Udupi Mangalore ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Udupi Mangalore ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಕರಾವಳಿಯಲ್ಲಿ ಇಂದು ಕ್ರೈಸ್ತರ ಮೊಂತಿ ಫೆಸ್ತ್


ಉಡುಪಿ:- ಇಂದು ಮೇರಿ ಮಾತೆಯ ಜನ್ಮ ದಿನವಾದ ಹಿನ್ನೆಲೆ ಕರಾವಳಿಯಲ್ಲಿ ಕ್ರೈಸ್ತರು ತಮ್ಮ ವಿಶೇಷ ಹಬ್ಬವಾದ ಮೊಂತಿ ಫೆಸ್ಟ್ ಆಚರಿಸುತ್ತಾರೆ. ಈ ಹಬ್ಬವನ್ನು ಕ್ರೈಸ್ತರು ಹೊಸ ಬೆಳೆಯ ಹಬ್ಬ ಅಥವಾ ತೆನೆಹಬ್ಬವಾಗಿ ಆಚರಿಸುತ್ತಾರೆ.


ಕೊರೊನಾ ಕಾರಣದಿಂದ ಉಡುಪಿ ಧರ್ಮಪ್ರಾಂತ್ಯದಲ್ಲಿ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದ್ದು ಎಲ್ಲ ಚರ್ಚ್‌ಗಳು ಸರಕಾರ ಸೂಚಿಸಿದ ನಿಯಮಾವಳಿಗಳನ್ನು ಪಾಲಿಸಿಕೊಂಡು ಹಬ್ಬದ ಆಚರಣೆ ನಡೆಸಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ| ಡಾ| ಜೆರಾಲ್ಡ್ ಐಸಾಕ್‌ ಲೋಬೊ ಎಲ್ಲ ಚರ್ಚ್‌ಗಳ ಧರ್ಮಗುರುಗಳಿಗೆ ಸೂಚನೆ ನೀಡಿದ್ದಾರೆ.

ಕೋವಿಡ್‌ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಸಾರ್ವಜನಿಕ ಮೆರವಣಿಗೆ, ಸಾರ್ವಜನಿಕವಾಗಿ ಹೂ ಅರ್ಪಣೆ ಸಹಿತ ಎಲ್ಲ ಕಾರ್ಯಕ್ರಮಗಳನ್ನು ನಿಷೇಧಿಸಿದ್ದು ಚರ್ಚ್‌ನ ಒಳಗಡೆ ಮಾತ್ರ ಹೂ ಅರ್ಪಣೆ ಮಾಡುವುದರೊಂದಿಗೆ ಹೊಸ ತೆನೆಯ ಆಶೀರ್ವಚನವನ್ನು ನಡೆಸಲಾಗುತ್ತದೆ. ಚರ್ಚ್‌ನಲ್ಲಿ ಆಶೀರ್ವಚಿಸಿದ ಹೊಸ ತೆನೆಯನ್ನು ಪ್ರತೀ ಮನೆಗೆ ಧರ್ಮಗುರುಗಳು ಹಂಚಲಿದ್ದಾರೆ. ಅದನ್ನು ಮನೆಗೆ ತಂದು ಪ್ರಾರ್ಥನೆ ಮಾಡುವುದರ ಮೂಲಕ ಹಾಲು ಅಥವಾ ಪಾಯಸದೊಂದಿಗೆ ಹೊಸ ಅಕ್ಕಿಯ ಊಟವನ್ನು ಮಾಡಲಾಗುತ್ತದೆ.
ವರದಿ: Udupi first
© all rights reserved
made with by templateszoo