ಪ್ರಧಾನಿ ಮೇೂದಿಗ್ಗಿಂದು ಹುಟ್ಟು ಹಬ್ಬ :71ರ ಸಂಖ್ಯಾ ಫಲ ಹೇಗಿದೆ ನೇೂಡಿ: ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ
ದೇಶದ ಪ್ರಧಾನಿ ನರೇಂದ್ರ ದಾಮೇೂದರ್ ಮೇೂದಿಯವರಿಗ್ಗಿಂದು 71ರ ಹುಟ್ಟು ಹಬ್ಬ.ಮೇೂದಿಯವರು ಪ್ರಧಾನಿ ಪೀಠ ಸ್ವೀಕರಿಸಿ 7 ವರುಷಗಳು ತುಂಬಿದೆ. ಇನ್ನು ಇರುವ ಅವಧಿ ಕೇವಲ ಮೂರು ವರುಷ.ಹಾಗಾಗಿ ಇದೊಂದು ತುಂಬಾ ಅಥ೯ ಪೂಣ೯ವಾದ ಸಂದರ್ಭ.ಈ ಏಳರ ಆಟ ಮೇೂದಿಯ ಜೀವನ ಪೂತಿ೯ ತುಂಬಾ ಮಹತ್ತರ ಸಂಖ್ಯೆ ಅನ್ನುವುದು ಮೇಲ್ನೋಟಕ್ಕೆ ಕಾಣುವ ಸಂಖ್ಯಾ ಭವಿಷ್ಯ.
ಇನ್ನು ಮುಂದಿನ ಚುನಾವಣೆ 2024ಕ್ಕೆ ಆವಾಗ ಮೇೂದಿಜಿಯವರಿಗೆ 74 ತುಂಬಿ ಬಿಡುತ್ತದೆ.ಬಿಜೆಪಿ ಪಕ್ಷದ ಪ್ರಾಯದ ಸಂಖ್ಯಾ ನಿಯಮದ ಪ್ರಕಾರ 75ರ ಅನಂತರ ರಾಜಕೀಯದಿಂದ ವಾನ ಪ್ರಸ್ಥದ ಕಡೆಗೆ ನಡೆಯುವ ಪ್ರಾಯ.ಇದಾಗಲೇ ಈ 75ರ ಗಡಿ ದಾಟಿದ ಬಿಜೆಪಿಯ ಪ್ರಮುಖ ನಾಯಕರಿಗೆ ವಾನ ಪ್ರಸ್ಥದ ಕಡೆದಾರಿ ತೇೂರಿಸಿದ ಪ್ರಾಯವೂ ಹೌದು.2024ರ ಲೇೂಕ ಸಭಾ ಚುನಾವಣೆಯಲ್ಲಿ ಮೇೂದಿಯವರಿಗೆ ಸ್ಪಧಿ೯ಸುವ ಪ್ರಾಯದ ಆಹ೯ತೆ ಇದೆ ಯಾಕೆಂದರೆ ಆಗ ಅವರಿಗೆ 74 ತುಂಬಿರುತ್ತದೆ. ಆದ್ರೆ ಮೇೂದಿಯವರಿಗೂ ಮತ್ತು ಬಿಜೆಪಿಯ ಒಳಗುಾ ಹೊರಗೂ ಇರುವ ದೊಡ್ಡ ಪ್ರಶ್ನೆ ಅಂದರೆ 2024 ರ ಚುನಾವಣೆಯಲ್ಲಿ ಬಿಜೆಪಿ ಅಥಾ೯ತ ಮೇೂದಿ ಗೆದ್ದರೆ ಅವರು ಕೇವಲ ಒಂದು ವರುಷಕ್ಕೆ ಮಾತ್ರ ಪ್ರಧಾನಿಯಾಗಿ ಮುಂದುವರಿಯ ಬೇಕೇ? ಕನಾ೯ಟಕದಲ್ಲಿ ಯಡಿಯೂರಪ್ಪನವರಿಗೆ ಹೇಳಿದ ತರಹ?..ಇದು ಮುಂದೆ ಸಾಕಷ್ಟು ಚಚೆ೯ಗೂ ಬರ ಬಹುದಾದ ಪ್ರಶ್ನೆ. ವಿರೇೂಧಿಗಳಂತೂ ಇದನ್ನೇ ಬ್ರಹ್ಮಾಸ್ತ್ರ ವಾಗಿ ಬಳಸಿಕೊಳ್ಳುವುದಂತೂ ಗ್ಯಾರಂಟಿ.ಆದರೆ ಮೇೂದಿಯವರಿಗ್ಗಂತೂ ಅಧಿಕಾರದಲ್ಲಿ ಮುಂದುವರಿಯ ಬೇಕೆಂಬ ಜಾಯಾಮಾನದವರಲ್ಲ.ಆದರೆ ಪಕ್ಷ ಗೆದ್ದು ಬರ ಬೇಕಾದರೆ ಮೇೂದಿಯವರ ಹೆಸರು ಬೇಕೇ ಬೇಕು ಅನ್ನುವ ಪರಿಸ್ಥಿತಿ.ಮೇೂದಿ ಹೆಸರಿನಲ್ಲಿಯೇ ಗೆದ್ದು ಬಂದವರು ಮೇುಾದಿಯವರು ಬೇಡ ಅನ್ನುವ ನೆೈತಿಕೆ ಎಲ್ಲಿದೆ ?
ಮೇೂದಿವರಿಗೆ 2025ಕ್ಕೆ 75ತುಂಬಿದರೂ ಕೂಡಾ ಜನರು ಅವರನ್ನು ಬೇಡ ಅನ್ನುವ ಮನ:ಸ್ಥಿತಿಯಲ್ಲಿ ಖಂಡಿತವಾಗಿಯೂ ಇಲ್ಲ.ಅವರ ಮನೇೂ ಸಾಮಥ್ಯ೯ ದೇಹದ ತಾಖತ್ತುಚೆನ್ನಾಗಿ ಇರುವಾಗ 2029 ರವರೆಗೂ ಈ ದೇಶಕ್ಕೆ ಮೇೂದಿಯವರ ಅಗತ್ಯವಿದೆ ಅನ್ನುವುದನ್ಮು ಖಂಡಿತವಾಗಿಯೂ ಪ್ರತಿಪಾದಿಸುತ್ತಾರೆ.ಹಾಗಾಗಿ ಮೇೂದಿಯವರು 15 ವರುಷಗಳ ಕಾಲ ಈ ದೇಶದ ಪ್ರಧಾನಿಯಾಗುವುದು ಶತ ಸಿದ್ದ.ಅದರಲ್ಲಿ ಎರಡುಮಾತಿಲ್ಲ.
ಬಿಜೆಪಿಗ್ಗಿಂತ ಮೇೂದಿಯವರು ಹೇಗೆ ಭಿನ್ನ ?.
ಇದು ಕುತೂಹಲದ ಪ್ರಶ್ನೆ.ಮೇುಾದಿ ಬಿಜೆಪಿ ಹೌದು ಆದರೆ ಬಿಜೆಪಿ ಮೇೂದಿ ಅಲ್ಲ!.ಇದು ಖಂಡಿತವಾಗಿಯೂ ಸತ್ಯ.ಈ ಸತ್ಯದ ಅರಿವು ಮತದಾರರಿಗೆ ಆಗಿದೆ.ಮಾತ್ರವಲ್ಲ ಪಕ್ಷದವರಿಗೂ ಗೊತ್ತಿದೆ ಹಾಗಾಗಿ ಮೇೂದಿ ಅನ್ನುವ " ಬ್ರ್ಯಾಂಡ್ ನೇಮ್" ಬಿಜೆಪಿ ಗೆಲುವಿನ ಪ್ರಧಾನ ಅಸ್ತ್ರ..ಬಿಜೆಪಿ ಯವರಿಗೆ ಹಿಂದುತ್ವದ ಅಸ್ತ್ರ ಚಲಾವಣೆಯಲ್ಲಿ ಮಾಸಿದ ತಕ್ಷಣವೇ ಬಳಸಲು ಇರುವ ಪ್ರಮುಖ ಅಸ್ತ್ರವೆಂದರೆ ಮೇೂದಿ ಎಂಬ ನಾಮಾಸ್ತ್ರ.ಮೇೂದಿಯವರ ಪ್ರಾಮಾಣಿಕತೆ; ಅವಿಶ್ರಾಂತ ದುಡಿಮೆ; ದೂರ ದಶಿ೯ತ್ವ ಚಾಣಾಕ್ಷ ತನ ;ವಚ೯ಸ್ಸು ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರ ಸ್ನೇಹಿತನದ ವ್ಯವಹಾರದ ಗತ್ತುಗಾರಿಕೆ...ಅದಕ್ಕಿಂತ ಮುಖ್ಯವಾಗಿ ಅಪ್ಪಟ ರಾಷ್ಟ್ರ ಭಕ್ತ.ಇದರಿಂದಲೇ ಅವರಿಗೆ ಭಕ್ತಾದಿಗಳು ಜಾಸ್ತಿ.
ಇಂದು ಮೇಾದಿಯವರು ಎಷ್ಟು ಖ್ಯಾತರು ಅಂದರೆ ಗ್ರಾಮ ಮಟ್ಟದಿಂದ ಹಿಡಿದು ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದವರಗೆ ಮೇೂದಿಯವರ ಹೆಸರನ್ನು ಪ್ರತಿದಿನವೂ ತಪಿಸುವವರೂ ಇದ್ದಾರೆ ಶಪಿಸುವವರೂ ಇದ್ದಾರೆ!!ಹಾಗಾಗಿ ಮೇೂದಿ ಅನ್ನುವ ಹೆಸರು ಜಗದಗಲಕ್ಕೂ ಪಸರಿಸಿದೆ.
ಮೇೂದಿಯವರ ಭಕ್ತರಿಗೆ ಮೇೂದಿಯವರ ಮೇಲೆ ಒಂದಿಷ್ಟು ಬೇಸರವೂ ಇದೆ.ಅದಕ್ಕೆ ಮುಖ್ಯ ಕಾರಣ ಇವರ ಹೆಸರನ್ನು ಹೇಳಿ ಕೊಂಡು ಗೆದ್ದು ಬಂದು ನಾವುಗಳೇ ಜನ ನಾಯಕರು ಅಂದುಕೊಂಡು ಭ್ರಷ್ಟಾಚಾರದಲ್ಲಿ ಮುಳುಗಿರುವವರನ್ನು ಇವರು ಸಹಿಸಿಕೊಂಡು ಬೆನ್ನು ತಟ್ಟುತ್ತಾರಲ್ಲ..ಇದು ಸ್ವಲ್ಪ ಮೇೂದಿಯವರ ಬಗ್ಗೆ ಬೇಸರ ತರುವ ಸಂಗತಿಯೂ ಹೌದು.ಹಾಗಂತ ಇಂತವರನ್ನು ಪೂತಿ೯ಯಾಗಿ ಹೊರಗಿಟ್ಟು ರಾಜಕೀಯ ಮಾಡುವುದು ಮೇೂದಿಯವರಿಗುಾ ಕಷ್ಟ.ಇದು ಮೇೂದಿ ಯವರಿಗೂ ತಿಳಿದಿದೆ.
ರಾಷ್ಟ್ರ ರಕ್ಷಣಾ ಕಾಯ೯ದಲ್ಲಿ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ದೇಶದಲ್ಲಿ ಮಹತ್ತರ ಬದಲಾವಣೆ
ಅಂದರೆ ಸಂವಿಧಾನದವಿಧಿ 370 ಮತ್ತು 35A;ರದ್ದು ಪೌರತ್ವ ಕಾಯಿದೆ; ಜಿ ಎಸ್ ಟಿ; ಅನ್ನುವ ರಾಷ್ಟೀಯ ತೆರಿಗೆ ನೀತಿ ;ರಾಮ ಮಂದಿರ ದಂತಹ ಸೂಕ್ಷ್ಮ ವಿಚಾರಗಳನ್ನು ನ್ಯಾಯಾಂಗದ ಪರಿಧಿಯಲ್ಲಿ ಬಗೆ ಹರಿಸಿದ್ದು ಭ್ರಷ್ಟಾಚಾರದ ತಡೆಗೆ ನೇೂಟ್ ಬ್ಯಾನ್ ಅಸ್ತ್ರ ಮುಂತಾದ ಪ್ರಮುಖ ದಿಟ್ಟ ಹೆಜ್ಜೆಗಳು ಅವರನ್ನು ಸಾಧನೆಯ ಉತ್ತುಂಗಕ್ಕೆ ಏರಿಸಿದ ಕ್ರಾಂತಿಕಾರಿ ನಿಣ೯ಯಗಳು.
ಆದರೂ ಮೇೂದಿಯವರು ಬಹುಮುಖ್ಯವಾದ ಸವಾಲುಗಳು ಇನ್ನೂ ಜೀವಂತವಾಗಿಯೇ ಇವೆ. ಕೊರೊನದ ನಡುವೇ ದೇಶದಲ್ಲಿ ಉದ್ಯೋಗ ಆಥಿ೯ಕ ಚೇತರಿಕೆ ಆಗ ಬೇಕಾಗಿದೆ; ಬೆಲೆ ಏರಿಕೆ ನಿಯಂತ್ರಣ ಮಾಡ ಬೇಕಾದ ಅತೀ ದೊಡ್ಡ ಸವಾಲಿದೆ. ದೇಶದ ಹೆಮ್ಮೆಯ ಪ್ರಧಾನಿ ಎಂದೇ ಖ್ಯಾತರಾದ ಮೇೂದಿಯವರು ಈ ಎಲ್ಲಾ ಸವಾಲು ಸಮಸ್ಯೆಗಳನ್ನು ಬಗೆ ಹರಿಸಲಿ ಅನ್ನುವುದು ನಮ್ಮೆಲ್ಲರ ಆಶಯಾವೂ ಹೌದು. ಮೇೂದಿಯವರ ಹುಟ್ಟು ಹಬ್ಬಕ್ಕೆ ನಾವೆಲ್ಲರೂ ಕೆೈಜೇೂಡಿಸಿ ನಮೇೂ...ಅನ್ನೇೂಣ.
ಕೆುಾಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಉಡುಪಿ.