Udupi kota ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Udupi kota ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಕೋಟ: ತರಕಾರಿ ಸಾಗಿಸುತ್ತಿದ್ದ ಪಿಕಪ್ ಪಲ್ಟಿ ; ಸ್ಥಳದಲ್ಲೇ ಮೃತಪಟ್ಟ ಕ್ಲೀನರ್



ಕೋಟ : ಬೊಲೆರೋ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಮಣೂರು ರಾಜಲಕ್ಷ್ಮಿ ಸಭಾಭವನದ ಎದುರು ಸೋಮವಾರ ಮುಂಜಾನೆ ನಡೆದಿದ್ದು, ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 


ಬಿಜಾಪುರದಿಂದ ಮಂಗಳೂರು ಎಪಿಎಂಸಿಯತ್ತ ತರಕಾರಿ ಸಾಗಾಟ ಮಾಡುತಿದ್ದ ಪಿಕಪ್ ವಾಹನ ಕೋಟ ಮಣೂರು ಸಮೀಪ ರಸ್ತೆಯ ಪಕ್ಕದಲ್ಲಿರುವ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ವಾಹನದ ಒಳಗಿದ್ದ ಕ್ಲೀನರ್ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. 

ಮೃತನು ಮಹಾರಾಷ್ಟ್ರ  ಮೂಲದ ಸಾಂಗ್ಲಿಯದ ದಿನೇಶ್ ಚಂದ್ರಶೇಖರ ಮುಂಚಾಂಡಿ (20) ಎಂದು ಗುರುತಿಸಲಾಗಿದೆ.
ಸದ್ಯ ಈ ಬಗ್ಗೆ ಕೋಟ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ:-UDUPI FIRST

ಕೋಟ ಆಸಿಡ್ ಕೊಂಡೊಯ್ಯುತ್ತಿದ್ದ ಟ್ಯಾಂಕರ್ ಪಲ್ಟಿ


ಉಡುಪಿ ಸೆಪ್ಟೆಂಬರ್ 05: ರಾಷ್ಟ್ರೀಯ ಹೆದ್ದಾರಿ 66 ಮಣೂರುನಲ್ಲಿ  ಹೈಡ್ರೋ ಕ್ಲೋರಿಕ್ ಆಸಿಡ್ ಕೊಂಡೊಯ್ಯುತ್ತಿದ್ದ ಟ್ಯಾಂಕರ್ ಒಂದು  ಪಲ್ಟಿಯಾಗಿದ್ದು, ಟ್ಯಾಂಕರ್ ನಲ್ಲಿದ್ದ ಚಾಲಕ ಹಾಗೂ ನಿರ್ವಾಹಕ‌ ಅಪಾಯದಿಂದ ಪಾರಾಗಿದ್ದಾರೆ.


ಕಾರವಾರದಿಂದ ಮಂಗಳೂರು ಹೈಡ್ರೋ ಕ್ಲೋರಿಕ್ ಆಸಿಡ್ ತುಂಬಿಸಿಕೊಂಡು ಹೊರಟಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಕೋಟ ಮಣೂರು ಬಳಿ ಪಲ್ಟಿಯಾಗಿದೆ.

ಘಟನೆಯಲ್ಲಿ ಚಾಲಕ ಹಾಗೂ ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ. ಟ್ಯಾಂಕರ್ ಪಲ್ಟಿ ಹೊಡೆದ ಹಿನ್ನಲೆಯಲ್ಲಿ ಹೈಡ್ರೋ ಕ್ಲೋರಿಕ್ ಆಸಿಡ್ ಗ್ಯಾಸ್ ರೂಪದಲ್ಲಿ ಮುಂಜಾನೆಯಿಂದಲೂ ಲೀಕ್ ಆಗುತ್ತಿದೆ. ಸದ್ಯ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಆಗ್ನಿಶಾಮಕ ದಳದವರಿಂದ ಕಾರ್ಯಚರಣೆ ನಡೆಸಿದ್ದು, ಲಿಕೇಜ್ ಮುಂದುವರಿದಂತೆ ಆಗ್ನಿಶಾಮಕ ದಳದ ಸಿಬ್ಬಂದಿಗಳು ತಡೆದಿದ್ದಾರೆ.

 ವರದಿ:-UDUPI FIRST
© all rights reserved
made with by templateszoo