Slider

ಉಡುಪಿ: ಹೋಮ್ ನರ್ಸ್‌ಗಳಿಂದ ಲಕ್ಷಾಂತರ ರೂಪಾಯಿ ವಂಚನೆ: ಪ್ರಕರಣ ದಾಖಲು

Udupi


ಉಡುಪಿ : ಹೋಮ್ ನರ್ಸ್ ಕೆಲಸಕ್ಕೆ ಬಂದ ಆರೋಪಿಗಳು ಗೂಗಲ್ ಪೇ ಪಿನ್ ಪಡೆದು ಲಕ್ಷಾಂತರ ರೂ. ಹಣ ವರ್ಗಾವಣೆ ಮಾಡಿ ವಂಚಿಸಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರತ್ನಾಕರ ಎಂಬಾತನ ಅಲೈಟ್‌ಕೇರ್ ಎಂಬ ಸಂಸ್ಥೆಯ ಮೂಲಕ ಕಾರ್ತಿಕ ಎಂಬಾತ ಕಾರ್ಕಳದ ಶಶಿಧರ್ ಎಂಬವರ ಮನೆಗೆ ಹೊಂ ನರ್ಸ್ ಕೆಲಸಕ್ಕೆ ಬಂದಿದ್ದು, ನ.9ರಂದು ರತ್ನಾಕರ್, ಶಶಿಧರ್‌ಗೆ 10,000ರೂ. ನಗದು ಹಣ ನೀಡಿ ಒತ್ತಾಯ ಪೂರ್ವಕವಾಗಿ ಕಾರ್ತಿಕ್ ಖಾತೆಗೆ ಗೂಗಲ್ ಪೇ ಮಾಡಿಸಿದ್ದನು. ಈ ವೇಳೆ ಗೂಗಲ್ ಪೇ ಪಿನ್ ನಂಬರ್ ನೋಡಿದ್ದ ರತ್ನಾ ಕರ್, ನ.10ರಿಂದ ಡಿ.8ರವರೆಗೆ ಶಶಿಧರ್ ಅವರ ಬ್ಯಾಂಕ್ ಖಾತೆಯಿಂದ ಗೂಗಲ್ ಪೇ ಮುಖಾಂತರ 9,80,000ರೂ. ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿ ಮೋಸ ಮಾಡಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo