ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್ ಅವರು ಪ್ರಯಾಗ್‌ರಾಜ್‌ನಲ್ಲಿನ ಪವಿತ್ರ ಸಂಗಮದಲ್ಲಿ ತೀರ್ಥ ಸ್ನಾನ ಮಾಡಿ, ಭಾರತೀಯ ಸಂಸ್ಕೃತಿಯ ವೈವಿಧ್ಯತೆಯನ್ನು ಅನುಭವಿಸಿದ್ದಾರೆ. ನಾಗಾ ಸಾಧುಗಳು ಮತ್ತು ಅಘೋರಿಗಳನ್ನು ಭೇಟಿಯಾಗಿ, ಅವರ ಜೀವನ ಶೈಲಿಯನ್ನು ಸಮೀಪದಿಂದ ನೋಡಿದ್ದಾರೆ.
ತಮ್ಮ ಸ್ನೇಹಿತರ ಜೊತೆ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ ಅವರು, ತೀರ್ಥ ಸ್ನಾನದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, ಅವರು ಅಲ್ಲಿ ಭೇಟಿ ಮಾಡಿದ ನಾಗಾ ಸಾಧುಗಳು ಹಾಗೂ ಅಘೋರಿಗಳ ಚಿತ್ರಗಳನ್ನೂ ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಯುಟಿ ಖಾದರ್, ಕುಂಭಮೇಳದಲ್ಲಿ ಭಾರತ ದೇಶದ ವೈವಿಧ್ಯಮಯ ಸಂಸ್ಕೃತಿಯನ್ನು ನೋಡಲು ಸಾಧ್ಯ. ದೇಶದ ಪ್ರತಿಯೊಂದು ಸ್ಥಳಕ್ಕೆ ಹೋಗಲು ನನಗೆ ಸಾಧ್ಯವಿಲ್ಲದಿದ್ದರೂ, ಕುಂಭಮೇಳದಂಥ ಕಾರ್ಯಕ್ರಮಗಳಲ್ಲಿ ಒಂದೇ ಸ್ಥಳದಲ್ಲಿ ಎಲ್ಲರ ಸಂಸ್ಕೃತಿಯನ್ನು ಕಾಣಬಹುದು, ಎಂದು ಹೇಳಿದ್ದಾರೆ.
ಸಾಧು, ನಾಗಾ ಸಾಧು, ಮತ್ತು ಅಘೋರಿಗಳ ಜೊತೆಗಿನ ತನ್ನ ಅನುಭವವನ್ನು ಹಂಚಿಕೊಂಡಿರುವ ಅವರು, ಕುಂಭಮೇಳವು ಭಾರತೀಯ ಸಂಸ್ಕೃತಿಯ ಗಾಢಚಿತ್ರದಂತೆ ಅನಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ