ಮಣಿಪಾಲ: ಮಣಿಪಾಲದಲ್ಲಿ ಬಿ.ಕಾಂ ವಿದ್ಯಾರ್ಥಿ ಮನೆಯ ಮೇಲಿನ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಕಾರ್ತಿಕ್ (21) ಎಂದು ಗುರುತಿಸಲಾಗಿದೆ.
ಮಣಿಪಾಲದ D.O.C ಕಾಲೇಜಿನಲ್ಲಿ ಮೂರನೇ ವರ್ಷದ ಬಿ.ಕಾಂ ಅಧ್ಯಯನ ಮಾಡುತ್ತಿದ್ದ ಕಾರ್ತಿಕ್, ಓದು ಮುಗಿಸಿ ಹಾಡು ಕೇಳುವ ಅಭ್ಯಾಸ ಹೊಂದಿದ್ದರು. ಜನವರಿ 12 ರಂದು ಮನೆಯಲ್ಲಿ ಊಟ ಮಾಡಿ ಮೊಬೈಲ್ ಹಿಡಿದುಕೊಂಡು ಮಲಗಲು ಮೇಲಿನ ಮಹಡಿಗೆ ಹೋಗಿದ್ದರು. ಮೇಲಿನ ದಂಡೆಯಲ್ಲಿ ಕುಳಿತು ಹಾಡು ಕೇಳುತ್ತಿದ್ದಾಗ ಕಾಲು ಜಾರಿ ಬಿದ್ದಿದ್ದಾರೆ.
ಗಂಭೀರವಾಗಿ ಗಾಯಗೊಂಡ ಕಾರ್ತಿಕ್ ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜನವರಿ 16 ರಂದು ಬೆಳಗ್ಗೆ 2:40 ಕ್ಕೆ ನಿಧನರಾಗಿದ್ದಾರೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ