Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

IPL 2025 | ಐಪಿಎಲ್ 2025ರ ವೇಳಾಪಟ್ಟಿ ಬಿಡುಗಡೆ..!

 


ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2025) 18ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟಗೊಂಡಿದೆ. 10 ತಂಡಗಳ ನಡುವಣ ಈ ಕದನವು ಮಾ.22 ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ RCB ನಡುವೆ ನಡೆಯಲಿದ್ದು, ಮೇ.25ರಂದು ಫೈನಲ್ ಮ್ಯಾಚ್ ನಡೆಯಲಿದೆ.

ಒಟ್ಟು ಈ ಟೂರ್ನಿಯಲ್ಲಿ 74 ಪಂದ್ಯಗಳು ನಿಗದಿಯಾಗಿದ್ದು, 12 ಡಬಲ್ ಹೆಡರ್ ಪದ್ಯಂಗಳು ದಿನಕ್ಕೆ ಎರಡರಂತೆ ನಡೆಯಲಿದ್ದು, ಸಾಯಂಕಾಲ 3.30ಕ್ಕೆ ಹಾಗೂ ರಾತ್ರಿ 7.30ಕ್ಕೆ ಪಂದ್ಯಗಳು ಆರಂಭವಾಗಲಿವೆ.

ಕೋಲ್ಕತ್ತದ ಈಡನ್ ಗಾರ್ಡನ್ಸ್ನಲ್ಲಿ ಮೊದಲ ಪಂದ್ಯದ ಮೂಲಕ ಐಪಿಎಲ್ ಉದ್ಘಾಟನೆಯಾಗಲಿದೆ. ಇಲ್ಲೇ ಪೈನಲ್ ಪಂದ್ಯವು ಮುಕ್ತಾಯವಾಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಕೋಲ್ಕತ್ತ ನೈಟ್ ರೈಡರ್ಸ್, ಸನ್ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಖನೌ ಸೂಪರ್ಜೈಂಟ್ಸ್ , ಗುಜರಾತ್ ಟೈಟನ್ಸ್, ಪಂಜಾಬ್ ಕಿಂಗ್ಸ್ ತಂಡಗಳು ಭಾಗವಹಿಸಲಿವೆ.

13 ತಾಣಗಳಲ್ಲಿ ಪಂದ್ಯ ನಡೆಯಲಿದ್ದು, 10 IPL ತಂಡಗಳ ಪೈಕಿ 3 ತಂಡಗಳು ತನ್ನ ತವರು ಪಂದ್ಯಗಳನ್ನು 2 ಮೈದಾನಗಳಲ್ಲಿ ಆಡಲಿವೆ. ಡೆಲ್ಲಿ ಕ್ಯಾಪಿಟಲ್ಸ್ ದೆಹಲಿಯ ಅರುಣ್ ಜೇಟ್ಲಿ ಹೊರತಾಗಿ ವಿಶಾಖಪಟ್ಟಣದಲ್ಲೂ ಹೋಂ ಪಂದ್ಯಗಳನ್ನು ಆಡಲಿವೆ. ಅದರಂತೆಯೇ ರಾಜಸ್ಥಾನ ತಂಡ ಜೈಪುರ ಹೊರತಾಗಿ ಗುವಾಹಟಿಯಲ್ಲೂ, ಇನ್ನು ಪಂಜಾಬ್ ಕಿಂಗ್ಸ್ ಚಂಡೀಗಢದ ಹೊರತಾಗಿ ಧರ್ಮಶಾಲಾ ಕ್ರೀಡಾಂಗಣದಲ್ಲೂ ಹೋಂ ಪಂದ್ಯವನ್ನು ಆಡಲಿದೆ.







0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo