State ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
State ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ರಸ್ತೆ ಜಗಳ ಪ್ರಕರಣ:-ಕಾಂಗ್ರೆಸ್ ನಾಯಕ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದುಗೆ 1ವರ್ಷ ಜೈಲು 19-5-2022

 


ಮೂರು ದಶಕಗಳ ಹಿಂದಿನ ರಸ್ತೆ ಜಗಳ ಪ್ರಕರಣದಲ್ಲಿ ನವಜೋತ್ ಸಿಂಗ್ ಸಿಧು ಅವರಿಗೆ ಇಂದು ಸುಪ್ರೀಂಕೋರ್ಟ್ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಇದು ಕಠಿಣ ಕಾರಾಗೃಹ ಶಿಕ್ಷೆಯಾಗಿರಲಿದೆ ಎಂದು ಕೋರ್ಟ್ ತೀರ್ಪು ನೀಡಿದೆ.


1988ರಲ್ಲಿ ನಡೆದ ರಸ್ತೆ ಕಲಹದಲ್ಲಿ ಪಟಿಯಾಲದ ನಿವಾಸಿ ಗುರ್ನಾಮ್ ಸಿಂಗ್ ಎಂಬುವವರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ 2018ರ ಮೇ ತಿಂಗಳಲ್ಲಿ ಅವರನ್ನು ದೋಷಮುಕ್ತಗೊಳಿಸಿ ನೀಡಿದ್ದ ತನ್ನ ಆದೇಶವನ್ನು ಮರು ಪರಿಶೀಲನೆ ನಡೆಸಿದ ಸುಪ್ರೀಂಕೋರ್ಟ್, ಪರಿಷ್ಕೃತ ತೀರ್ಪು ನೀಡಿದೆ.



ಆದೇಶದ ಪ್ರಕಾರ ಸಿಧು ಅವರನ್ನು ಪಂಜಾಬ್ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಳ್ಳಲಿದ್ದಾರೆ. ಈ ಹಿಂದೆ ಸಿಧು ಅವರಿಗೆ ಕೇವಲ 1000 ರೂ ದಂಡ ವಿಧಿಸಿ, ಬಂಧನದಿಂದ ವಿನಾಯಿತಿ ನೀಡಲಾಗಿತ್ತು. ಆದರೆ ಈಗ ಐಪಿಸಿ ಸೆಕ್ಷನ್ 323ರ ಅಡಿ ಗರಿಷ್ಠ ಪ್ರಮಾಣದ ಶಿಕ್ಷೆ ವಿಧಿಸಲಾಗಿದೆ.




ಈ ಪ್ರಕರಣದಲ್ಲಿ ಸಿಧು ಅವರು ಖಂಡನಾರ್ಹ ನರಹತ್ಯೆ ಮಾಡಿದ್ದಾರೆ ಎಂದು ಪರಿಣಿಸಿದ್ದ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್, ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಅದರ ವಿರುದ್ಧದ ಮೇಲ್ಮನವಿ ಅರ್ಜಿಯನ್ನು ಪುರಸ್ಕರಿಸಿದ್ದ ಸುಪ್ರೀಂಕೋರ್ಟ್, 2018ರ ಮೇ 15ರಂದು ಆದೇಶವನ್ನು ರದ್ದುಗೊಳಿಸಿತ್ತು. ಆದರೆ, ಹಿರಿಯ ನಾಗರಿಕರಿಗೆ ಗಾಯ ಉಂಟುಮಾಡಿದ್ದರಲ್ಲಿ ಅವರು ತಪ್ಪಿತಸ್ಥ ಎಂದು ಹೇಳಿತ್ತು.



65 ವರ್ಷದ ವ್ಯಕ್ತಿಗೆ ನವಜೋತ್ ಸಿಂಗ್ ಸಿಧು ಸ್ವಯಂಪ್ರೇರಣೆಯಿಂದ ಹಲ್ಲೆ ನಡೆಸಿ ಹಾನಿ ಮಾಡಿದ್ದಾರೆ ಎಂದು ಕೋರ್ಟ್ ಪರಿಗಣಿಸಿದ್ದರೂ, ಅವರಿಗೆ ಜೈಲು ಶಿಕ್ಷೆ ವಿಧಿಸದೆ 1,000 ರೂ ದಂಡ ಮಾತ್ರ ವಿಧಿಸಿತ್ತು. ಮೃತ ವ್ಯಕ್ತಿಯ ಕುಟುಂಬದವರು ಇದರ ವಿರುದ್ಧ ಸಲ್ಲಿಸಿದ್ದ ಪರಾಮರ್ಶೆ ಅರ್ಜಿಯನ್ನು ವಿಚಾರಣೆ ನಡೆಸಲು 2018ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್ ಒಪ್ಪಿಕೊಂಡು, ಸಿಧು ಅವರಿಗೆ ನೋಟಿಸ್ ನೀಡಿತ್ತು.



ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ 19-5-2022


 ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫ‌ಲಿತಾಂಶ ಗುರುವಾರ ಮಧ್ಯಾಹ್ನ 12.30ಕ್ಕೆ ಹೊರ ಬಿದ್ದಿದೆ. 85.63% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಬಾರಿ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಹುಡುಗರು 81.30 % ಉತ್ತೀರ್ಣರಾಗಿದ್ದಾರೆ.


ಪರೀಕ್ಷೆ ಬರೆದ 8 ಲಕ್ಷದ 53 ಸಾವಿರದ 436 ವಿದ್ಯಾರ್ಥಿಗಳ ಪೈಕಿ, ಈ ಬಾರಿ 7 ಲಕ್ಷದ 30 ಸಾವಿರದ 881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.



145 ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದ ಸಾಧನೆ ಮಾಡಿದ್ದಾರೆ. 329 ವಿದ್ಯಾರ್ಥಿಗಳು 624 ಅಂಕ ಪಡೆದಿದ್ದರೆ, 472 ವಿದ್ಯಾರ್ಥಿಗಳು 623 ಅಂಕ ಪಡೆದಿದ್ದಾರೆ.


ಒಟ್ಟು 40,061 ಮಂದಿ ವಿದ್ಯಾರ್ಥಿಗಳು ಗ್ರೇಸ್ ಮಾರ್ಕ್ ಪಡೆದು ಪಾಸಾಗಿದ್ದಾರೆ. ಅವರಲ್ಲಿ 35,931 ವಿದ್ಯಾರ್ಥಿಗಳು ಕೇವಲ ಒಂದು ವಿಷಯದಲ್ಲಿ ಗ್ರೇಸ್ ಮಾರ್ಕ್ ಪಡೆದಿದ್ದಾರೆ. (ಮೂರು ಅಂಕಗಳನ್ನು ಗ್ರೇಸ್ ರೂಪದಲ್ಲಿ ನೀಡಲಾಗುತ್ತದೆ)



ಜಿಲ್ಲಾವರು ಫಲಿತಾಂಶದಲ್ಲಿ ಗ್ರೇಡ್ ವ್ಯವಸ್ಥೆಯನ್ನು ತರಲಾಗಿದ್ದು, ಎ ಗ್ರೇಡ್ ನಲ್ಲಿ 32 ಜಿಲ್ಲೆಗಳಿದ್ದರೆ, 2 ಜಿಲ್ಲೆಗಳು ಬಿ ಗ್ರೇಡ್ ಪಡೆದಿವೆ. 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ.


ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಫ‌ಲಿತಾಂಶ ಪ್ರಕಟಿಸಿದ್ದು, ಮಧ್ಯಾಹ್ನ 1 ಗಂಟೆಗೆ ಬಳಿಕ ವಿದ್ಯಾರ್ಥಿಗಳಿಗೆ ಮಂಡಳಿ ವೆಬ್‌ಸೈಟ್‌ನಲ್ಲಿ ಫ‌ಲಿತಾಂಶ ಲಭ್ಯವಾಗಿದೆ. ವಿದ್ಯಾ ರ್ಥಿಗಳು ನೋಂದಣಿ ಮಾಡಿರುವ ಮೊಬೈಲ್‌ಗ‌ಳಿಗೂ ಫ‌ಲಿತಾಂಶದ ಸಂದೇಶ ಬರಲಿದೆ.


ಫ‌ಲಿತಾಂಶವು http://kseeb.kar.nic.in , http://sslc.karnataka.gov.in, http://karresults.nic.in ವೆಬ್‌ಸೈಟ್‌ ಗಳಲ್ಲಿ ಮಧ್ಯಾಹ್ನ 1 ಗಂಟೆಯಿಂದ ವೇಳೆಗೆ ಲಭ್ಯವಿದೆ.


ಅನುತ್ತೀರ್ಣರಾದವರಿಗೆ ಪೂರಕ ಪರೀಕ್ಷೆ 27 ಮೇಯಿಂದ ಜೂನ್ 4 ರ ವರೆಗೆ ನಡೆಯಲಿದೆ. ಮೇ 20 ರಿಂದ ಆನ್ಲೈನ್ ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದಾಗಿದೆ.




ಇಂದು ಮಧ್ಯಾಹ್ನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ 19-5-2022


 ಬೆಂಗಳೂರು : ಮೇ -19 ರಂದು ಮಧ್ಯಾಹ್ನ 12.30 ಕ್ಕೆ ಹತ್ತನೆ ತರಗತಿ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ . 



ಈ ಬಗ್ಗೆ ಬುಧವಾರ ಟ್ವಿಟ್ ಮಾಡಿ ಮಾಹಿತಿ ನೀಡಿರುವ ಅವರು , ' ನಾಳೆ ಮಧ್ಯಾಹ್ನ 12.30 ಕ್ಕೆ SSLC ಫಲಿತಾಂಶ ಪ್ರಕಟಿಸಲಾಗುತ್ತದೆ . ಮಧ್ಯಾಹ್ನ 1 ಗಂಟೆ ಬಳಿಕ ಇಲಾಖೆಯ ವೆಬ್‌ಸೈಟ್‌ನಲ್ಲಿ ಮತ್ತು ಶಾಲೆಗಳಲ್ಲಿ ಫಲಿತಾಂಶ ಲಭ್ಯವಿರಲಿದೆ . https://karresults.nic.in ಗೆ ಲಾಗಿನ್ ಆಗಿ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದು .








© all rights reserved
made with by templateszoo