ಮಣಿಪಾಲದ ರಾಜತಾದ್ರಿ ರಸ್ತೆಯಲ್ಲಿ ಕರ್ಕಶ ಹಾರ್ನ್ ಮಾಡಿಕೊಂಡು ಚಲಾಯಿಸುತ್ತಿದ್ದ ಮೂರು ದುಬೈ ನೊಂದಾಯಿತ ಕಾರುಗಳನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ದಂಡ ವಿಧಿಸಿದ ಘಟನೆ ಫೆ.27ರಂದು ರಾತ್ರಿ ವೇಳೆ ನಡೆದಿದೆ.
ದುಬೈ ನೋಂದಾಯಿತ ಮೂರು ಕಾರುಗಳಲ್ಲಿ ಕೇರಳ ಮೂಲದವರು ಗೋವಾಕ್ಕೆ ಹೋಗಿ ವಾಪಾಸ್ಸು ಕೇರಳ ಹೋಗುತ್ತಿದ್ದರು.
ಈ ಮಧ್ಯೆ ಮಣಿಪಾಲ ದಲ್ಲಿರುವ ಗೆಳೆಯರನ್ನು ಭೇಟಿಯಾಗಲು ಬಂದಿದ್ದು, ಈ ವೇಳೆ ಇವರು ಅಜಾಗರೂಕತೆಯಿಂದ ಕರ್ಕಶ ಹಾರ್ನ್ ಬಳಸಿ ಕಾರನ್ನು ಚಲಾಯಿಸಿರುವ ಬಗ್ಗೆ ಸಾರ್ವಜನಿಕರಿಂದ ಪೊಲೀಸರಿಗೆ ದೂರು ಬಂದಿತ್ತು.
ಅದರ ಆಧಾರದ ಮೇಲೆ ಮಣಿಪಾಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಅದರಂತೆ ಸ್ಥಳದಲ್ಲಿದ್ದ ದುಬೈ ನೋಂದಾಯಿತ 3 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ದುಬೈ ನೋಂದಾಯಿತ ಈ ಕಾರುಗಳ ದಾಖಲೆಗಳ ಪರಿಶೀಲನೆ ಬಗ್ಗೆ ಪೊಲೀಸರು ಉಡುಪಿ ಆರ್‌ಟಿಓಗೆ ಪತ್ರ ಬರೆದಿದ್ದು, ಅದರಂತೆ ಆರ್‌ಟಿಓ ಈ ಮೂರು ಕಾರುಗಳ ದಾಖಲಾತಿಗಳನ್ನು ಪರಿಶೀಲಿಸಿ, ಎಲ್ಲ ದಾಖಲಾತಿಗಳು ಕಾನೂನು ಬದ್ಧವಾಗಿ ಸರಿಯಾಗಿದೆಂದು ತಿಳಿಸಿದ್ದಾರೆ.
ನಂತರದಲ್ಲಿ ಈ ಕಾರುಗಳನ್ನು ಅಜಾಗರೂಕವಾಗಿ ಚಾಲನೆ ಮಾಡಿರುವ ಬಗ್ಗೆ ಹಾಗೂ ಕರ್ಕಶ ಹಾರ್ನ್ ಬಳಸಿರುವ ಬಗ್ಗೆ ಪ್ರತಿ ಕಾರಿಗೆ 1500ರೂ. ನಂತೆ ದಂಡ ವಿಧಿಸಿ, ಬಿಡುಗಡೆಗೊಳಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ