ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರು ಹಾಗೂ ಗೂಡಂಗಡಿಗಳ ಮಾಲೀಕರು ತಮಗೆ ಸೂಚಿಸಿದ ಸೀಮಿತ ವಾಪ್ತಿಯನ್ನು ಹೊರತು ಪಡಿಸಿ ಅನಧಿಕೃತವಾಗಿ ಹೆಚ್ಚುವರಿ ಪ್ರದೇಶವನ್ನು ವಿಸ್ತರಣೆ ಮಾಡಿ ಬಳಸಿಕೊಳ್ಳುವಂತಿಲ್ಲ. ಎಲ್ಲಾ ಗೂಡಂಗಡಿಗಳಲ್ಲಿ ಕಡಾ್ಡಯವಾಗಿ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು. ಯಾವುದೇ ಗೂಡಂಗಡಿಗಳು ಸಾರ್ವಜನಿಕರಿಗೆ, ವಾಹನ ಚಾಲಕರಿಗೆ ತೊಂದರೆ ನೀಡುವಂತಿರಬಾರದು, ಫಾಸ್ಟ್ ಫುಡ್ ಅಥವಾ ರಸ್ತೆ ಬದಿಗಳಲ್ಲಿ ಗೂಡಂಗಡಿಗಳ ಮೂಲಕ ಹೋಟೆಲ್ ನಡೆಸುವವರು ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು “ಆಹಾರ ಗುಣಮಟ್ಟತೆ ಮತ್ತು ಸುರಕ್ಷತಾ ಇಲಾೆ”ಯಿಂದ ಪರವಾನಿಗೆ ಪಡೆದಿರಬೇಕು ಹಾಗೂ ಯಾವುದೇ ಗೂಡಂಗಡಿಗಳಲ್ಲಿ ತಂಬಾಕು ಮತ್ತು ಇತರ ಸಂಬಂಧಿತ ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ.
ಬೀದಿ ಬದಿಯಲ್ಲಿ ವ್ಯಾಪಾರಸ್ತರು ಹಾಗೂ ಗೂಡಂಗಡಿ ಮಾಲೀಕರು ನಗರಸಭೆ ಸೂಚಿಸಿರುವ ನಿಯಮವನ್ನು ಪಾಲಿಸದೇ ಇದ್ದಲ್ಲಿ ಅಂತಹ ಗೂಡಂಗಡಿ ಮಾಲೀಕರಿಗೆ 5000 ರೂ. ದಂಡ ವಿಧಿಸಿ, ಗೂಡಂಗಡಿಯನ್ನು ತೆರವುಗೊಳಿಸಿ ಪರವಾನಿಗೆ ರದ್ದುಪಡಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ