ಉಡುಪಿ: ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಬಾಗಲಕೋಟೆ ಜಿಲ್ಲೆಯ ಮೂವರು ಮಹಿಳೆಯರು ಗಾಯಗೊಂಡಿದ್ದಾರೆ.
ಘಟನೆ ಹೀಗಿದೆ: ಉದ್ಯಾವರದ ಪೋರ್ಡ್ ಶೋರೂಂ ಬಳಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಬಾಗಲಕೋಟೆ ಜಿಲ್ಲೆಯ ರೇಣುಕಾ (41) ಅವರು ತಮ್ಮ ಸ್ನೇಹಿತೆ ವಿದ್ಯಾ ಮತ್ತು ಅತ್ತೆ ಸೀತವ್ವ ಜೊತೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಉಡುಪಿ ಕಡೆಯಿಂದ ಬಂದ ಕೆಎ-19 ಎಂಕೆ-1598 ನಂಬರ್‌ನ ಕಾರು ಚಾಲಕ ಪ್ರತೀಕ್ ಅವರು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಕಾರನ್ನು ನಿಯಂತ್ರಣ ತಪ್ಪಿಸಿ ಮೂವರು ಮಹಿಳೆಯರಿಗೆ ಡಿಕ್ಕಿ ಹೊಡೆದಿದ್ದಾರೆ.
ಬಲವಾದ ಡಿಕ್ಕಿಯಿಂದ ಮೂವರು ಮಹಿಳೆಯರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ, ತಕ್ಷಣವೇ ಆಟೋರಿಕ್ಷಾದಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಾಯಾಳುಗಳಾದ ರೇಣುಕಾ ಅವರಿಗೆ ಹೊಟ್ಟೆ, ಸೊಂಟ ಮತ್ತು ಎಡಗಾಲಿಗೆ ಗಂಭೀರ ಗಾಯಗಳಾಗಿದ್ದು, ವಿದ್ಯಾ ಅವರಿಗೆ ಎಡಗೈಗೆ ಗಂಭೀರ ಗಾಯ, ಎಡಕಾಲು ಮುರಿತ ಹಾಗೂ ಎಡಹಣೆ ಮತ್ತು ಎಡಹೊಟ್ಟೆಗೆ ಗಾಯಗಳಾಗಿವೆ. ಸೀತವ್ವ ಅವರಿಗೆ ಎಡಕಿವಿಗೆ ಗಾಯಗಳಾಗಿವೆ.
ಈ ಘಟನೆ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ