ಉಡುಪಿ: ನಗರದ ಅಂಬಲಪಾಡಿ ಜಂಕ್ಷನ್ ಬಳಿ ಗಸ್ತು ತಿರುಗುತ್ತಿದ್ದ ಪೊಲೀಸರು ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ವಾಹನವನ್ನು ತಡೆದು ಪರಿಶೀಲಿಸಿದಾಗ, ಟಿಪ್ಪರ್‌ನಲ್ಲಿ 3 ಯುನಿಟ್ ಮರಳು ಇರುವುದು ಕಂಡುಬಂದಿದೆ. ವಾಹನ ಚಾಲಕ ಭರತ್ ಎಂಬಾತನನ್ನು ವಿಚಾರಿಸಿದಾಗ, ರಮೇಶ್ ಎಂಬಾತ ಈ ಟಿಪ್ಪರ್‌ನ ಮಾಲೀಕನಾಗಿದ್ದು, ತನ್ನನ್ನು ಮೂಲ್ಕಿಯ ಮುಕ್ಕ ಬಳಿ ಮರಳು ಲೋಡ್ ಮಾಡಿ ಬ್ರಹ್ಮಾವರಕ್ಕೆ ಸಾಗಿಸುವಂತೆ ರಮೇಶ್ ಸೂಚಿಸಿದ್ದ ಎಂದು ಹೇಳಿದ್ದಾನೆ.
ಪೊಲೀಸರು ಮರಳು ಮತ್ತು ಟಿಪ್ಪರ್ ವಾಹನವನ್ನು ವಶಕ್ಕೆ ಪಡೆದುಕೊಂಡು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ