Slider

ಮಲ್ಪೆ: ಯುವತಿ ಕುಸಿದು ಬಿದ್ದು ‌ಮೃತ್ಯು

 


ಮಲ್ಪೆ: ಯುವತಿಯೊಬ್ಬಳು ಕುಸಿದು ಬಿದ್ದು ಮೃತಪಟ್ಟಿರುವ ಕುರಿತು ವರದಿಯಾಗಿದೆ.ಮೃತ ಯುವತಿ ಪ್ರಮೀಳಾ ಸ್ವೈನ್‌(33) ಎಂದು ಗುರುತಿಸಲಾಗಿದೆ.

ಇವರು ಪೀಡ್ಸ್‌ ಖಾಯಿಲೆಯಿಂದ ಬಳಲುತ್ತಿದ್ದು ಡಿಸೆಂಬರ್ 3 ರಂದು ಬೆಳಗಿನ ಜಾವ 05:30 ಗಂಟೆಗೆ ಸಚಿನ್‌ ರಾವ್‌ ರವರ ಬಾಡಿಗೆ ರೂಮಿನ ಬಳಿ ಇರುವ ಶೌಚಾಲಯದ ಬಳಿ ಕುಸಿದು ಬಿದ್ದವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಟಿ.ಎಂ.ಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಅಲ್ಲಿನ ವೈದ್ಯರು ಪರೀಕ್ಷಿಸಿ, ಪ್ರಮೀಳಾ ರವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮಲ್ಪೆ ಠಾಣಾ ಯುಡಿಆರ್‌ ಕ್ರಮಾಂಕ:01/2025 ಕಲಂ:194 BNSS-2023 ರಂತೆ ಪ್ರಕರಣ ದಾಖಲಿಸಲಾಗಿದೆ

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo