ನವದೆಹಲಿ: ಮಂಗಳೂರು-ಹುಬ್ಬಳ್ಳಿ ಸಂಚರಿಸುವವರಿಗೆ ಗುಡ್ ನ್ಯೂಸ್ ಲಭ್ಯವಾಗಿದ್ದು, ಮೇ 1ರಿಂದ ಮಂಗಳೂರು-ಹುಬ್ಬಳ್ಳಿ ವಿಮಾನಯಾನ ಆರಂಭಗೊಳ್ಳಲಿದೆ.
ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಮಂಗಳೂರು ಹಾಗೂ ಹುಬ್ಬಳ್ಳಿ ನಡುವೆ ಇಂಡಿಗೋ ವಿಮಾನ ಹಾರಾಟ ನಡೆಸಲಿದ್ದು, ವಾರದ ನಾಲ್ಕು ದಿನಗಳ ಕಾಲ ವಿಮಾನ ಹಾರಾಟ ನಡೆಸಲಿದೆ. ಅದೇ ರೀತಿ ಹುಬ್ಬಳ್ಳಿ ಮೈಸೂರು ವಿಮಾನಯಾನ ಆರಂಭಗೊಳ್ಳಲಿದ್ದು, ವಾರದ ಮೂರು ದಿನಗಳ ಕಾಲ ಹಾರಾಟ ನಡೆಸಲಿದೆ. ಇದು ಮೇ ಮೂರರಿಂದ ಆರಂಭಗೊಳ್ಳಲಿದೆ.