Slider

ಉಡುಪಿ ಶ್ರೀಕೃಷ್ಣ ಮಠಕ್ಕೆ RSS ಸರಸಂಘಚಾಲಕರಾದ ಮೋಹನ್ ಭಾಗವತ್ ಭೇಟಿ : ಪರ್ಯಾಯ ಶ್ರೀಗಳ ಜೊತೆ ಚರ್ಚೆ

Udupi


 ಉಡುಪಿ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕರಾದ ಡಾ.ಮೋಹನ ಭಾಗವತ್ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಗೌರವ ಅದರೊಂದಿಗೆ ಭಾಗವತ್ ಅವರನ್ನು ಬರಮಾಡಿಕೊಂಡರು.

ಉಡುಪಿಯ ಶ್ರೀ ಕೃಷ್ಣ, ಮುಖ್ಯಪ್ರಾಣ ದೇವರನ್ನು ಕಂಡು ಪ್ರಾರ್ಥನೆ ಸಲ್ಲಿಸಿದ ಬಳಿಕ, ಗೀತಾ ಮಂದಿರದಲ್ಲಿ ಕಿರು ಸಭೆ ಏರ್ಪಾಟಾಗಿದ್ದು, ಈ ಸಭೆಯಲ್ಲಿ ಪರ್ಯಾಯ ಮಠದ ವತಿಯಿಂದ ಮೋಹನ್ ಭಾಗವತ್ ಅವರನ್ನು ಗೌರವಿಸಲಾಯಿತು. ಪರ್ಯಾಯ ಮಠವು ಹಮ್ಮಿಕೊಂಡಿರುವ ಕೋಟಿಗೀತಾ ಲೇಖನ ಯಜ್ಞದ ಬಗ್ಗೆ ಮೋಹನ್ ಭಾಗವತ್ ಅವರಿಗೆ ವಿವರಣೆ ನೀಡಿದ ಶ್ರೀಗಳು ಧರ್ಮ ಹಾಗೂ ದೇಶದ ಆಗುಹೋಗುಗಳ ಬಗ್ಗೆ ಕೆಲಕಾಲ ವಿಚಾರ ವಿನಿಮಯ ನಡೆಸಿದರು. ಭಾಗವತ್ ಅವರ ಈ ಪೂರ್ವ ನಿರ್ಧರಿತ ಭೇಟಿಯ ಹಿನ್ನೆಲೆಯಲ್ಲಿ ಕೃಷ್ಣ ಮಠಕ್ಕೆ ವಿಶೇಷ ಭದ್ರತೆ ನೀಡಲಾಗಿತ್ತು. ಸುಮಾರು ಒಂದು ಗಂಟೆಗಳ ಕಾಲ ಭಾಗವತ್ ಶ್ರೀ ಕೃಷ್ಣ ಮಠದಲ್ಲಿ ಕಳೆದರು.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo