ಕಾರ್ಕಳ: ಕಸಬಾ ಗ್ರಾಮದ ಶಿವಾನಂದ ವಿ. ಪದ್ಮಶಾಲಿ ಅವರಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚಿಸಿದ ಘಟನೆ ವರದಿಯಾಗಿದೆ.
ಅಪರಿಚಿತ ವ್ಯಕ್ತಿಯು ಮುಂಬಯಿ ಕ್ರೈಂ ಬ್ರ್ಯಾಂಚ್ ಹೆಸರಿನಲ್ಲಿ ಕರೆ ಮಾಡಿ ನಿಮ್ಮ ಮೇಲೆ ಕೇಸು ದಾಖಲಾಗಿದೆ ಎಂದು ಬೆದರಿಸಿದ್ದಾನೆ. 30 ಲಕ್ಷ ರೂ. ಹಣವನ್ನು ನೀವು ಬೇರೆ ಬೇರೆ ಅಕೌಂಟ್ ನಲ್ಲಿ ಮೋಸ ಮಾಡಿದ್ದೀರಿ. ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಬೆದರಿಕೆ ಹಾಕಿ ನಿಮ್ಮ ಅಕೌಂಟ್ ವೆರಿಫೈ ಹಾಗಬೇಕು. ಕೂಡಲೆ ಹಣ ವರ್ಗವಾಣೆ ಮಾಡಬೇಕು ಎಂದು ಹೆದರಿಸಿದ್ದಾನೆ.
ಇದರಿಂದ ಭಯಭೀತರಾದ ಶಿವಾನಂದ ಅವರು ಡಿ.13 ರಿಂದ 17ರವೆರೆಗೆ ವಿವಿಧ ಹಂತಗಳಲ್ಲಿ ಪವನ್ ಕುಮಾರ್ ಗುಜ್ಜರ್ ಖಾತೆಗೆ ಒಟ್ಟು 8.93 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿ ಮೋಸ ಹೋಗಿದ್ದಾರೆ.
ಕಾರ್ಕಳ ನಗರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ