ಕರವೇ ಮಹಿಳಾ ಘಟಕದ ಅಧ್ಯಕ್ಷೆ ಹೆಲೆನ್ ಸೋನ್ಸ್ ನೇತೃತ್ವದಲ್ಲಿ, ಘಟಕದ ಪದಾಧಿಕಾರಿಗಳು ಮತ್ತು ಸದಸ್ಯೆಯರು ಮಾರ್ಚ್ 20, 2025 ರಂದು ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮತ್ತು ಉಡುಪಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ಅಶೋಕ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಮನವಿಯಲ್ಲಿ, ಹೊರರೋಗಿ ವಿಭಾಗದ ಪ್ರಸ್ತುತ ಕಟ್ಟಡವು ತಗಡಿನಿಂದ ನಿರ್ಮಿತವಾಗಿದ್ದು, ಅಲ್ಲಿ ಅತಿಯಾದ ಸೆಕೆ ಮತ್ತು ಧೂಳಿನಿಂದ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ, ರೋಗಿಗಳ ಹಿತದೃಷ್ಟಿಯಿಂದ ಈ ವಿಭಾಗವನ್ನು ಆದಷ್ಟು ಬೇಗ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಕರವೇ ಮಹಿಳಾ ಘಟಕವು ಒತ್ತಾಯಿಸಿದೆ.
ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮತ್ತು ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಕರವೇ ಮಹಿಳಾ ಘಟಕ ತಿಳಿಸಿದೆ.
ಈ ಸಂದರ್ಭದಲ್ಲಿ ಕರವೇ ಮಹಿಳಾ ಘಟಕದ ಉಪಾಧ್ಯಕ್ಷೆ ಪವಿತ್ರಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮುಕ್ತ ಸಾವಂತ್, ಸಲಹೆಗಾರ್ತಿ ವಿಜಯ ಮತ್ತು ಸದಸ್ಯೆಯರಾದ ಅನುರಾಧ, ಪ್ರಮೀಳಾ, ಶೋಭಾ, ಸುನಿತಾ, ಅಶ್ವ, ಅರ್ಚನಾ, ಶಾಂತ, ತುಳಸಿ ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ