*ಕೊರೋನಾ ಮುಗಿದಿಲ್ಲ… ಯಾವಾಗ ಮರುಕಳಿಸುತ್ತದೆ ಎಂದು ಹೇಳಲು ತಿಳಿದಿಲ್ಲ: ಪ್ರಧಾನಿ ಮೋದಿ*
ಕೊರೋನಾ ಬಗ್ಗೆ ಜನರುಇನ್ನೂ ಕೂಡ ಜಾಗರೂಕರಾಗಿರಲುಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ಗುಜರಾತ್‌ನ ಜುನಾಗಢ್‌ನಲ್ಲಿರುವ ಉಮಿಯಾ ಮಾತಾ ದೇವಸ್ಥಾನದಲ್ಲಿ 14 ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ವರ್ಚುವಲ್ ಭಾಷಣ ಮಾಡಿದ ಪ್ರಧಾನಿ, ದೇಶದಲ್ಲಿ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಯಶಸ್ಸನ್ನು ಕಾಣುತ್ತಿದೆ. ಕೊರೋನಾ ಒಂದು ದೊಡ್ಡ ಬಿಕ್ಕಟ್ಟು, ಆದ್ದರಿಂದ ಅದು ಮುಗಿದಿದೆ ಎಂದು ನಾವು ಹೇಳುತ್ತಿಲ್ಲ. ಇದು ವಿರಾಮವನ್ನು ತೆಗೆದುಕೊಂಡಿರಬಹುದು, ಆದರೆ ಅದು ಯಾವಾಗ ಮರುಕಳಿಸುತ್ತದೆ ಎಂದು ನಮಗೆ ತಿಳಿದಿಲ್ಲ ಎಂದು ಹೇಳಿದರು.
ಇದು ‘ಬಹುರೂಪಿಯಾ’ (ಸದಾ ವಿಕಸನಗೊಳ್ಳುವ) ರೋಗ. ಇದನ್ನು ನಿಲ್ಲಿಸಲು ಸುಮಾರು 185 ಕೋಟಿ ಡೋಸ್ ಗಳನ್ನು ನೀಡಲಾಯಿತು, ಇದು ಜಗತ್ತನ್ನು ಚಕಿತಗೊಳಿಸುತ್ತದೆ. ನಿಮ್ಮ ಬೆಂಬಲದಿಂದ ಇದು ಸಾಧ್ಯವಾಗಿದೆ ಎಂದಿದ್ದಾರೆ
ಇದೇ ವೇಳೆ .ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಗುರುತಿಸಲು ಗುಜರಾತ್‌ನ ಪ್ರತಿ ಜಿಲ್ಲೆಯಲ್ಲಿ 75 ಕೆರೆಗಳನ್ನು ನಿರ್ಮಿಸಲು ಪ್ರಧಾನಿ ಕರೆ ನೀಡಿದರು.