ಇತಿಹಾಸ ಪ್ರಸಿದ್ಧ ಕಟಪಾಡಿ ಬೀಡು “ಮೂಡು – ಪಡು’ ಜೋಡುಕರೆ ಕಂಬಳ ಕೂಟದ ಫಲಿತಾಂಶ ಪ್ರಕಟವಾಗಿದೆ.
ಕನೆಹಲಗೆ ವಿಭಾಗದಲ್ಲಿ 9 ಜತೆ, ಅಡ್ಡಹಲಗೆ ವಿಭಾಗದಲ್ಲಿ 6 ಜತೆ, ಹಗ್ಗ ಹಿರಿಯ ವಿಭಾಗದಲ್ಲಿ 19 ಜತೆ, ಹಗ್ಗ ಕಿರಿಯ 30 ಜತೆ ನೇಗಿಲು ಹಿರಿಯ ವಿಭಾಗದಲ್ಲಿ 21 ಜತೆ, ನೇಗಿಲು ಕಿರಿಯ ವಿಭಾಗದಲ್ಲಿ 91 ಜತೆ ಸಹಿತ ಒಟ್ಟು 182 ಜತೆ ಕೋಣಗಳು ಭಾಗವಹಿಸಿದ್ದವು.
ಕನೆ ಹಲಗೆ:( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ) ಆದಿ ಉಡುಪಿ ಕೊಡಂಕೂರು ಗಣೇಶ್ ಪ್ರಜ್ವಲ್ ಸುವರ್ಣ, ಹಲಗೆ ಮೆಟ್ಟಿದವರು: ಬೈಂದೂರು ಮಹೇಶ್ ಪೂಜಾರಿ
ಅಡ್ಡ ಹಲಗೆ: ಪ್ರಥಮ ನಾರಾವಿ ಯುವರಾಜ್ ಜೈನ್ (11.79), ಹಲಗೆ ಮೆಟ್ಟಿದವರು: ಭಟ್ಕಳ ಹರೀಶ್, ದ್ವಿತೀಯ ಬೋಳಾರ ತ್ರಿಶಾಲ್ ಕೆ. ಪೂಜಾರಿ (12.64), ಹಲಗೆ ಮೆಟ್ಟಿದವರು: ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ
ಹಗ್ಗ ಹಿರಿಯ: ಪ್ರಥಮ ನಂದಳಿಕೆ ಶ್ರೀಕಾಂತ್ ಭಟ್ “ಎ’ (11.48), ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ. ದ್ವಿತೀಯ ನಂದಳಿಕೆ ಶ್ರೀಕಾಂತ್ ಭಟ್ “ಬಿ’ (11.98), ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ.
ಹಗ್ಗ ಕಿರಿಯ: ಪ್ರಥಮ ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ “ಬಿ’ (11.83), ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ. ದ್ವಿತೀಯ ಬೆಳುವಾಯಿ ಉಮನೊಟ್ಟು ಶಿವರಾಮ ಹೆಗ್ಡೆ (11.93), ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ.
ನೇಗಿಲು ಹಿರಿಯ: ಪ್ರಥಮ ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ (11.52), ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ. ದ್ವಿತೀಯ: ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ (11.62), ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ.
ನೇಗಿಲು ಕಿರಿಯ: ಪ್ರಥಮ ಉಡುಪಿ ಚಿತ್ಪಾಡಿ ಮೇಲ್ಮನೆ ಸದಾನಂದ ಶೆಟ್ಟಿ (11.83), ಓಡಿಸಿದವರು: ಪಟ್ಟೆ ಗುರು ಚರಣ್, ದ್ವಿತೀಯ: ಬೊಮ್ಮರಬೆಟ್ಟು ಜಂಗೊಟ್ಟು ದಿ| ಕಾಳು ಶೆಟ್ಟಿ (11.99), ಓಡಿಸಿದವರು: ಅಜಿಲಮೊಗರು ಗಣೇಶ್.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ