ಮಣಿಪಾಲ: ಹೆರ್ಗಾ ಗ್ರಾಮದ ಉಡುಪಿಯ ಮಿಥುನ್ ಕುಮಾರ್ (34) ಎಂಬವರ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ದೆಹಲಿ ಮೂಲದ ಆಕಾಶ್ (24) ಎಂಬ ಯುವಕನು ತನ್ನ ವಾಸದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜನವರಿ 21ರ ಮುಂಜಾನೆ ನಡೆದಿದೆ.
ಆಕಾಶ್ ಜನವರಿ 21ರ ಮುಂಜಾನೆ 3 ಗಂಟೆಯಿಂದ 6:45 ರ ನಡುವೆ ಈ ಕೃತ್ಯಕ್ಕೆ ಶರಣಾಗಿದ್ದಾನೆ. ಹಾಲ್‌ನ ಜಂತಿಗೆ ಕರ್ಟನ್ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದಾನೆ. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಾಶ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನೀವು ಯಾರಾದರೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ದಯವಿಟ್ಟು ಸಹಾಯ ಪಡೆಯಿರಿ. ಆತ್ಮಹತ್ಯೆ ಯಾವತ್ತೂ ಪರಿಹಾರವಲ್ಲ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ