ಉಡುಪಿ ರಾಜ್ಯ ಮಂಗಳೂರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಉಡುಪಿ ರಾಜ್ಯ ಮಂಗಳೂರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ:- ಉಡುಪಿ ಪ್ರಥಮ ದಕ್ಷಿಣ ಕನ್ನಡ ದ್ವಿತೀಯ

 


2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟಾರೆ ಶೇ. 73.40 ಮಕ್ಕಳು ತೇರ್ಗಡೆಯಾಗಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಮಂಡಳಿಯ ಅಧಿಕಾರಿಗಳು ಇಂದು ಬೆಳಗ್ಗೆ 10.30ಕ್ಕೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟಿಸಿದರು. ಮಂಡಳಿ ವೆಬ್‌ಸೈಟ್ https://karresults.nic.inನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.

ಉಡುಪಿ 94ಶೇ. ಫಲಿತಾಂಶ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದೆ .ಶೇ. 92.12 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಎರಡನೇ ಸ್ಥಾನದಲ್ಲಿದ್ದರೆ, ಶೇ. 88.67 ಫಲಿತಾಂಶದೊಂದಿಗೆ ಶಿವಮೊಗ್ಗ ಮೂರನೇ ಸ್ಥಾನದಲ್ಲಿದೆ. ಶೇ. 81.11 ಫಲಿತಾಂಶದೊಂದಿಗೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕಳೆದ ಬಾರಿ 87.87ರಷ್ಟು ಫಲಿತಾಂಶ ಬಂದಿತ್ತು. ಇನ್ನು ಬಾಲಕರು ಶೇ. 65.90 ಫಲಿತಾಂಶದೊಂದಿಗೆ ತೀವ್ರ ಕುಸಿತ ಕಂಡಿದ್ದಾರೆ. ಕಳೆದ ಬಾರಿ 80.08 ರಷ್ಟು ಫಲಿತಾಂಶ ಬಂದಿತ್ತು.

ಈ ಬಾರಿ ಒಟ್ಟು 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 4,41,910 ವಿದ್ಯಾರ್ಥಿಗಳು ಮತ್ತು 4,28,058 ವಿದ್ಯಾರ್ಥಿನಿಯರು ಪರೀಕ್ಷೆ ಹಾಜರಾಗಿದ್ದರು. ಕಳೆದ ವರ್ಷ ಶೇ.83.89 ಫಲಿತಾಂಶ ಪ್ರಕಟವಾಗಿತ್ತು.








ವಿಸ್ತಾರ ನ್ಯೂಸ್ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಸೇರಿ 11 ಜನ ಬಿಜೆಪಿ ವಕ್ತಾರರಾಗಿ ನೇಮಕ


ಬೆಂಗಳೂರು : ಹಿರಿಯ ಪತ್ರಕರ್ತ, ವಿಸ್ತಾರ ನ್ಯೂಸ್ ನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ರಾಜ್ಯ ಬಿಜೆಪಿ ಹರಿಪ್ರಕಾಶ್ ಕೋಣೆಮನೆ ಸೇರಿ 11 ಮಂದಿ ವಕ್ತಾರರನ್ನು ನೇಮಕ ಮಾಡಿದೆ. 

ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಶ್ವಥ್ ನಾರಾಯಣ ಮುಖ್ಯ ವಕ್ತಾರರಾಗಿದ್ದು, ಛಲವಾದಿ ನಾರಾಯಣಸ್ವಾಮಿ, ಡಾ. ತೇಜಸ್ವಿನಿ ಗೌಡ, ಕೆಎಸ್ ನವೀನ್, ಎಂಜಿ ಮಹೇಶ್, ಹೆಚ್ ಎನ್ ಚಂದ್ರಶೇಖರ್, ನರೇಂದ್ರ ರಂಗಪ್ಪ, ಸುರಭಿ ಹೊದಿಗೆರೆ, ಅಶೋಕ್ ಕೆಎಂ ಗೌಡ, ಹೆಚ್ ವೆಂಕಟೇಶ್ ದೊಡ್ಡೇರಿ ಸೇರಿದಂತೆ 11 ಮಂದಿ ವಕ್ತಾರರಾಗಿ ನಿಯುಕ್ತಿಗೊಂಡಿದ್ದಾರೆ. ಇದೇ ವೇಳೆ ಹಲವು ವಿಭಾಗಗಳಿಗೆ ಸಂಚಾಲಕ-ಸಹ ಸಂಚಾಲಕರನ್ನು ಬಿಜೆಪಿ ನೇಮಕ ಮಾಡಿದೆ. ಸಾಮಾಜಿಕ ಜಾಲತಾಣ ವಿಭಾಗಕ್ಕೆ ಸಂಚಾಲಕರಾಗಿ ಪ್ರಶಾಂತ್ ಮಾಕನೂರು, ಸಹ ಸಂಚಾಲಕರಾಗಿ ನರೇಂದ್ರ ಮೂರ್ತಿ, ಐಟಿ ವಿಭಾಗದ ಸಂಚಾಲಕರಾಗಿ ನಿತಿನ್ ರಾಜ್ ನಾಯಕ್, ಶ್ಯಾಮಲಾ ರಘುನಂದನ್ ಸಹ ಸಂಚಾಲಕರಾಗಿ ನೇಮಕಗೊಂಡಿದ್ದರೆ, ಮಾಧ್ಯಮ ವಿಭಾಗಕ್ಕೆ ಕರುಣಾಕರ ಖಾಸಲೆ ಸಂಚಾಲರಾಗಿ, ಪ್ರಶಾಂತ್ ಕೆಡಂಜಿ ಸಹ ಸಂಚಾಲಕರಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.










© all rights reserved
made with by templateszoo