ಮಲ್ಪೆ: ಪಡುತೋನ್ಸೆ ಗ್ರಾಮದ ಗುಜ್ಜರಬೆಟ್ಟು ಭೈರವಿ ಹೋಮ್‌ಸ್ಟೇನಲ್ಲಿ ಕೆಲಸದ ವಿಚಾರವಾಗಿ ಉಂಟಾದ ವಾಕ್ಸಮರ ಕೊಲೆ ಯತ್ನಕ್ಕೆ ಕಾರಣವಾಗಿದೆ.
ಶ್ರೀಕಾಂತ ಎಂಬಾತ ಹೋಮ್‌ಸ್ಟೇನ ಮ್ಯಾನೇಜರ್ ಗುರುರಾಜ್‌ನೊಂದಿಗೆ ವಾಗ್ವಾದಕ್ಕೆ ಇಳಿದು ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಅಡುಗೆಮನೆಯಲ್ಲಿದ್ದ ಚಾಕುವಿನಿಂದ ಗುರುರಾಜ್‌ನ ಹೊಟ್ಟೆಯನ್ನು ಇರಿದಿದ್ದಾನೆ.
ಈ ಘಟನೆಯ ಕುರಿತು ಮಾರುತಿ ಎಂಬಾತ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಕಲಂ 352, 109 BNS 2023 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ