ಮಣಿಪಾಲ, ಫೆಬ್ರವರಿ 5: ಮಣಿಪಾಲದ ಸರಳಬೆಟ್ಟು ಬಳಿ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಕಳುವಾದ ಘಟನೆ ವರದಿಯಾಗಿದೆ. ಪುತ್ತೂರು ಗ್ರಾಮದ ಸಂತೆಕಟ್ಟೆಯ ಪೂರ್ಣಚಂದ್ರ ಎನ್. (23) ಎಂಬುವವರು ತಮ್ಮ ಕಪ್ಪು ಬಣ್ಣದ KA 20 EY 8456 ನೋಂದಣಿ ಸಂಖ್ಯೆಯ ಬೈಕ್ ಅನ್ನು ಫೆಬ್ರವರಿ 3ರ ರಾತ್ರಿ 11 ಗಂಟೆಗೆ ಮಿನಿಮಾರ್ಟ್ ಬಳಿ ನಿಲ್ಲಿಸಿದ್ದರು. ಮಾರನೇ ದಿನ ಮಧ್ಯಾಹ್ನ 1 ಗಂಟೆಗೆ ಬಂದು ನೋಡಿದಾಗ ಬೈಕ್ ಕಾಣೆಯಾಗಿತ್ತು.
ಫೆಬ್ರವರಿ 3ರ ರಾತ್ರಿ 11 ಗಂಟೆಯಿಂದ ಫೆಬ್ರವರಿ 4ರ ಮಧ್ಯಾಹ್ನ 1 ಗಂಟೆಯ ನಡುವೆ ಯಾರೋ ಕಳ್ಳರು ಬೈಕ್ ಕದ್ದಿದ್ದಾರೆ ಎಂದು ಪೂರ್ಣಚಂದ್ರ ದೂರು ನೀಡಿದ್ದಾರೆ. ಕಳುವಾದ ಬೈಕ್‌ನ ಅಂದಾಜು ಮೌಲ್ಯ 1,58,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ