ಹಿರಿಯಡ್ಕ: ಪೇಟೆಯ ಕೆನರಾ ಬ್ಯಾಂಕ್ ಬಳಿ ಶ್ರೀ ಲಕ್ಷ್ಮೀಅನಂತಪದ್ಮನಾಭ ಜ್ಯುವೆಲ್ಲರಿ ವರ್ಕ್ಸ್ ಶಾಪ್‌ನಲ್ಲಿ ಚಿನ್ನಾಭರಣ ರಿಪೇರಿ ಕೆಲಸ ಮಾಡಿಕೊಂಡಿರುವ ರತ್ನಾಕರ (53) ಎಂಬುವವರ ಅಂಗಡಿಯಲ್ಲಿ ಚಿನ್ನಾಭರಣ ಕಳವಾದ ಘಟನೆ ನಡೆದಿದೆ.
ದಿನಾಂಕ 21/02/2025 ರಂದು ಸಂಜೆ 6 ಗಂಟೆಗೆ ನವರತ್ನ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದ ಅಪರಿಚಿತ ವ್ಯಕ್ತಿಯೋರ್ವ, ನವರತ್ನವೊಂದನ್ನು ಖರೀದಿಸಿದ ಬಳಿಕ 100 ಮಿಲಿ ಚಿನ್ನ ತೋರಿಸುವಂತೆ ರತ್ನಾಕರ ಬಳಿ ಕೇಳಿದ್ದಾನೆ. ಚಿನ್ನದ ದರ ವಿಚಾರಿಸುವ ನೆಪದಲ್ಲಿ ಚಿನ್ನಾಭರಣಗಳನ್ನು ಇರಿಸಲಾಗಿದ್ದ ಡ್ರಾವರ್ ಬಳಿ ಬಂದ ಕಳ್ಳ, ರತ್ನಾಕರ ಅವರ ಗಮನಕ್ಕೆ ಬಾರದಂತೆ ಡ್ರಾವರ್‌ನಲ್ಲಿದ್ದ ರಿಪೇರಿಗಾಗಿ ಗ್ರಾಹಕರು ನೀಡಿದ್ದ 22.35 ಗ್ರಾಂ ಚಿನ್ನವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ.
ಈ ಘಟನೆ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ