ಉಡುಪಿ: ನೂರಾರು ವಿದ್ಯಾರ್ಥಿಗಳನ್ನು ದಾಖಲಿಸುವುದಾಗಿ ಹೇಳಿ ಖಾಸಗಿ ಕಾಲೇಜಿಗೆ 19.5 ಲಕ್ಷ ವಂಚಿಸಿದ ವಿಚಿತ್ರ ಘಟನೆ ವರದಿಯಾಗಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.
ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಪ್ರಸಾದ್ ನೇತ್ರಾಲಯ ದಲ್ಲಿ ನೇತ್ರಾಜ್ಯೋತಿ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸಸ್ ಮತ್ತು ನೇತ್ರಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಎಂಬ ಎರಡು ಅರೆ ವೈದ್ಯಕೀಯ ಕಾಲೇಜುಗಳು 2016 ರಿಂದ ಕಾರ್ಯಚರಿಸುತ್ತಿದೆ. ಈ ಶೈಕ್ಷಣಿಕ ವರ್ಷದಲ್ಲಿ ಕಾಲೇಜು ವಿದ್ಯಾರ್ಥಿಗಳ ದಾಖಲಾತಿಯ ಬಗ್ಗೆ ಸಾಕಷ್ಟು ಪ್ರಚಾರವನ್ನು ಬೇರೆ ಬೇರೆ ಮಾಧ್ಯಮಗಳಲ್ಲಿ ನೀಡಿರುತ್ತಾರೆ. ಈ ವಿಚಾರವನ್ನು ಅರಿತು ಆರೋಪಿ ಕೇಶಮ್ ವಿಕ್ರಮ್ ಸಿಂಗ್ ಮಣಿಪುರ ರಾಜ್ಯ ರವರು ಮ್ಯಾನೇಜರ್’ಗೆ ವಾಟ್ಸ್ ಆಪ್ ಕರೆ ಮಾಡಿ ತನ್ನ ರಾಜ್ಯದಲ್ಲಿ ಅರೆ ವೈದ್ಯಕೀಯ ಶಿಕ್ಷಣಕ್ಕೆ ಸಿದ್ದರಿರುವ ಸಾವಿರಾರು ವಿಧ್ಯಾರ್ಥಿ/ವಿದ್ಯಾರ್ಥಿನಿಯರಿದ್ದಾರೆ. ಈ ವರ್ಷ 268 ವಿದ್ಯಾರ್ಥಿಗಳನ್ನು ಕರೆ ತಂದು ಸಂಸ್ಧೆಗೆ ದಾಖಲು ಮಾಡುತ್ತೇನೆ. ವಿದ್ಯಾರ್ಥಿಗಳನ್ನು ಕರೆ ತರಲು ಟ್ರೈನ್ ಹಾಗೂ ವಿಮಾನಕ್ಕೆ ತಗಲುವ ಖರ್ಚುಗಳನ್ನು ಸಂಸ್ಧೆಯಿಂದಲೆ ನೀಡಬೇಕಾಗುತ್ತದೆ ಎಂದು ತಿಳಿಸಿದ್ದಾನೆ. ಅದರಂತೆ ದಿನಾಂಕ 19/09/2024 ರಿಂದ ದಿನಾಂಕ 24/01/2025 ರವರೆಗೆ ಹಂತ ಹಂತವಾಗಿ 19,56,138/- ರೂಪಾಯಿ ಹಣವನ್ನು ಪಡೆದು ವಿದ್ಯಾರ್ಥಿಗಳನ್ನು ದಾಖಲಾತಿ ಮಾಡದೇ ಮೋಸ ಮತ್ತು ವಂಚನೆ ಮಾಡಿದ್ದಾನೆ.
ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 12/2025 ಕಲಂ: 66 (ಸಿ) ಐ.ಟಿ. ಆಕ್ಟ್. , 318(4) BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ