ಕಾರ್ಕಳ : ನಗರದ ಸಮೀಪ 2 ವರ್ಷಗಳ ಹಿಂದೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ನಡಾಯಿಪಲ್ಕೆ ಎಂಬಲ್ಲಿಯ ಮಹಿಳೆಯೊಂದಿಗೆ ಸ್ನೇಹ ಸಂಪಾದಿಸಿ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಹೊಂದಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಮಹಿಳೆಯು ಗರ್ಭಿಣಿಯಾಗಿದ್ದು ಅನಂತರದಲ್ಲಿ ಆಕೆಯನ್ನು ಮದುವೆಯಾಗಲು ಪ್ರಕರಣದ ಆರೋಪಿ ನವೀನ್ ನಲ್ಕೆ ಎಂಬಾತ ನಿರಾಕರಿಸಿದ್ದಾನೆ ಎಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖಾಧಿಕಾರಿಯವರು ಆರೋಪಿಯನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಿ ಸಂಬಂಧಪಟ್ಟ ಡಿಎನ್ಎ ಪ್ರಯೋಗಾಲಯದ ಅಧಿಕಾರಿಗಳಿಂದ ವರದಿಯನ್ನು ಪಡೆದಾಗ ಆರೋಪಿಯ ಡಿಎನ್ಎ ಹೋಲಿಕೆಯಾಗಿದ್ದರಿಂದ ಚಾರ್ಜ್ ಶೀಟ್ ತಯಾರಿಸಿ ಆರೋಪಿಯ ವಿರುದ್ಧ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಸುಮಾರು 28 ಸಾಕ್ಷಿಗಳ ಪೈಕಿ 18 ಸಾಕ್ಷಿಗಳನ್ನು ವಿಚಾರಣೆ ಮತ್ತು ಪಾಟೀ ಸವಾಲಿಗೆ ಒಳಪಡಿಸಿ ಅನಂತರ ವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಎ. ಸಮೀವುಲ್ಲಾ ಆರೋಪಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿರುತ್ತಾರೆ.
ಆರೋಪಿ ನವೀನ ನಲ್ಕೆ ಪರವಾಗಿ ನ್ಯಾಯವಾದಿ ಕೆ. ವಿನೀತ್ ಕುಮಾರ್ ಮತ್ತು ಸುನೀಲ್ ಕುಮಾರ್ ಹೆಚ್. ವಾದಿಸಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ