ಮಣಿಪಾಲ: ನಗರ ಪೊಲೀಸ್ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಿನ ಆರೋಪಿ ಇಸಾಕ್ ನನ್ನು ಸರ್ಜರಿ ಬಗ್ಗೆ ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿರುತ್ತದೆ.
ಇತರ ಆರೋಪಿಗಳಾದ 1) ರಾಹಿದ್(25), ಸುರತ್ಕಲ್ ಮಂಗಳೂರು, 2) ಸಾಮಿಲ್ (26), ಕ್ಯಾಲಿಕಟ್ ಜಿಲ್ಲೆ, ಕೇರಳ ಮತ್ತು 3) ನಿಜಾಮುದ್ದೀನ್(25), ಮಂಜೇಶ್ವರ, ಕಾಸರಕೋಡು, ಕೇರಳ ಇವರುಗಳನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆ ನಡೆಸಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಮಾನ್ಯ ನ್ಯಾಯಾಲಯವು ಈ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ನೀಡಿರುತ್ತಾರೆ.
ನಿನ್ನೆ ಘಟನೆ ನಡೆದ ಸ್ಥಳದಲ್ಲಿ ಸ್ಥಳ ಮಹಜರು ನಡೆಸಲಾಗಿದ್ದು, ತನಿಖೆ ಮುಂದುವರೆದಿರುತ್ತದೆ ಎಂದು ಉಡುಪಿ ಜಿಲ್ಲಾ ಎಸ್.ಪಿ ಡಾ. ಅರುಣ್ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ