ಅಜೆಕಾರು, ಫೆಬ್ರವರಿ 5: ಅಜೆಕಾರು ಬಳಿಯ ಪಿ ಕೆರ್ವಾಶೆಯ ಬಂಗ್ಲೆಗುಡ್ಡೆ ಜಂಕ್ಷನ್‌ನಲ್ಲಿ ಇಂದು ಮಧ್ಯಾಹ್ನ ಅಜೆಕಾರು ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಅಜೆಕಾರು ಪೊಲೀಸ್ ಠಾಣೆ ಪಿಎಸ್ಐ ಪ್ರವೀಣ ಕುಮಾರ್ ಆರ್ ಇವರು ತಮ್ಮ ಸಿಬ್ಬಂದಿಯೊಂದಿಗೆ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಕೆರ್ವಾಶೆ ಕಡೆಯಿಂದ ಅತಿವೇಗವಾಗಿ ಬಂದ KA 20 C 3753 ನಂಬ್ರದ ಟಿಪ್ಪರ್ ಲಾರಿಯನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದರು. ಲಾರಿಯನ್ನು ನಿಲ್ಲಿಸಿದ ಚಾಲಕ, ವಾಹನದಿಂದಿಳಿದು ಓಡಿಹೋಗಲು ಯತ್ನಿಸಿದನು. ಪೊಲೀಸರು ಆತನನ್ನು ಹಿಡಿದು ವಿಚಾರಿಸಿದಾಗ ಆತನು ಮರಳು ತುಂಬಿದ ಲಾರಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಲಾರಿಯ ಹಿಂಬದಿ ಭಾಗದಲ್ಲಿ 3 ಯುನಿಟ್ ಮರಳು ತುಂಬಲಾಗಿತ್ತು. ಆರೋಪಿ ಮಾಲಕ ವಿಘ್ನೇಶ ರವರ ಸೂಚನೆಯಂತೆ ಮರಳನ್ನು ಕಳವು ಮಾಡಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದನು. ಈ ಕೃತ್ಯದಲ್ಲಿ ಅವರು ಸಂಘಟಿತ ಅಪರಾಧ ಎಸಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಪಂಚಾಯತುದಾರರ ಸಮ್ಮುಖದಲ್ಲಿ ಲಾರಿಯನ್ನು ವಶಪಡಿಸಿಕೊಳ್ಳಲಾಯಿತು. ವಶಪಡಿಸಿಕೊಂಡ ಮರಳಿನ ಮೌಲ್ಯ ರೂ. 15,000/- ಹಾಗೂ ವಾಹನದ ಮೌಲ್ಯ ಅಂದಾಜು ರೂ. 5,00,000/- ಆಗಬಹುದು ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ