ಉಡುಪಿ: ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ಮಾರ್ಚ್ 16, 2025 ರಂದು ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಜಾತ್ರೆಯ ಪ್ರಯುಕ್ತ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
ಬದಲಾದ ಮಾರ್ಗದ ವಿವರಗಳು:
* ಉಡುಪಿಯಿಂದ ಹೆಬ್ರಿ, ಆಗುಂಬೆ ಕಡೆಗೆ ಹೋಗುವ ವಾಹನಗಳು ಹಿರಿಯಡ್ಕ ಜಂಕ್ಷನ್‌ನಲ್ಲಿ ಮಾರ್ಗ ಬದಲಾಯಿಸಿ ಕೋಟ್ನಾ ಕಟ್ಟೆ, ಹರಿಖಂಡಿಗೆ, ಬೈರಂಪಳ್ಳಿ, ಪೆರ್ಡೂರು, ಮೇಲ್ಪಟೆ ಮಾರ್ಗವಾಗಿ ಅಥವಾ ಹಿರಿಯಡ್ಕ, ಬಜೆ, ಕುಕ್ಕೆಹಳ್ಳಿ, ಪೇತ್ರಿ ಮಾರ್ಗವಾಗಿ ಹೆಬ್ರಿ ಆಗುಂಬೆಗೆ ಸಂಚರಿಸಬೇಕು.
* ಆಗುಂಬೆ-ಹೆಬ್ರಿಯಿಂದ ಉಡುಪಿ ಕಡೆಗೆ ಬರುವ ವಾಹನಗಳು ಪೆರ್ಡೂರು ಮೇಲ್ಪಟೆ, ಬೈರಂಪಳ್ಳಿ, ಹರಿಖಂಡಿಗೆ, ಕೋಟ್ನಾ ಕಟ್ಟೆ, ಹಿರಿಯಡ್ಕ ಜಂಕ್ಷನ್ ಮಾರ್ಗವಾಗಿ ಉಡುಪಿಗೆ ಸಂಚರಿಸಬೇಕು.
* ಹೆಬ್ರಿಯಿಂದ ಪೆರ್ಡೂರು ಮಾರ್ಗವಾಗಿ ಪೇತ್ರಿ, ಬ್ರಹ್ಮಾವರ ಕಡೆಗೆ ತೆರಳುವ ವಾಹನಗಳು ಪೆರ್ಡೂರು ಮೇಲ್ವೇಟೆಯ ಆರ್.ಎಸ್.ಎಸ್ ಬ್ಯಾಂಕ್ ಬಳಿ ಇರುವ ಅಲಂಗಾರು ರಸ್ತೆಯ ಮಾರ್ಗವಾಗಿ ಕರ್ಜೆ, ಪೇತ್ರಿ, ಬ್ರಹ್ಮಾವರ ಕಡೆ ಸಂಚರಿಸಬೇಕು.
* ಮಾರ್ಚ್ 16, 2025 ರಂದು ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪೆರ್ಡೂರು ಕೆಳಪೇಟೆಯಿಂದ ಮೇಲ್ವೇಟೆಯ ಬಸ್ ನಿಲ್ದಾಣದವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ಈ ಬದಲಾವಣೆಯು ಮಾರ್ಚ್ 16, 2025 ರಂದು ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ಭಕ್ತಾದಿಗಳು ಮತ್ತು ಸಾರ್ವಜನಿಕರು ಈ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಹಕರಿಸಬೇಕೆಂದು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವಿನಂತಿಸಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ