MGM College ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
MGM College ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ನೇಕಾರರ, ಕರಕುಶಲ ಕರ್ಮಿಗಳ, ರೈತರ ಹಾಗೂ ಕಲಾವಿದ ಸಮಸ್ಯೆಗಳಿಗೆ ಎಂ.ಜಿ.ಎಂ ಸ್ಪಂದನೆ.

ನೇಕಾರರ, ಕರಕುಶಲ ಕರ್ಮಿಗಳ, ರೈತರ ಹಾಗೂ ಕಲಾವಿದ ಸಮಸ್ಯೆಗಳಿಗೆ ಎಂ.ಜಿ.ಎಂ ಸ್ಪಂದನೆ. 
ಇದೇ 13 ರಿಂದ 16 ರ ವರೆಗೆ ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ನೈಸರ್ಗಿಕ ಬಣ್ಣ, ಪರಿಶುದ್ಧ ಹತ್ತಿಯ ಕೈಮಗ್ಗದ ಬಟ್ಟೆ ಹಾಗೂ ಇತರೆ ಕೈ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮತ್ತು ಕಾರ್ಯಾಗಾರ ನೂತನ ರವೀಂದ್ರ ಮಂಟಪದಲ್ಲಿ  ನಡೆಯಲಿದೆ. 
ಎಂ.ಜಿ.ಎಂ ಕಾಲೇಜು ಈ ಹಿಂದೆ ನಡೆಸಿದ್ದ ಪುಸ್ತಕೋತ್ಸವ, ಕೃಷಿ ಸಮ್ಮಿಲನ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 5 ಲಕ್ಷ ಮೌಲ್ಯದ ಪುಸ್ತಕಗಳು, 8 ಲಕ್ಷ ಮೌಲ್ಯದ ಕೃಷಿ ಉತ್ಪನ್ನಗಳು ಮಾರಾಟವಾಗಿ ಪ್ರಕಾಶಕರಿಗೆ, ಕೃಷಿಕರಿಗೆ ನೆರವಾಗಿತ್ತು. ಇದೇ ರೀತಿ ಸಾರ್ವಜನಿಕರ  ಸ್ಪಂದನೆಯನ್ನು ಮತ್ತೊಮ್ಮೆ ಬಯಸುತ್ತಿದ್ದೇವೆ. 

ಸೆಪ್ಟೆಂಬರ್ 13, 14,15,16. ಬೆಳಿಗ್ಗೆ 10 ರಿಂದ ಸಂಜೆ 8 ರ ವರೆಗೆ. ನೂತನ ರವೀಂದ್ರ ಮಂಟಪ, ಎಂ.ಜಿ.ಎಂ ಕಾಲೇಜು, ಉಡುಪಿ. 
© all rights reserved
made with by templateszoo