ಉಡುಪಿ:-ಕೆ.ಡಿ.ಪಿ ಸಭೆಯಲ್ಲಿ ಸರಿಯಾಗಿ ಮಾಹಿತಿ ನೀಡದ ಅಧಿಕಾರಿಗಳನ್ನು ಇಂಧನ ಸಚಿವ ಸುನಿಲ್ ಕುಮಾರ್ ತರಾಟೆಗೆ ತೆಗೆದುಕೊಂಡ ಘಟನೆ ಕಾರ್ಕಳದಲ್ಲಿ ನಡೆದಿದೆ.
ಇಂದು ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ಕೆಡಿಪಿ ಸಭೆ ಆಯೋಜನೆಗೊಂಡಿತ್ತು, ಈ ಸಭೆಯಲ್ಲಿ, ಜಲಜೀವನ್ ಗೆ ಸಂಬಂಧಿಸಿ ಸಚಿವರು ಆ ಇಲಾಖೆಯ ಅಧಿಕಾರಿಯಿಂದ ಮಾಹಿತಿ ಬಯಸಿದ್ದರು. ಈ ವೇಳೆ ಅಧಿಕಾರಿ ನೀಡಿದ ಉತ್ತರದಲ್ಲಿ ಸಚಿವರಿಗೆ ತೃಪ್ತಿ ಆಗಿಲ್ಲ.
ಹೀಗಾಗೀ ಇನ್ನು ಇದಕ್ಕೆ ಗರಂ ಆದ ಸಚಿವರು ನನಗೆ ಪ್ರಾಕ್ಟಿಕಲ್ ಏನಾಗಿದೆ ಅದು ಬೇಕು. ಕಾಲಹರಣಕ್ಕೆ ಸಭೆಗೆ ಬರಬೇಡಿ. ಸಭೆಗೆ ಬರುವಾಗ ವಾಸ್ತವಾಂಶ ವರದಿ ತನ್ನಿ. ಪೂರ್ಣ ಮಾಹಿತಿ ನನಗೆ ಬೇಕು. ಯಾಕೆ ತಪ್ಪು ರಿಪೋರ್ಟ್ ನೀಡುತ್ತೀರಿ ನೀವು ಇಲಾಖೆಯ ಕೆಲ್ಸ ಮಾಡೋಕೆ ಆನ್ ಫಿಟ್ ಇದ್ದೀರಿ ಅಂತ ಅಧಿಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.