Mangalore ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Mangalore ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮುಲ್ಕಿ: ಯಕ್ಷಗಾನ ರಂಗಕ್ಕೆ ಛಂದೋ ಬ್ರಹ್ಮ ದಿ. ನಾರಾಯಣಶೆಟ್ಟಿ ಯವರ ಕೊಡುಗೆ ಅಪಾರ: ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ 14-06-2022

ಮುಲ್ಕಿ: ಯಕ್ಷಗಾನ ರಂಗಕ್ಕೆ ಛಂದೋ ಬ್ರಹ್ಮ ದಿ. ನಾರಾಯಣಶೆಟ್ಟಿ ಯವರ ಕೊಡುಗೆ ಅಪಾರ: ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ
ಮುಲ್ಕಿ; ಯಕ್ಷಗಾನ ರಂಗಕ್ಕೆ ಛಂದೋ ಬ್ರಹ್ಮ ದಿ. ನಾರಾಯಣ ಶೆಟ್ಟರ ಕೊಡುಗೆ ಅಪಾರ ಎಂದು ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಅವರು ಎಳತ್ತೂರು ನಲ್ಲಿರುವ ಯಕ್ಷಗಾನ ದಿಗ್ಗಜ ದಿ. ನಾರಾಯಣ ಶೆಟ್ಟಿ ರವರ ಮನೆಗೆ ಭೇಟಿ ನೀಡಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ದಿ.ನಾರಾಯಣ ಶೆಟ್ಟರು ಯಕ್ಷಗಾನ ಸಹಿತ ಅನೇಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು. ಅವರ ಆದರ್ಶ ಇಂದಿನ ಯುವಜನಾಂಗಕ್ಕೆ ಮಾದರಿಯಾಗಿದ್ದು ಮುಂದಿನ ದಿನಗಳಲ್ಲಿ ಅವರ ಸಂಸ್ಮರಣೆಯನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭ ಮಾತೃಶ್ರೀ ಶಾರದಮ್ಮ, ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಸಿ ಭಟ್, ರಾಹುಲ್ ಚಂದ್ರಶೇಖರ್, ಸುಶೀಲಾ ನಾರಾಯಣ್ ಶೆಟ್ಟಿ, ಸೌದಾಮಿನಿ ಶೆಟ್ಟಿ, ಚೂಡಾಮಣಿ ಶೆಟ್ಟಿ, ಸೌಮ್ಯಲತಾ ಶೆಟ್ಟಿ, ಕುಮಾರಿ ಸನ್ನಿದಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು,ಸಂಚಾಲಕ ಪುನೀತ್ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಇಂದು ಶಾಲೆಗಳಿಗೆ ರಜೆ ಘೋಷಣೆ 19-5-2022


 ಮಂಗಳೂರು : ದ.ಕ. ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯ ಕಾರಣ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಮೇ 19ರ ಗುರುವಾರ ಒಂದು ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಆದೇಶಿಸಿದ್ದಾರೆ.









ಧರ್ಮಸ್ಥಳ:-ಬಿಜೆಪಿ ಮುಖಂಡ ಡಾ.ನರೇಂದ್ರ ಕುಮಾರ್ ನಿಧನ11-5-2022

 


ಧರ್ಮಸ್ಥಳದಲ್ಲಿ ಬಿಜೆಪಿ ಮುಖಂಡ ಬೆಂಗಳೂರು ಉತ್ತರದ ಬಿಜೆಪಿ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹೃದಯಾಘಾತದಿಂದ ಮೃತರಾಗಿದ್ದಾರೆ.



ಮೃತರನ್ನು ಶ್ರೀ ಜ್ಞಾನಕ್ಷಿ ವಿದ್ಯಾ ಮಂದಿರದ‌ ಮಾಲಕ ಹಾಗೂ ಬೆಂಗಳೂರು ಉತ್ತರ ವಲಯದ ಬಿಜೆಪಿ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿರುವ ಡಾ.ನರೇಂದ್ರ ಕುಮಾರ್ (45) ಎಂದು ಗುರುತಿಸಲಾಗಿದೆ.




ಇವರು ಪುತ್ತೂರು ವಿವೇಕಾನಂದ ಕಾಲೇಜಿಗೆ ತಮ್ಮ ಶಾಲೆಯ ಶಿಕ್ಷಕಿಯರನ್ನು ತರಬೇತಿಗಾಗಿ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳು ಮತ್ತು ಸ್ನೇಹಿತರೊಂದಿಗೆ ಬಂದಿದ್ದರು, ಬಳಿಕ ತಮ್ಮ ಪತ್ನಿ‌ ಮಕ್ಕಳು ಸೇರಿ ಧರ್ಮಸ್ಥಳ ಸನ್ನಿಧಿ ಗೆಸ್ಟ್ ನಲ್ಲಿ ರೂಂ ಮಾಡಿದ್ದರು, ಇಂದು ಬೆಳಗ್ಗೆ ಏಕಾಏಕಿ ಡಾ. ನರೇಂದ್ರ ಕುಮಾರ್ ಗೆ ಎದೆನೋವು ಕಾಣಿಸಿದ್ದು, ಕೂಡಲೇ ಅವರನ್ನು ಉಜಿರೆಯ ಆಸ್ಪತ್ರೆಗೆ ಕರೆತರುವ ಪ್ರಯತ್ನ ನಡೆಸಿದ್ದು, ನೇತ್ರಾವತಿ ಸಮೀಪ ವಾಹನದಲ್ಲೇ ಹೃದಯಾಘಾತದಿಂದ ನಿಧನರಾದ ಎಂದು ತಿಳಿದುಬಂದಿದೆ.






ಪ್ರಮೋದ್ ಮುತಾಲಿಕ್ಲು ರಾಮಸೇನೆಯಲ್ಲ ಅವನದ್ದು ರಾವಣಸೇನೆ :-ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್ ಮಹಮ್ಮದ್ ಮಸೂದ್11-5-2022

 


ಮಂಗಳೂರು : ಪ್ರಮೋದ್ ಮುತಾಲಿಕ್ಲು ರಾಮಸೇನೆಯಲ್ಲ ಅವನದ್ದು ರಾವಣಸೇನೆ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್ ಮಹಮ್ಮದ್ ಮಸೂದ್ ಹೇಳಿದರು .


 ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಿಂದೂಸ್ತಾನದಲ್ಲಿ ಮುಸ್ಲಿಮರಿಗೆ ಜಾಗವಿಲ್ಲ . ಅವರನ್ನು ಅಪಘಾನಿಸ್ತಾನ , ಪಾಕಿಸ್ತಾನಕ್ಕೆ ಒದ್ದು ಓಡಿಸಬೇಕು ಎಂದು ಹೇಳಿದ್ದರು . ಆದರೆ ಆ ಕೋಮುವಾದಿ , ಭಯೋತ್ಪಾದಕ ಪ್ರಮೋದ್ ಮುತಾಲಿಕ್‌ನನ್ನೇ ಅಲ್ಲಿಗೆ ಒದ್ದು ಓಡಿಸಬೇಕು . ರಾಮಸೇನೆ ಹನುಮಂತನ ಸೇನೆ . ಆದರೆ ಪ್ರಮೋದ್ ಮುತಾಲಿಕ್ ನದ್ದು , ರಾಮಸೇನೆ ಆಗಲು ಸಾಧ್ಯವಿಲ್ಲ . ಅಂತಹ ಮನುಷ್ಯ ಬರುವುದನ್ನು ಉಡುಪಿಯಲ್ಲಿ ಬ್ಯಾನ್ ಮಾಡಲಾಯಿತು . ಆದರೆ ಈ ಭಯೋತ್ಪಾದಕ , ಕ್ರಿಮಿನಲ್ , ಕೋಮುವಾದಿ ಬರುವಾಗ ಮಂಗಳೂರು ಪೊಲೀಸ್ ಕಮಿಷನರ್ ಕುರ್ಚಿ ಬಿಟ್ಟು ಎದ್ದು ಎದ್ದು ನಿಂತು ಮಾತನಾಡುತ್ತಾರೆ . ಅದನ್ನು ನಾನು ಖಡಾಖಂಡಿತವಾಗಿ ಖಂಡಿಸುತ್ತೇನೆ ಎಂದು ಆಗ್ರಹಿಸಿದರು .




ಅದೇ ರೀತಿ ನಾವು ಆಜಾನ್ ವಿರೋಧಿಸಿ ಅದನ್ನು ಬಂದ್ ಮಾಡಲು ಬಂದವರನ್ನು ದನದ ಹಾಲು ನೀಡಿ ಸ್ವಾಗತಿಸಲು ತಿಳಿಸಿದ್ದೇವೆ . ಸರಕಾರದ ಸುತ್ತೋಲೆ ಬರುವ ಮೊದಲೇ ಈಗಿನಿಂದಲೇ ನಗರದ ಕುದ್ರೋಳಿ ಜಾಮಿಯಾ ಮಸೀದಿಯ ಮೈಕ್ ಬಂದ್ ಮಾಡಲಾಗಿದೆ . ಐದು ಹೊತ್ತಿನ ಆಜಾನ್‌ಗೂ ಧ್ವನಿವರ್ಧಕವನ್ನು ಬಂದ್ ಮಾಡಿದ್ದೇವೆ . ಇಂದಿನ ಪ್ರಾತಃಕಾಲದ ಆಜಾನ್‌ನಿಂದಲೇ ಮೈಕ್ ಸ್ಥಗಿತಗೊಳಿಸಲಾಗಿದೆ . ಸುಪ್ರೀಂ ಕೋರ್ಟ್ ತೀರ್ಪಿಗೆ ಗೌರವ ನೀಡಿ ಈ ತೀರ್ಮಾನ ಕೈಗೊಳ್ಳಲಾಗಿದೆ . ದೇವರ ಪ್ರಾರ್ಥನೆಯಷ್ಟೇ ನಮಗೆ ಮುಖ್ಯ ಹೊರತು ಮೈಕ್ ಅಲ್ಲ ಎಂದು ಕೆ.ಎಸ್ ಮಸೂದ್ ಹೇಳಿದರು .








ಮಂಗಳೂರು:-ರೌಡಿಶೀಟರ್ ರಾಹುಲ್‌ ತಿಂಗಳಾಯ ಕೊಲೆ ಪ್ರಕರಣ, ತಲೆಮರಿಸಿಕೊಂಡಿದ್ದ ಆರೋಪಿಗಳ ಬಂಧನ9-5-2022

 


ರೌಡಿಶೀಟರ್ ರಾಹುಲ್‌ತಿಂಗಳಾಯ ಯಾನೆ ಕಕ್ಕೆ ರಾಹುಲ್ ಎಂಬಾತನ ಕೊಲೆ ಮಾಡಿದ ಆರು ಮಂದಿ ಆರೋಪಿಗಳನ್ನು ಮಂಗಳೂರು ದಕ್ಷಿಣ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಮಹೇಂದ್ರ ಶೆಟ್ಟಿ (27), ಅಕ್ಷಯಕುಮಾರ್ (25), ಸುಶಿತ್ (20) ದಿಲ್ಲೆಶ್ ಬಂಗೇರ (21), ಶುಭಂ (26) ಮತ್ತು ವಿಷ್ಣು.ಪಿ (20) ಎಂದು ಗುರುತಿಸಲಾಗಿದೆ.


ಈ ಪ್ರಕರಣದಲ್ಲಿ ಒಟ್ಟು 13 ಜನ ಭಾಗಿಯಾಗಿದ್ದರು.


ಏಪ್ರಿಲ್ 28ರಂದು ಮಂಗಳೂರು ಎಮ್ಮೆಕರ ಮೈದಾನಕ್ಕೆ ಕೋಳಿ ಅಂಕಕ್ಕೆ ಬಂದಿದ್ದ ಹೊಯ್ ಬಜಾರ್ ನಿವಾಸಿ ಕಕ್ಕೆ ರಾಹುಲ್ ತನ್ನ ಸ್ನೇಹಿತನ ಜೊತೆ ವಾಪಾಸ್‌ ಮನೆಗೆ ಹೋಗಲು ಸ್ಕೂಟರ್​ನಲ್ಲಿ ಹೊರಡುವ ಸಮಯದಲ್ಲಿ ಆರೋಪಿಗಳಾದ ಮಹೇಂದ್ರ ಶೆಟ್ಟಿ, ಅಕ್ಷಯ್ ಕುಮಾರ್, ಸುಶೀತ್ ಹಾಗೂ ದಿಲೇಶ್ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದಾಗ ರಾಹುಲ್ ಕಕ್ಕೆ ಸ್ಕೂಟರ್​​ನಿಂದ ಇಳಿದು ಓಡಿ ಹೋಗಿದ್ದರು.




​ಆರೋಪಿಗಳು ರಾಹುಲ್​ನನ್ನು ಬೆನ್ನತ್ತಿದ್ದಾರೆ. ಈ ಸಮಯದಲ್ಲಿ ದೈವಸ್ನಾನವೊಂದರ ಕಂಪೌಂಡ್ ಗೋಡೆ ಹಾರಿಹೋಗಲು ಪ್ರಯತ್ನಿಸಿದ ಸಮಯ ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಆತನನ್ನು ಹಿಡಿದು ಎಮ್ಮೆಕರ ಮೈದಾನಕ್ಕೆ ಎಳೆದುಕೊಂಡು ಬಂದು ಮಾರಕಾಸ್ತ್ರದಿಂದ ಕೊಚ್ಚಿ, ಚೂರಿಯಿಂದ ಇರಿದು, ಮಾರಣಾಂತಿಕವಾಗಿ ಗಾಯಗೊಳಿಸಿದ್ದರು. ಗಾಯಗೊಂಡ ರಾಹುಲ್​ನನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದಾಗ ಮೃತ ಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು. ಈ ಬಗ್ಗೆ ಆರೋಪಿಗಳ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕೊಲೆ ಪುಕರಣ ದಾಖಲಾಗಿತ್ತು.


ಈ ಪ್ರಕರಣದ ಕೃತ್ಯದಲ್ಲಿ ನೇರ ಭಾಗಿಯಾದ ಆರೋಪಿಗಳಾದ ಮಹೇಂದ್ರ ಶೆಟ್ಟಿ, ಅಕ್ಷಯ್ ಕುಮಾರ್, ಸುಶಿತ್, ದಿಲ್ಲೇಶ್ ಬಂಗೇರನನ್ನು ಮೇ 8 ರ ರಾತ್ರಿ ಸುರತ್ಕಲ್ ರೈಲ್ವೆ ಸ್ಟೇಶನ್ ಬಳಿಯಿಂದ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿರುತ್ತಾರೆ . ಈ ಪ್ರಕರಣದಲ್ಲಿ ಒಳ ಸಂಚು ನಡೆಸಿ, ಪ್ರಕರಣದ ಕೃತ್ಯಕ್ಕೆ ಸಹಕರಿಸಿದ ಆರೋಪಿಗಳಾದ ಶುಭಂ ಮತ್ತು ವಿಷ್ಣು.ಪಿಯನ್ನು ಮೇ 9ರಂದು ಬೆಳಗಿನ ಜಾವ ಸುಲ್ತಾನ್ ಬತ್ತೇರಿ ಹಾಗೂ ಸೋಮೇಶ್ವರ ಬೀಚ್ ಬಳಿಯಿಂದ ಬಂಧಿಸಿದ್ದಾರೆ. ಬಂಧಿತರಿಂದ 3 ತಲವಾರು , 4 ಕತ್ತಿ , 3 ಚೂರಿ , ಎರಡು ಸ್ಕೂಟರ್ , ರಾಯಲ್ ಎನ್​ಫೀಲ್ಡ್​ ಬುಲೆಟ್ ಹಾಗೂ 5 ಮೊಬೈಲ್ ಹ್ಯಾಂಡ್ ಸೆಟ್ ವಶಪಡಿಸಿಕೊಳ್ಳಲಾಗಿದೆ . ಬಂಧಿತರ ಪೈಕಿ ಆರೋಪಿ ಸುಶಿತ್​ನ ಮೇಲೆ ಒಂದು ಕೊಲೆ ಯತ್ನ ಪ್ರಕರಣ ಹಾಗೂ ಅಕ್ಷಯ್ ಕುಮಾರ್​ನ ಮೇಲೆ ಒಂದು ಹಲ್ಲೆ ಪ್ರಕರಣ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ .





ಇದರಲ್ಲಿ ಸುಶೀತ್ ಹೋಟೆಲ್ ಮ್ಯಾನೇಜ್​ಮೆಂಟ್ ವಿದ್ಯಾರ್ಥಿಯಾಗಿದ್ದು, ಮಹೇಂದ್ರ ಕುಮಾರ್, ಅಕ್ಷಯ ಕುಮಾರ್ ಗಲ್ಫ್​ನಲ್ಲಿ ಕೆಲಸ ಮಾಡುತ್ತಿದ್ದರು. ಇವರು ಮಾರ್ಚ್​ನಲ್ಲಿ ಗಲ್ಫ್​ನಿಂದ ಭಾರತಕ್ಕೆ ಬಂದಿದ್ದರು.


ರೌಡಿಶೀಟರ್ ಕಕ್ಕೆ ರಾಹುಲ್ ಕೊಲೆಗೆ ಆರು ವರ್ಷದ ಹಗೆತನ ಕಾರಣವಾಗಿದೆ. 2016 ರಲ್ಲಿ ಎಮ್ಮೆಕೆರೆ ಗ್ರೌಂಡ್​ನಲ್ಲಿ ಎರಡು ತಂಡಗಳ ನಡುವೆ ಹಗೆತನ ಆರಂಭವಾಗಿತ್ತು. ಆ ಬಳಿಕ ರಾಹುಲ್ 2019 ರಲ್ಲಿ ಮಹೇಂದ್ರ ಕುಮಾರ್ ಮತ್ತು 2020 ರಲ್ಲಿ ‌ಕಾರ್ತಿಕ್ ಮೇಲೆ ದಾಳಿ ನಡೆಸಿದ್ದನು. ಈ ಎರಡು ತಂಡದವರು ಒಟ್ಟಾಗಿ ಸೇರಿ ಕಕ್ಕೆ ರಾಹುಲ್ ಕೊಲೆ ಮಾಡಲು ಸ್ಕೆಚ್ ಹಾಕಿದ್ದರು.



ಮಹಿಳಾ ಪ್ರೊಫೆಸರ್​ವೊಬ್ಬರ ಫೋನ್ ನಂಬರ್ ಪಬ್ಲಿಕ್ ಟಾಯ್ಲೆಟ್​ನಲ್ಲಿ ಬರೆದು ಮಾನಸಿಕ ಕಿರುಕುಳ, ಮೂವರು ಶಿಕ್ಷಕರ ಬಂಧನ20-4-2022

 


ಮಂಗಳೂರು : ಹಿರಿಯ ಮಹಿಳಾ ಪ್ರೊಫೆಸರ್​ವೊಬ್ಬರ ಫೋನ್ ನಂಬರ್ ಪಬ್ಲಿಕ್ ಟಾಯ್ಲೆಟ್​ನಲ್ಲಿ ಬರೆದು ಮಾನಹಾನಿಕಾರ ಪತ್ರ, ಪೋಸ್ಟರ್​ ಅಂಟಿಸಿ ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಟ್ವಾಳದ ಖಾಸಗಿ ಕಾಲೇಜಿನ ಮೂವರು ಶಿಕ್ಷಕರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್, ಬಂಟ್ವಾಳ ಖಾಸಗಿ ಕಾಲೇಜಿನ ಪ್ರೊಫೆಸರ್ ಆಗಿ ಸದ್ಯ ಡೆಪ್ಯುಟೇಶನ್​ನಲ್ಲಿರುವ ಮಹಿಳಾ ಪ್ರೊಫೆಸರ್ ವಿರುದ್ದ ಆರಂಭದಲ್ಲಿ ಅವರ ಪರಿಚಯದ ಶಿಕ್ಷಕರಿಗೆ, ಶಿಕ್ಷಣ ಇಲಾಖೆಯ ಉನ್ನತ ದರ್ಜೆ ಅಧಿಕಾರಿಗಳಿಗೆ ಆರೋಪಿಗಳು ಮಾನಹಾನಿಕಾರ ಪತ್ರವನ್ನು ಬರೆದಿದ್ದರು.



ಆ ಬಳಿಕ ವಿವಿಧ ಕಡೆಯ ಪಬ್ಲಿಕ್ ಟಾಯ್ಲೆಟ್​ನಲ್ಲಿ ಈ ಪ್ರೊಫೆಸರ್ ಫೋನ್ ನಂಬರ್ ಹಾಕಿ ಇವರು ಕಡಿಮೆ ದರದಲ್ಲಿ ವೇಶ್ಯಾವಾಟಿಕೆ ಮಾಡುತ್ತಾರೆ ಎಂದು ಬರೆದಿದ್ದರು ಅಂತಾ ತಿಳಿಸಿದರು. ಅಲ್ಲದೇ, ವಿವಿಧ ಕಡೆ ಅಶ್ಲೀಲವಾಗಿ ಬರೆದು ಪೋಸ್ಟರ್​ಗಳನ್ನು ಹಾಕಿದ್ದರು.


ಸುಮಾರು ಒಂದು ವರ್ಷದಿಂದ ಇಂತಹ ಮಾನಹಾನಿಯಿಂದ ನೊಂದ ಶಿಕ್ಷಕಿ ಮಂಗಳೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಬೆಳ್ತಂಗಡಿ ತಾಲೂಕಿನ ಲಾಯಿಲದ ಪ್ರಕಾಶ್ ಶೆಣೈ, ಬಂಟ್ವಾಳ ಸಿದ್ದಕಟ್ಟೆಯ ಪ್ರದೀಪ್ ಪೂಜಾರಿ, ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ನಡ್ಪಾಲುವಿನ ತಾರಾನಾಥ ಬಿ.ಎಸ್.ಶೆಟ್ಟಿ ಎಂಬುವರನ್ನು ಬಂಧಿಸಲಾಗಿದೆ.


ಈ ಆರೋಪಿಗಳು ಬಂಟ್ವಾಳ ಖಾಸಗಿ ಕಾಲೇಜಿನ ಸಂಚಾಲಕ ಹಾಗೂ ಪ್ರಾಧ್ಯಾಪಕರುಗಳಾಗಿದ್ದಾರೆ. ಆದರೆ, ಈ ಕೃತ್ಯವೆಸಗಲು ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂತ್ರಸ್ತ ಮಹಿಳಾ ಪ್ರೊಫೆಸರ್, ನನ್ನ ಬಗ್ಗೆ ಮಾನಹಾನಿಕರ ಪತ್ರ ಬರೆದಂದಿನಿಂದ ನೆಮ್ಮದಿ ಇಲ್ಲದಂತಾಗಿದೆ. ಪೊಲೀಸರಿಗೆ ದೂರು ನೀಡಿದ ಬಳಿಕ ಧೈರ್ಯ ತುಂಬಿದರು. ದೂರು ನೀಡುವಾಗಲೇ ಇವರ ಬಗ್ಗೆ ಪೊಲೀಸರಲ್ಲಿ ಅನುಮಾನ ವ್ಯಕ್ತಪಡಿಸಿದ್ದೆ. ಅದೀಗ ನಿಜವಾಗಿದೆ ಎಂದರು.




ಮಂಗಳೂರು:-ಸಚಿವ ಈಶ್ವರಪ್ಪ ರಾಜಿನಾಮೆಗೆ ಆಗ್ರಹಿಸಿ ಸಿ.ಎಂ.ಗೆ ಕಪ್ಪು ಬಟ್ಟೆ ಪ್ರದರ್ಶನ 14-4-2022

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಧರ್ಮಯುದ್ದಕ್ಕೆ ಸಂಬಂಧಿಸಿದಂತೆ ಸಿಎಂ ಮೌನ ಪ್ರಶ್ನಿಸಿ ಎಸ್ ಡಿಪಿಐ ಕಾರ್ಯಕರ್ತರು ಮುಖ್ಯಮಂತ್ರಿ ವಾಹನಕ್ಕೆ ಎದುರು ಕಪ್ಪು ಬಾವುಟ ಪ್ರದರ್ಶಿಸಿ ಮುತ್ತಿಗೆ ಯತ್ನಿಸಿದ ಘಟನೆ ಫರಂಗಿಪೇಟೆಯಲ್ಲಿ ನಡೆದಿದೆ.

ಬಂಟ್ವಾಳದ ಬಂಟರ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಮಂಗಳೂರಿನಿಂದ ರಸ್ತೆ ಮಾರ್ಗವಾಗಿ ಚಲಿಸುತ್ತಿದ್ದ ಸಿಎಂ ಕಾರಿಗೆ ಎಸ್‌ಡಿಪಿಐ ಕಾರ್ಯಕರ್ತರು ಗೋ ಬ್ಯಾಕ್ ಸಿಎಂ ಎಂದು ಘೋಷಣೆ ಕೂಗಿ ಮುತ್ತಿಗೆಗೆ ಯತ್ನಿಸಿದ್ದಾರೆ.

ಕೂಡಲೇ ಮುಖ್ಯಮಂತ್ರಿ ಭದ್ರತಾ ಸಿಬ್ಬಂದಿಗಳು ಕಾರ್ಯಕರ್ತರನ್ನು ತಡೆದಿದ್ದಾರೆ. ಕೆಲವು ಎಸ್ ಡಿಪಿಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಮಂಗಳೂರು:-ಮಾವನ ಪಿಂಡ ಪಿಂಡ ಪ್ರದಾನಕ್ಕೆ ಬಂದ ಬಾಲಕಿಯರು ಸಮುದ್ರ ಪಾಲು 10-4-2022

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಬೀಚ್‌ ನಲ್ಲಿ ಬಾಲಕಿ ಹಾಗೂ ಯುವತಿಯೊಬ್ಬಳು ಸಮುದ್ರಪಾಲಾದ ಘಟನೆ ಸುರತ್ಕಲ್ ಎನ್‌.ಐ.ಟಿ.ಕೆ ಬೀಚ್ ನಲ್ಲಿ ಇಂದು ಬೆಳಗ್ಗೆ ನಡೆದಿದೆ.

ಸಾವನ್ನಪ್ಪಿದವರು ಮಂಗಳೂರು ಶಕ್ತಿನಗರ ನಿವಾಸಿಗಳಾದ ವೈಷ್ಣವಿ(21) ಮತ್ತು ತ್ರಿಶಾ(13) ಎಂದು ಗುರುತಿಸಲಾಗಿದೆ. ಇವರಿಬ್ಬರು ಸೋದರ ಸಂಬಂಧಿ ಎಂದು ತಿಳಿದುಬಂದಿದೆ.

ಇವರು ಇತ್ತೀಚೆಗೆ ಮೃತಪಟ್ಟ ತಮ್ಮ ಮಾವನ ತಿಥಿಯ ಪಿಂಡ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಇಂದು ಬೆಳಗ್ಗೆ ಕುಟುಂಬಸ್ಥರ ಜೊತೆಗೆ ಎನ್‌ಐಟಿಕೆ ಬೀಚ್ ಗೆ ಆಗಮಿಸಿದ್ದರು.

 ಇದೇ ಸಂಧರ್ಭ ವೆಂಕಟೇಶ್ ಎಂಬವರು ವೈಷ್ಣವಿ ಮತ್ತು ತ್ರಿಶಾ ಜೊತೆ ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಲೆಗಳ ಅಬ್ಬರಕ್ಕೆ ಸಿಲುಕಿದ ಮೂವರನ್ನು ಸ್ಥಳೀಯ ಈಜುಗಾರರು ಮತ್ತು ಸ್ಥಳದಲ್ಲಿದ್ದ ಸುರತ್ಕಲ್ ಪೊಲೀಸ್ ಠಾಣೆಯ ಹೋಂ ಗಾರ್ಡ್ ಪ್ರಶಾಂತ್ ಮೇಲೆತ್ತಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ವೈಷ್ಣವಿ ಮತ್ತು ತ್ರಿಶಾ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ವೆಂಕಟೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಂಗಳೂರು:-ನಿಯಮ ಮೀರಿ ಧ್ವನಿವರ್ಧಕ ಬಳಕೆ ನೋಟೀಸ್ ಜಾರಿ 7-4-2022

ಮಂಗಳೂರು: ಹೈಕೋರ್ಟ್ ಆದೇಶ, ಸರ್ಕಾರದ ನಿಯಮ ಮೀರಿ ಧ್ವನಿವರ್ಧಕ ಬಳಕೆಯನ್ನು ತಡೆಯಲು ಮಂಗಳೂರು ಪೊಲೀಸರು ಮುಂದಾಗಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 1001 ಸ್ಥಳಗಳಿಗೆ ಪೊಲೀಸರು ನೋಟಿಸ್​ ನೀಡಿದ್ದು, ಸರ್ಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ.

ಮಂಗಳೂರು ನಗರದ 357 ದೇವಸ್ಥಾನ, 168 ಚರ್ಚ್, 95 ಚರ್ಚ್​, 106 ಶಿಕ್ಷಣ ಸಂಸ್ಥೆಗಳು, 60 ಕೈಗಾರಿಕಾ ಸ್ಥಳಗಳು ಹಾಗೂ 98 ಮನರಂಜನಾ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಯಾಗುತ್ತಿರುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

ಧ್ವನಿವರ್ಧಕಗಳ ಶಬ್ದ ಹೈಕೋರ್ಟ್​ ತಿಳಿಸಿದ ಡೆಸಿಬಲ್​ಗಿಂತ ಮೀರಬಾರದು ಎಂಬ ನಿಯಮವಿದ್ದು ಅದನ್ನು ಪಾಲಿಸಬೇಕು. ಒಂದು ವೇಳೆ ನಿಯಮ ಉಲಂಘಿಸಿದರೆ ಕಾನೂನಾತ್ಮಕ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕಲ್ಲಡ್ಕ ಪ್ರಭಾಕರ ಭಟ್ ಆರೋಗ್ಯ ವಿಚಾರಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ 6-4-2022

ಬೆಂಗಳೂರು: RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಆರೋಗ್ಯದಲ್ಲಿ ಏರುಪೇರಾಗಿದ್ದು, ನಿನ್ನೆ ಸಂಜೆ ಪ್ರಭಾಕರ್​ ಭಟ್​​ಗೆ ದಿಢೀರನೇ ಎದೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದಾರೆ. 

ಈ ಹಿನ್ನೆಲೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಕರೆ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಕಲ್ಲಡ್ಕ ಪ್ರಭಾಕರ್ ಗೆ ಫೋನ್ ಕರೆ ಮಾಡಿದ ಬಿಎಸ್ ಯಡಿಯೂರಪ್ಪ, ಕರೆಯಲ್ಲಿ ಆರೋಗ್ಯ ವಿಚಾರಿಸಿದ್ದು, ಈಗ ಏನು ತೊಂದರೆ ಇಲ್ಲ ಎಂದು ಹೇಳಿದ್ದಾರೆ.

ಮಂಗಳೂರು:-ನಗರದಾದ್ಯಂತ ನಿನ್ನೆ ತಡರಾತ್ರಿಯವರೆಗೂ ಧಾರಾಕಾರ ಮಳೆ 4-4-2022

ಕೆಲವು ದಿನಗಳಿಂದ ಮೋಡ ಕವಿದ ವಾತಾವರಣ ಮತ್ತು ಬಿಸಿಲಿನ ಬೇಗೆಗೆ ಸಿಲುಕಿದ್ದ ಮಂಗಳೂರಿನಲ್ಲಿ ರವಿವಾರ ರಾತ್ರಿ‌ ಧಾರಾಕಾರ ಮಳೆಯಾಗಿದೆ‌.

ರಾತ್ರಿ ಸುಮಾರು 8:30ಕ್ಕೆ ಸುರಿಯಲಾರಂಭಿಸಿದ ಮಳೆಯು ಸತತ ಒಂದು ಗಂಟೆಯ ಕಾಲ ಸುರಿಯಿತು.

ಗುಡುಗು, ಮಿಂಚು ಸಹಿತ ಸುರಿದ ಮಳೆ ನೀರು ಸ್ಮಾರ್ಟ್ ಸಿಟಿ ಯೋಜನೆಯ ಅಸಮರ್ಪಕ ಕಾಮಗಾರಿ, ಒಳಚರಂಡಿಯಲ್ಲಿ ಹೂಳು ತುಂಬಿದ ಕಾರಣ ರಸ್ತೆಯಲ್ಲಿ ಹರಿಯಿತು.

ನಗರವಲ್ಲದೆ ಹೊರವಲಯದ ತೊಕ್ಕೊಟ್ಟು, ಉಳ್ಳಾಲ, ದೇರಳಕಟ್ಟೆ, ಕೊಣಾಜೆ, ತಲಪಾಡಿ, ಕೂಳೂರು ಸಹಿತ ಸುತ್ತಮುತ್ತಲಿನ ಹಲವೆಡೆ ಭಾರೀ ಮಳೆಯಾಗಿದೆ.
© all rights reserved
made with by templateszoo