ಪ್ರಮೋದ್‌ಮುತಾಲಿಕ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪ್ರಮೋದ್‌ಮುತಾಲಿಕ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮುಸ್ಲಿಮರ ಮಾನಸಿಕತೆ ಸರಿಯಾಗಬೇಕಾದ್ರೆ ಆರ್ಥಿಕ ಬಹಿಷ್ಕಾರವೇ ಸೇರಿ:-ಪ್ರಮೋದ್ ಮುತಾಲಿಕ್ ಹೇಳಿಕೆ 23-3-2022

ಉಡುಪಿ ಜಾತ್ರೆ, ಶಿವಮೊಗ್ಗ ಮಾರಿಕಾಂಬ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಲಾಗಿದೆ. ಈ ವಿಚಾರ ಇಂದು ಸದನದಲ್ಲೂ ಪ್ರತಿಧ್ವನಿಸಿದೆ.

ಈ ಬಗ್ಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿ, ಇದೇ ಸರಿಯಾದ ನಿರ್ಧಾರ ಎಂದಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಮುಸ್ಲಿಂರಿಗೆ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಬಾರದು. ಮುಸ್ಲಿಮರ ಮಾನಸಿಕತೆ ಸರಿಯಾಗಬೇಕಾದ್ರೆ ಆರ್ಥಿಕ ಬಹಿಷ್ಕಾರ ಹಾಕಿದ್ರೆ ಸರಿಯಾಗುತ್ತೆ ಎಂದಿದ್ದಾರೆ. ಉಡುಪಿ ದೇವಸ್ಥಾನ ಮಂಡಳಿಯ ಒಳ್ಳೆಯ ನಿರ್ಣಯವಾಗಿದೆ. ಅದನ್ನ ನಾನು ಸ್ವಾಗತ ಮಾಡುತ್ತೇನೆ, ಅಭಿನಂದನೆ ಮಾಡುತ್ತೇನೆ.

ನಮಗೆ ದೇಶ ಹಾಗೂ ಹಿಂದುತ್ವ ಉಳಿಸಬೇಕಾಗಿದೆ, ನಾವು ಈ ದೇಶ ಕಳೆದುಕೊಳ್ಳಲು ತಯಾರಿಲ್ಲ. ನಮ್ಮ ಸಂವಿಧಾನದಕ್ಕೆ ಮುಸ್ಲಿಮರು ಬೆಲೆ ಕೊಡ್ತಿಲ್ಲ, ಕಾನೂನಿಗೆ ಬೆಲೆ ಕೊಡ್ತಿಲ್ಲ. ಚುನಾವಣೆಗೆ ಹಾಗೂ ಈ ವಿವಾದಕ್ಕೆ ಸಂಬಂಧವಿಲ್ಲ. ಇದು ಬಹಳ ದಿನದಿಂದ ನಡೆದು ಬಂದಿರುವ ರೀತಿ ಎಂದ ಅವರು, ಮಸೀದಿಯ ಕಾಂಪ್ಲೆಕ್ಸ್‍ಗಳಲ್ಲಿ ಹಿಂದೂಗಳಿಗೆ ವ್ಯಾಪಾರಕ್ಕೆ ಬಾಡಿಗೆ ಕೊಡಲ್ಲ. ಈ ರೀತಿ ಬಹಳ ಉದಾಹರಣೆ ಇವೆ ಎಂದಿದ್ದಾರೆ.
© all rights reserved
made with by templateszoo