ಉಡುಪಿ: ಶಾಲೆಯೊಂದಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಘಟನೆ ಇಂದು ವರದಿಯಾಗಿದೆ. ಉಡುಪಿ ಜಿಲ್ಲೆಯ ಶಾರದಾ ಇಂಟರ್ ನ್ಯಾಷನಲ್ ವಸತಿ ಶಾಲೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಸೋಮವಾರ ಬೆಳಗ್ಗೆ 9.15ರ ಸುಮಾರಿಗೆ ಇ-ಮೇಲ್ ಪರಿಶೀಲನೆ ವೇಳೆ ಘಟನೆ ಬೆಳಕಿಗೆ ಬಂದಿದೆ.
ಹೀಗೆ ಬಾಂಬ್ ಬೆದರಿಕೆ ಮೇಲ್ ನೋಡಿದ ತಕ್ಷಣವೇ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಬಾಂಬ್ ಸ್ಟ್ರಾಡ್ ಸೇರಿ ಶ್ವಾನ ದಳ ಶಾಲೆ ಆವರಣವನ್ನೆಲ್ಲಾ ಜಾಲಾಡಿದೆ.
ಈ ಶಾಲೆಗೆ ಬಂದಿರುವ ಬಾಂಬ್ ಬೆದರಿಕೆ ಇ-ಮೇಲ್‌ನಲ್ಲಿ ದೇಶದ ವಿವಿಧ ಭಾಗದ ಘಟನೆಗಳನ್ನ ಉಲ್ಲೇಖ ಮಾಡಿರುವ ದುರ್ಷರ್ಮಿಗಳು, ಶಾಲೆ ಬ್ಲಾಸ್ಟ್ ಮಾಡೋದು ಪಕ್ಕಾ ಎಂದು ಬೆದರಿಕೆ ಹಾಕಿರುವ ಬಗ್ಗೆ ಶಾಲೆಯ ಪ್ರಾಂಶುಪಾಲರು ಮಾಹಿತಿ ನೀಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ