂದರ್ಭದಲ್ಲಿ ದೂರುದಾರನು  ನೋವು ಏನು ತಪ್ಪು ಮಾಡದೆ ಯಾರಿಗೂ ಏನನ್ನೂ ಮಾಡುವುದಿಲ್ಲ  ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಆಕ್ರೋಷಗೊಂಡ ಹರೀಶ್ ದೇವಾಡಿಗ ದೂರುದಾರರಾದ ಪ್ರತಾಪ್ ದೇವಾಡಿಗರವರ ಮೇಲೆ ಏಕೆ ಏಕಿ ಹಲ್ಲೆ ನಡೆಸಿದ್ದಾನೆ. ಮಾತ್ರವಲ್ಲದೆ ಗಲಾಟೆಯನ್ನು ಮಾಡಿಕೊಳ್ಳುವ ಸಂದರ್ಭದಲ್ಲಿ ದೇವಸ್ಥಾನದ ವಠಾರದಲ್ಲಿರುವವರಿಗೆ ಮತ್ತು ನೋಡಲು ಬಂದವರನ್ನು ಕಂಡು ದೂರುದಾರ ಪ್ರತಾಪ್ ರವರಿಗೆ ಜೀವಬೆದರಿಕೆಯನ್ನೊಡ್ಡಿ ಹೋಗಿದ್ದಾನೆ.

ಈ ಕುರಿತು ಸದ್ಯಾ ಹಲ್ಲೆಗೆ ಒಳಗಾದ ವ್ಯಕ್ತಿ ಪ್ರತಾಪ್ ರವರು ನೀಡಿದ  ದೂರಿನಂತೆ ಕುಂದಾಪುರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ:-ಉಡುಪಿ ಫಸ್ಟ್
© all rights reserved
made with by templateszoo