ಉಡುಪಿ /ಮಂಗಳೂರು:- ಸ್ಯಾಮ್ಸಂಗ್ ಇಂಡಿಯಾದ ನೀತಿಗಳ ವಿರುದ್ಧ ಚಿಲ್ಲರೆ ವ್ಯಾಪಾರಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಮಂಗಳೂರಿನ ವೆಸ್ಟ್ ಕೋಸ್ಟ್ ಚೇಂಬರ್ಸ್‌ಗೆ ಆಲ್ ಇಂಡಿಯಾ ಮೊಬೈಲ್ ರಿಟೇಲ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯದ ಮೊಬೈಲ್ ಚಿಲ್ಲರೆ ವ್ಯಾಪಾರಿಗಳು ಸ್ಯಾಮ್ಸಂಗ್ ಇಂಡಿಯಾದ ಪ್ರಸ್ತುತ ನೀತಿಗಳಿಂದ ಬಾರಿ ತೊಂದರೆ ಅನುಭವಿಸುತ್ತಿದ್ದಾರೆ ಚಿಲ್ಲರೆ ವ್ಯಾಪಾರಿಗಳು ಸ್ಟಾಕ್ ಪೂರೈಕೆಯಲ್ಲಿ ದೀರ್ಘಕಾಲದ ಅಸಂಗತತೆಯನ್ನು ಎದುರಿಸುತ್ತಿದ್ದು ಇದರಿಂದಾಗಿ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಕಷ್ಟವಾಗುತ್ತಿದೆ, ಇದಕ್ಕೆ ವ್ಯತಿರಿಕ್ತವಾಗಿ ಆನ್ಲೈನ್ ಪ್ಲಾಟ್ಫಾರ್ಮ್ ಗಳು ನಿರಂತರವಾದ ಲಭ್ಯತೆಯನ್ನು ನಿರಂತರವಾಗಿ ನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ಅಧಿಕೃತ ಸೇವಾ ಕೇಂದ್ರಗಳಲ್ಲಿ ಸ್ಯಾಮ್ಸಂಗ್ 25ಸರಣಿಯು ಗೊಂದಲವನ್ನು ಉಂಟು ಮಾಡುತ್ತಿದೆ.
ಈ ನಿಟ್ಟಿನಲ್ಲಿ ಮಂಗಳೂರಿನ ಮಾರ್ಕೆಟ್ ಸ್ಟ್ಯಾಂಡ್ ಬಳಿ ಇರುವ ವೆಸ್ಟ್ ಕೋಸ್ಟ್ ಚೇಂಬರ್ಸ್‌ಗೆ ಆಲ್ ಇಂಡಿಯಾ ಮೊಬೈಲ್ ರಿಟೇಲ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯ ದರ್ಶಿ ಸುಭಾಷ್ ಕಿಣಿ ಮತ್ತು ಡು ಕುಂಬ್ರ ಪ್ರೆಸಿಡೆಂಟ್ ರಾಜೇಶ್ ಮಾ ಬಿಯನ್ ಮತ್ತು ಕಾರ್ಯ ದರ್ಶಿ ಇಮ್ಬ್ರಾನ್ ಅಹ್ಮದ್ ಹಾಗೂ ಎಲ್ಲಾ ಮೊಬೈಲ್ ಶೋಪಿನ ಮಾಲಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ