ಪ್ರಸ್ತುತ ಸರಕಾರದ ವಿವಿಧ ಯೋಜನೆಗಳಲ್ಲಿ ಶಕ್ತಿ ಯೋಜನೆಯೂ ಒಂದು. ಇದರನ್ವಯ ರಾಜ್ಯದ ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊರತು ಪಡಿಸಿದರೆ ಎಲ್ಲಾ ಜಿಲ್ಲೆಯ ಜನರು ವ್ಯಾಪಕವಾಗಿ ಸರಕಾರಿ ಬಸ್ ಸೌಲಭ್ಯವನ್ನು ಪಡೆಯುತ್ತಿದ್ದಾರೆ.
ಇತ್ತೀಚಿಗೆ ಉಡುಪಿ-ಮಂಗಳೂರಿಗೆ ಹೊಸ ಸರಕಾರಿ ಬಸ್ ಪ್ರಸ್ತಾವನೆಯಾಗಿದ್ದು ಸ್ವಾಗತಾರ್ಹ. ಗ್ರಾಮೀಣ ಭಾಗದಲ್ಲಿರುವ ಕೊಡಿಬೆಟ್ಟು ಈ ಸೌಲಭ್ಯದಿಂದ ವಂಚಿತವಾಗಿದ್ದು, ಆಡಳಿತ ಪಕ್ಷಕ್ಕೆ ಮತ ನೀಡಿದವರಿಗೂ ತಣ್ಣೀರೆರೆಚಿದಂತಾಗಿದೆ! ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರೀಕರು ಸೇರಿದಂತೆ ನೂರಾರು ಪ್ರಯಾಣಿಕರು ತಮ್ಮ ದಿನನಿತ್ಯದ ಕೆಲಸಕ್ಕಾಗಿ ಮಣಿಪಾಲ ಉಡುಪಿ ಕಡೆಗೆ ಪ್ರಾಯಾಣಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರ ಯಾವುದೇ ಆಗಿರಲಿ, ಯಾರದ್ದೇ ಆಗಿರಲಿ ಅದು ಜನರಿಗಾಗಿ, ಜನರಿಗೋಸ್ಕರ; ಅದರ ಯೋಜನೆಯ ಫಲ ಎಲ್ಲರಿಗೂ ದೊರೆಯಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಮುಂದಡಿ ಇಡಬೇಕಾಗಿದೆ. ಕೊಡಿಬೆಟ್ಟು - ಹಿರಿಯಡ್ಕ - ಉಡುಪಿ ಮಾರ್ಗವಾಗಿ ಅಗತ್ಯ ಸರಕಾರಿ ಬಸ್ ವ್ಯವಸ್ಥೆಯನ್ನು ಆರಂಭಿಸುವಂತೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ, ಕ್ಷೇತ್ರದ ಶಾಸಕರಲ್ಲಿ ವಿಷ್ಣುಪ್ರಸಾದ್ ಕೊಡಿಬೆಟ್ಟು ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ