ಉಡುಪಿ: ನ್ಯಾಯಾಲಯದ ಆವರಣದಲ್ಲಿ ಗಲಾಟೆ ಮಾಡಿದ ಕಾರಣಕ್ಕೆ ಹಲವರ ಮೇಲೆ ಪ್ರಕರಣ ದಾಖಲಾಗಿದೆ.
ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಶಿರಸ್ತೆದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಾಯಾ ಆರ್. ಅವರು ಮಾ. 27ರಂದು ಸಂಜೆ ಕೋರ್ಟ್ ಆವರಣದಲ್ಲಿ ನೋಡಿದಾಗ ಸುಮಾರು 10ರಿಂದ 20 ಮಂದಿ ಗುಂಪು ಸೇರಿಕೊಂಡಿದ್ದರು. ಅವರನ್ನು ವಿಚಾರಿಸಿದಾಗ ಅವರು ಎಸಿಜೆ ಮತ್ತು ಜೆಎಂಎಸ್ಸಿ ನ್ಯಾಯಾಲಯದ ಪ್ರಕರಣದ ಡೆಲಿವರಿ ವಾರಂಟ್ ಕಾರ್ಯಗತಗೊಳಿಸುವ ಸಂಬಂಧ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯದ ನ್ಯಾಯಾಧೀಶರನ್ನು ಭೇಟಿ ಆಗಲು ಮುಂದಾಗಿರುವುದಾಗಿ ತಿಳಿಸಿದ್ದರು. ಇದಕ್ಕೆ ನ್ಯಾಯಾಧೀಶರ ಅನುಮತಿ ಪಡೆಯದೇ ಯಾರೂ ಭೇಟಿ ಆಗಲು ಸಾಧ್ಯವಿಲ್ಲ ಎಂದು ಮಾಯಾ ತಿಳಿಸಿದ್ದರು. ಇದಕ್ಕೆ ಅವರೆಲ್ಲ ಸೇರಿ ನ್ಯಾಯಾಲಯದ ಆವರಣದ ಮುಂದೆ ಗಲಾಟೆ-ಸೃಷ್ಟಿಸಿ ಗೊಂದಲ ಉಂಟು ಮಾಡಿ ನ್ಯಾಯಾಲಯದ ಕಾರ್ಯಕಲಾಪಗಳಿಗೆ ಅನಗತ್ಯವಾಗಿ ಅಡ್ಡಿಪಡಿಸಿ ಭಯದ ವಾತವಾರಣ ಸೃಷ್ಟಿಸಿದ್ದಾರೆ ಎಂದು ಮಾಯಾ ಅವರು ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ