ಬ್ರಹ್ಮಾವರ: ಬ್ರಹ್ಮಾವರದ ನಿವಾಸಿ ದೀಪಶ್ರೀ ಅವರು coinstore ಎಂಬ ಆನ್‌ಲೈನ್ ಟ್ರೇಡಿಂಗ್ ಅಪ್ಲಿಕೇಶನ್ ಮೂಲಕ ವಂಚನೆಗೆ ಒಳಗಾಗಿದ್ದಾರೆ. ಈ ಅಪ್ಲಿಕೇಶನ್ ಬಗ್ಗೆ ಮಾಹಿತಿ ಪಡೆಯಲು ಕರೆ ಮಾಡಿದಾಗ, ಅಪರಿಚಿತ ವ್ಯಕ್ತಿಗಳು ಅವರನ್ನು ಟೆಲಿಗ್ರಾಮ್ ಮೂಲಕ ಸಂಪರ್ಕಿಸಿ, ಹಣ ಹೂಡಲು ಪ್ರೇರೇಪಿಸಿದ್ದಾರೆ.
ದೀಪಶ್ರೀ ಅವರು ಮತ್ತು ಅವರ ತಂಗಿ ಒಟ್ಟು 12,78,640 ರೂಪಾಯಿಗಳನ್ನು ಆರೋಪಿಗಳ ಖಾತೆಗೆ ವರ್ಗಾಯಿಸಿದ್ದಾರೆ. ಆದರೆ, ಯಾವುದೇ ಲಾಭಾಂಶವನ್ನು ಪಡೆಯದೆ ಮೋಸ ಹೋಗಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ