ಉಡುಪಿ : ಸಂವಿಧಾನ ರಕ್ಷಣಾ ಕಾರ್ಯಕ್ರಮ ಸಮಿತಿಯ ಜಿಲ್ಲಾ ಉಸ್ತುವಾರಿ ದೀಪಕ್ ಪೆರ್ಮುದೆ ಯವರು ಉಡುಪಿ ಸರ್ವಿಸ್ ಬಸ್ಟ್ಯಾಂಡ್ ನಲ್ಲಿರುವ ಗಾಂಧಿ ಚೌಕದ ಎದುರು ಜಿಲ್ಲಾ ಕಾಂಗ್ರೆಸ್ ಹಾಗೂ ಸೇವಾದಳ ಜಂಟಿಯಾಗಿ ಹಮ್ಮಿಕೊಂಡ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಸಂವಿಧಾನದ ಮೌಲ್ಯಗಳನ್ನು ಇಲ್ಲವಾಗಿಸುವ ಶಕ್ತಿಗಳನ್ನು ಎದುರಿಸಿ ಸಂವಿಧಾನವನ್ನು ರಕ್ಷಿಸುವ ಸಂಕಲ್ಪ ಮಾಡೋಣ ಎಂದರು ˌ
ಮಾಜಿ ಸಚಿವರು ಹಾಗೂ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ ಕುಮಾರ್ ಸೊರಕೆ ಯವರು ಮಾತನಾಡುತ್ತಾ ಸಂವಿಧಾನದ ಎಲ್ಲಾ ಮೌಲ್ಯಗಳನ್ನು ಕೇಂದ್ರ ಸರ್ಕಾರ ಮೊಟಕು ಗೊಳಿಸುತ್ತಿದೆ ˌ ಸ್ವಾತಂತ್ರ್ಯ ಸಿಕ್ಕಿದ ಮೇಲೆ ಸಂವಿಧಾನ ರಚನೆ ಆದ ಮೇಲೆ ಎಲ್ಲಾ ವರ್ಗದವರಿಗೂ ಅವಕಾಶಗಳು ಸಿಗುವಂತಾಗಿದೆ ಇದು ಕಾಂಗ್ರೆಸ್ ಪಕ್ಷದ ಕೊಡುಗೆ ˌ ಬಿಜೆಪಿಯ ನಾಯಕರಿಂದ ಸಂವಿಧಾನವನ್ನು ಹೀಯಾಳಿಸುವ ಕೆಲಸ ಇತ್ತೀಚೆಗೆ ನಡೆಯುತ್ತಿದೆ ಹಾಗಾಗಿ ಸಂವಿಧಾನದ ರಕ್ಷಣೆಗಾಗಿ ನಾವೆಲ್ಲಾ ಹೋರಾಡಬೇಕಾಗಿದೆ ಎಂದರು ˌ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ˌ ಕೆಪಿಸಿಸಿ ಉಪಾಧ್ಯಕ್ಷರಾದ ˌ ಎಮ್ .ಎ. ಗಪೂರ್ ˌ ಮುಖಂಡರುಗಳಾದ ಭುಜಂಗ ಶೆಟ್ಟಿ ˌ ಪ್ರಸಾದ್ ರಾಜ್ ಕಾಂಚನ್ ˌ ದಿನೇಶ್ ಪುತ್ರನ್ ˌ ಹರೀಶ್ ಕಿಣಿ ˌಭಾಸ್ಕರ ರಾವ್ ಕಿದಿಯೂರು ˌ ಪ್ರಖ್ಯಾತ ಶೆಟ್ಟಿ ˌ ಸದಾಶಿವ ಕಟ್ಟೆಗುಡ್ಡೆ ˌ ಜ್ಯೋತಿ ಹೆಬ್ಬಾರ್ ˌ ಮೀನಾಕ್ಷಿ ಮಾಧವ ಬನ್ನಂಜೆ ˌˌ ಸತೀಶ್ ಕೊಡವೂರು ˌ ಉಧ್ಯಾವರ ನಾಗೇಶ್ ಕುಮಾರ್ ˌ ಜಯಕುಮಾರ್ˌ ಮಾಧವ ಬನ್ನಂಜೆ ˌ ಇಸ್ಮಾಯಿಲ್ ಅತ್ರಾಡಿ ˌ ಚಂದ್ರಿಕಾ ಶೆಟ್ಟಿ ಮಹೇಶ್ ಸುವರ್ಣ ˌ ಲಕ್ಮೀಶ ಶೆಟ್ಟಿ ˌ ರಘಪತಿ ಬಲ್ಲಾಳ್ ˌ ಸೇವಾದಳದ ಮುಖ್ಯಸ್ಥರಾದ ˌಕಿಶೋರ್ ಕುಮಾರ್ ಎರ್ಮಾಳ್ ˌ ಶರತ್ ನಾಯ್ಕ ˌ ಜಗನ್ನಾಥ ಪೂಜಾರಿ ˌ ಪ್ರದೀಪ್ ನಾಯಕ್ ಉಪಸ್ಥಿತರಿದ್ದರು ˌ
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ