Slider


ಕುಂದಾಪುರ: ಬಸ್ಸಿನಲ್ಲೇ ಹೃದಯಾಘಾತ; ಚಾಲಕನ ಸಮಯ ಪ್ರಜ್ಞೆಗೆ ಮೆಚ್ಚುಗೆ..!

Udupi

 


ಕುಂದಾಪುರ: ನಗರದ ಹೊಸ ಬಸ್‌ ಸ್ಟ್ಯಾಂಡ್‌ ನಿಂದ ಉಡುಪಿ ಕಡೆಗೆ ಹೊರಟಿದ್ದ ಎಕ್ಸ್‌ ಪ್ರೆಸ್ ಬಸ್ ನಲ್ಲಿ ಪ್ರಯಾಣಿಕರೋರ್ವರಿಗೆ ಹೃದಯಾಘಾತವಾದ ಘಟನೆ ನಡೆದಿದೆ.

ಕುಂದಾಪುರದಿಂದ ಉಡುಪಿ ಕಡೆಗೆ ಹೊರಟಿದ್ದ ಸಮತಾ ಬಸ್ಸಿನಲ್ಲಿ ಕುಳಿತಿದ್ದ ಕೋಟ ನಿವಾಸಿ ವೆಂಕಟ್ ಎಂಬವರಿಗೆ ಮುಖ್ಯ ರಸ್ತೆಯ ಶಾಲೆಯೊಂದರ ಎದುರು ತೀವ್ರ ಪ್ರಮಾಣದ ಹೃದಯಾಘಾತದಿಂದ ತನ್ನ ಕಣ್ಣನ್ನು ಮುಚ್ಚಿದ್ದು ಮಾತನಾಡಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡದೇ ಅಸ್ವಸ್ಥರಾಗಿದ್ದರು.

ಇದನ್ನು ಗಮನಿಸಿದ ನಿರ್ವಾಹಕ ತಕ್ಷಣ ಈ ವಿಷಯವನ್ನು ಚಾಲಕ ರಿತೇಶ್ ಗೆ ತಿಳಿಸಿದ್ದು, ಆತ ಬಸ್ಸನ್ನು ನೇರಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲೇ ಇದ್ದ ರಿಕ್ಷಾ ಚಾಲಕರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವೈದ್ಯರು ವೆಂಕಟ್ ಗೆ ಪ್ರಥಮ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣ ಅಂಬುಲೆನ್ಸ್ ನಲ್ಲಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ಬಸ್ ನಿರ್ವಾಹಕ ಮತ್ತು ಚಾಲಕನ ಸಮಯಪ್ರಜ್ಞೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo