ಉಡುಪಿ, ಜನವರಿ 23: ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ನಿಟ್ಟೂರು ಶ್ರೀ ಗಣೇಶ್ ಪ್ರಸಾದ್ ಹೋಟೆಲ್ ಎದುರುಗಡೆ ರಾಹೆ-66ರಲ್ಲಿ ಕಾರು ಮತ್ತು ಸ್ಕೂಟರ್ ನಡುವೆ ಭೀಕರ ಡಿಕ್ಕಿ ಸಂಭವಿಸಿದ ಘಟನೆ ನಡೆದಿದೆ. ಈ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಾಪ್ತ ಮಾಹಿತಿಯ ಪ್ರಕಾರ, ಆರೋಪಿ ಸುದೀರ್ ಎಂಬಾತನು KA19MP4098 ನೇ ಕಾರನ್ನು ದುಡುಕುತನದಿಂದ ಚಲಾಯಿಸಿಕೊಂಡು ಬಂದು ವಿದ್ಯಾ (30) ಕೋಡಿಬೆಂಗ್ರೆ ಪಡುತೋನ್ಸೆ ಗ್ರಾಮ ಇವರು ಸವಾರಿ ಮಾಡುತ್ತಿದ್ದ KA20EV6448 ನೇ ಸ್ಕೂಟರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಅಪಘಾತದಲ್ಲಿ ವಿದ್ಯಾ ಮತ್ತು ಸ್ಕೂಟರ್ ಸವಾರ ವಿರಾಜ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಎರಡೂ ಕೈ ಮತ್ತು ಕಾಲುಗಳಿಗೆ ತೀವ್ರವಾದ ಗಾಯಗಳಾಗಿವೆ.
ಈ ಘಟನೆಯ ಕುರಿತು ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
FOR ADVERTISEMENT CONTACT: 86605 39735
ಜಾಹೀರಾತಿಗಾಗಿ ಸಂಪರ್ಕಿಸಿ: 86605 39735
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ