ಮೂಡುಬಿದಿರೆ:-ಗಂಟಾಲ್ಕಕಟ್ಟೆಯಲ್ಲಿ ಕಾರು- ಬೈಕ್ ಡಿಕ್ಕಿಯಾಗಿ, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಸಂಭವಿಸಿದೆ.
ಮೃತರನ್ನು ಯಕ್ಷಗಾನ ಕಲಾವಿದ ವೇಣೂರಿನ ವಾಮನ ಕುಮಾರ್ (47) ಎಂದು ಗುರುತಿಸಲಾಗಿದೆ.
ವಾಮನ ಕುಮಾರ್ ಬಡಗುತಿಟ್ಟಿನ ಯಕ್ಷಗಾನ ಮೇಳದಲ್ಲಿ ಯಕ್ಷ ಕಲಾವಿದನಾಗಿ ದುಡಿಯುತ್ತಿದ್ದರು.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.