ಮಣಿಪಾಲ: ಮಣಿಪಾಲ ಮೆಸ್ಕಾಂ ಉಪವಿಭಾಗದ ಮಣಿಪಾಲ ಶಾಖೆಯ ಕಚೇರಿಯ ಕಂಪೌಂಡ್ ಒಳಗಡೆ ಮೃತದೇಹ ಪತ್ತೆಯಾಗಿದೆ. ಪಶ್ಚಿಮ ಬಂಗಾಳ ಮೂಲದ ರಬಿ ಮಹಾಂತೋ (30) ಎಂಬ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ದಿನಾಂಕ 19/01/2025 ರ ರಾತ್ರಿ 11:00 ಗಂಟೆಯಿಂದ 20/01/2025 ರ ಬೆಳಿಗ್ಗೆ 8:30 ರ ನಡುವೆ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಮೃತರು ಆಕಸ್ಮಿಕವಾಗಿ ಬಿದ್ದಿರಬಹುದು ಅಥವಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಎರಡು ಕೋನಗಳಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 05/2025 ಕಲಂ: 194 ಬಿ.ಎನ್.ಎಸ್.ಎಸ್ ರಂತೆ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ