ಉಡುಪಿ :ಬಡ್ಡಿ ಹಣ ನೀಡದ ಕಾರಣಕ್ಕೆ ಯಕ್ಷಗಾನ ಕಲಾವಿದರೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳು ಜಾಮೀನು ಪಡೆದುಕೊಂಡಿದ್ದಾರೆ.
ಸಸಿಹಿತ್ಲು ಮೇಳದ ಕಲಾವಿದ ನಿತಿನ್ ಆಚಾರ್ಯ ಮೇಲೆ ಪಾವಂಜೆ ಮೇಳದ ಕಲಾವಿದ ಸಚಿನ್ ಹಾಗೂ ಆತನ ತಂದೆ ಕುಶಾಲಣ್ಣ ಮರಣಾಂತಿಕ ಹಲ್ಲೆ ನಡೆಸಿದ್ದರು.
ಈ ಸಂಬಂಧ ಪಡುಬಿದ್ರಿ ಠಾಣೆಯಲ್ಲಿ ಪುಕರಣ ದಾಖಲಾಗಿತ್ತು. ಇದೀಗ ಆರೋಪಿಗಳಾದ ಸಚಿನ್ ಹಾಗೂ ಕುಶಾಲ ನ್ಯಾಯಾಲಯಕ್ಕೆ ಹಾಜರಾಗಿ ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ.
ಇದೇ ವೇಳೆ ಹಲ್ಲೆಗೊಳಗಾಗಿದ್ದ ನಿತಿನ್ ಆಚಾರ್ಯ ವಿರುದ್ಧ ಕಾಪು ಠಾಣೆಯಲ್ಲಿ ಪುತಿ ದೂರು ದಾಖಲಾಗಿದೆ.ನಿತಿನ್ ಆಚಾರ್ಯ ಚಿನ್ನ ತೆಗೆದುಕೊಂಡು ವಾಪಸು ಕೊಟ್ಟಿಲ್ಲ ಎಂದು ಸಚಿನ್ ತಾಯಿ ಕಾಪು ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ. ಪುಕರಣಕ್ಕೆ ಸಂಬಂಧಿಸಿದಂತೆ ಶೀಘ್ರ ಮುಂದಿನ ಕಾನೂನು ಕ್ರಮ ಜರುಗಿಸುವುದಾಗಿ ಉಡುಪಿ ಎಸ್ಪಿ ಡಾ.ಅರುಣ್ ಕೆ. ಹೇಳಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ