Slider

ಬ್ರಹ್ಮಾವರ: ಬ್ಯಾಂಕ್ ಕೆವೈಸಿ ಅಪ್‌ಡೇಟ್ ಮಾಡುವಂತೆ ನಂಬಿಸಿ ಮಹಿಳೆಗೆ ವಂಚನೆ


ಬ್ರಹ್ಮಾವರ: ಉಪ್ಪಿನಕೋಟೆ, ವಾರಂಬಳ್ಳಿ ಗ್ರಾಮದ ಶೋಭಾ (47) ಅವರನ್ನು ಅಪರಿಚಿತರು ಕರೆ ಮಾಡಿ ಕೆನರಾ ಬ್ಯಾಂಕ್ ಹೆಡ್ ಆಫೀಸ್‌ನಿಂದ ಕರೆ ಮಾಡುತ್ತಿದ್ದೇವೆ ಎಂದು ಹೇಳಿ, ಖಾತೆಯ KYC ಬ್ಲಾಕ್ ಆಗಿರುವುದಾಗಿ ತಿಳಿಸಿ OTP ಪಡೆದು ಖಾತೆಯಿಂದ ರೂ. 16,444/- ಹಣವನ್ನು ವಂಚಿಸಿದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.

ಪಿರ್ಯಾದಿಯಾದ ಶೋಭಾ ಅವರು OSCES ಬ್ರಾಂಚ್‌ ಕೆನರಾ ಬ್ಯಾಂಕ್‌ ಬ್ರಹ್ಮಾವರದಲ್ಲಿ ಉಳಿತಾಯ ಖಾತೆ ಹೊಂದಿದ್ದರು. ದಿನಾಂಕ: 25/10/2024 ರಂದು ಮಧ್ಯಾಹ್ನ 1:30 ಗಂಟೆಗೆ ಅಪರಿಚಿತರು ಕರೆ ಮಾಡಿ ಈ ರೀತಿ ವಂಚಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 20/2025 U/S 66 (C), 66 (D) IT ACT ರಂತೆ ಪ್ರಕರಣ ದಾಖಲಾಗಿದೆ.

ಸಾರ್ವಜನಿಕರಿಗೆ ಸಲಹೆ: ಯಾವುದೇ ಸಂದರ್ಭದಲ್ಲಿ ಬ್ಯಾಂಕ್‌ನಿಂದ ಕರೆ ಬಂದಿದೆ ಎಂದು ಹೇಳಿ ನಿಮ್ಮ ವೈಯಕ್ತಿಕ ಮಾಹಿತಿ ಅಥವಾ OTP ಯನ್ನು ಯಾರಿಗೂ ನೀಡಬೇಡಿ. ಯಾವುದೇ ಅನುಮಾನ ಬಂದರೆ ತಕ್ಷಣ ಬ್ಯಾಂಕ್ ಅನ್ನು ಸಂಪರ್ಕಿಸಿ.


0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo