ಮಲ್ಪೆ: ಹೋಮ್ ಸ್ಟೆ ಯೊಂದರಲ್ಲಿ ವ್ಯಕ್ತಿ ಬಿದ್ದಿ ತಲೆಗೆ ಗಾಯವಾಗಿ ಮೃತಪಟ್ಟ ಕುರಿತು ವರದಿಯಾಗಿದೆ. ಮೃತರನ್ನು ಮೈಸೂರಿನ ಅನಿಲ್ ಕುಮಾರ್ (52) ಎನ್ನಲಾಗಿದೆ.
ಮೃತರು ಗೆಳೆಯರೊಂದಿಗೆ ಪ್ರವಾಸಕ್ಕಾಗಿ ಉಡುಪಿಗೆ ಆಗಮಿಸಿದ್ದರು. ಮಲ್ಪೆಯ ಖಾಸಗಿ ಹೋಮ್ ಸ್ಟೇ ನಲ್ಲಿ ರೂಮ್ ಮಾಡಿಕೊಂಡಿದ್ದರು.
ಸುತ್ತಾ ಹೋಮ್ ಸ್ಟೇ ನ ರೂಮ್ ನಲ್ಲಿ ವಿಶ್ರಾಂತಿ ಪಡೆಯುತ್ತಿರುವಾಗ ಅನಿಲ್ ಕುಮಾರ್ ಎಸ್ ರವರು ಮಾತಾನಾಡುತ್ತಾ ಇರುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದು. ಆಗ ಅವರ ತಲೆಯ ಹಿಂಭಾಗ ರಕ್ತ ಗಾಯವಾಗಿದ್ದು, ಅವರನ್ನು ಉಪಚರಿಸಿ ಚಿಕಿತ್ಸೆಗಾಗಿ ಉಡುಪಿ ಆದರ್ಶ ಆಸ್ಪತ್ರೆಗೆ 02:30 ಗಂಟೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಈಗಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 03/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ